ರಾಷ್ಟ್ರೀಯ
ಮೋದಿ-ಯೋಗಿ ನಡುವೆ ಮುಸುಕಿನ ಗುದ್ದಾಟ; ಜಾಲತಾಣಗಳಲ್ಲಿ ಬಹಿರಂಗ

ಪಿಎಂ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಸಿಎಂ ಆದಿತ್ಯನಾಥ್ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ಉತ್ತರಪ್ರದೇಶ ಬಿಜೆಪಿಯ ಟ್ವಿಟರ್ ಕವರ್ ಫೋಟೋದಲ್ಲಿ ಪ್ರಧಾನಿ ನರೇಂದ್ರ ಮೋದಿಯ ಫೋಟೋ ತೆಗೆದುಹಾಕಲಾಗಿದೆ.
ಜೂ.5ರಂದು ಮೋದಿ ಯೋಗಿಗೆ ಜನ್ಮ ದಿನದ ಶುಭಾಶಯ ತಿಳಿಸಿರಲಿಲ್ಲ ಹೀಗೆ ಜಾಲತಾಣಗಳಲ್ಲಿ ಇಬ್ಬರ ಜಗಳ ಒಳಗೊಳಗೇ ತಾರಕಕ್ಕೇರಿರುವುದು ತಿಳಿಯುತ್ತದೆ.
ಕವರ್ ಫೋಟೋದಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕರೆಲ್ಲರನ್ನೂ ಕಡೆಗಣಿಸಿ ಯೋಗಿಯ ಜತೆ ರಾಜ್ಯದ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಮತ್ತು ಸ್ಥಳೀಯ ನಾಯಕರಿಬ್ಬರ ಫೋಟೋ ಹಾಕಲಾಗಿದೆ.
ಇದಲ್ಲದೆ ಮಾಜಿ ಐಎಎಸ್ ಅಧಿಕಾರಿ ಗುಜರಾತ್ನ ಅರವಿಂದ ಶರ್ಮಾ ಮೋದಿಯ ಆಪ್ತರಾಗಿದ್ದು ಯುಪಿಯ ಡಿಸಿಎಂ ಮಾಡಬೇಕೆಂದು ಮೋದಿ ಬಯಸಿದ್ದರು. ಆದರೆ ಇದಕ್ಕೆ ಯೋಗಿ ನಿರಾಕರಿಸಿದ್ದಾರೆ. ಹೀಗಾಗಿ ಮೋದಿ-ಯೋಗಿ ನಡುವಿನ ಶೀಥಲ ಸಮರದ ಬಗ್ಗೆ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಆರಂಭವಾಗಿವೆ.