ರಾಷ್ಟ್ರೀಯ
ಮನೆಗೆ ಪಿಜ್ಜಾ ತಲುಪಿಸಬಹುದಾದರೆ ಪಡಿತರ ಏಕೆ ಬೇಡ?; ಕೇಂದ್ರದ ವಿರುದ್ಧ ಕೇಜ್ರಿವಾಲ್ ಕಿಡಿ

ನವದೆಹಲಿ: ಮನೆಗೆ ಪಿಜ್ಜಾ ತಲುಪಿಸುವುದು ಸರಿಯೆಂದಾದರೆ, ಪಡಿತರವನ್ನು ಯಾಕೆ ತಲುಪಿಸಬಾರದು ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
ತಮ್ಮ ಸರ್ಕಾರ ಘೋಷಿಸಿದ್ದ ಮನೆಮನೆಗೆ ಪಡಿತರ ಯೋಜನೆಗೆ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ತಡೆ ನೀಡಿದ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಯೋಜನೆಗೆ ಸರ್ಕಾರ ಪೂರ್ವಾನುಮತಿ ಪಡೆದಿಲ್ಲ ಎಂದು ಗವರ್ನಲ್ ನೀಡಿರುವ ಕಾರಣದ ಬಗ್ಗೆ ಪ್ರತಿಕ್ರಿಯಿಸಿದ ಕೇಜ್ರಿವಾಲ್, ಕಾನೂನಿನ ಪ್ರಕಾರ ಈ ರೀತಿಯ ಯೋಜನೆಗಳಿಗೆ ಅನುಮತಿಯನ್ನು ಪಡೆಯುವ ಅವಶ್ಯಕತೆಯಿಲ್ಲದಿದ್ದರೂ ಕೇಂದ್ರ ಸರ್ಕಾರದ ಬಳಿ ನಾವು ಐದು ಬಾರಿ ಅನುಮತಿಯನ್ನು ಕೇಳಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಪಡಿತರ ಮಾಫಿಯಾ ವಿರುದ್ಧ ಮೊದಲ ಬಾರಿಗೆ ದೆಹಲಿ ಸರ್ಕಾರ ಹೆಜ್ಜೆಯನ್ನಿಟ್ಟಿತ್ತು. ಆದರೆ ಆ ಮಾಫಿಯಾ ಎಷ್ಟು ಬಲಿಷ್ಟವಾಗಿದೆಯೆಂದರೆ, ಯೋಜನೆ ಜಾರಿಗೆ ಬರುವುದನ್ನು ರದ್ದುಗೊಳಿಸಲಾಗಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ. scheme-224373.html