100ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಕಳ್ಳಭಟ್ಟಿ ದುರಂತ; ಆರೋಪಿ ಬಿಜೆಪಿ ಮುಖಂಡ ರಿಶಿ ಶರ್ಮಾ ಬಂಧನ

ಉತ್ತರ ಪ್ರದೇಶ: 100ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಉತ್ತರ ಪ್ರದೇಶದ ಕಳ್ಳಭಟ್ಟಿ ದುರಂತದ, ಆರೋಪಿ ಬಿಜೆಪಿ ಮುಖಂಡ ರಿಶಿ ಶರ್ಮಾನನ್ನು ಬುಲಂದ್ ಶಹರ್ ನಲ್ಲಿ ಪೋಲೀಸರು ಬಂಧಿಸಿದ್ದಾರೆ.
ಕಳ್ಳಭಟ್ಟಿ ಕುಡಿದು ಸುಮಾರು 100ಕ್ಕೂ ಹೆಚ್ಚು ಜನ ಉತ್ತರಪ್ರದೇಶದ ಅಲಿಗಢ್ ನಲ್ಲಿ ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ, ಬಿಜೆಪಿ ಮುಖಂಡ ರಿಶಿ ಶರ್ಮಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ 10 ದಿನಗಳ ಹಿಂದೆ ದುರಂತ ಸಂಭವಿಸಿದ್ದು ಅಂದಿನಿಂದ ಆರೋಪಿ ನಾಪತ್ತೆಯಾಗಿದ್ದ . ಆತನ ಸುಳಿವು ನೀಡಿದವರಿಗೆ 1ಲಕ್ಷ ರೂ. ಬಹುಮಾನವನ್ನೂ ಘೋಷಿಸಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲೀಸರು ಉತ್ತರಾಖಂಡ, ರಾಜಸ್ಥಾನ, ದಿಲ್ಲಿ, ಹರ್ಯಾಣ ಮತ್ತು ಉತ್ತರಪ್ರದೇಶಗಳಲ್ಲಿ ಆರೋಪಿಗಾಗಿ ಹುಡುಕಾಟ ನಡೆಸಿದ್ದರು. 500 ಕ್ಕೂ ಹೆಚ್ಚು ಕಾಲ್ ರೆಕಾರ್ಡಿಂಗ್ ಗಳನ್ನು ಪರಿಶೀಲನೆ ನಡೆಸಿದ್ದರು. ರಿಶಿ ಶರ್ಮಾನನ್ನು ಬಂದಿಸಲು ಆರು ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು ಎಂದು ಮೂಲಗಳಿಂದ ತಿಳಿದು ಬಂದಿದೆ.