ರಾಷ್ಟ್ರೀಯ
ಗವರ್ನರ್ ವಿರುದ್ಧದ ಕದನ: ಮಮತಾ ಬ್ಯಾನರ್ಜಿಗೆ ಎಡಪಕ್ಷ ಬೆಂಬಲ

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಸಿಂ ಮಮತಾ ಬ್ಯಾನರ್ಜಿ ಮತ್ತು ಗವರ್ನರ್ ಜಗದೀಪ್ ಧನಕರ್ ನಡುವಿನ ಕದನ ತೀವ್ರ ಸ್ವರೂಪ ಪಡೆದಿರುವಾಗಲೇ ಎಡಪಕ್ಷಗಳು ಕೂಡ ಈಗ ಮಮತಾ ಪರವಾಗಿ ನಿಂತು, ಗವರ್ನರ್ ನಡೆಯನ್ನು ಟೀಕಿಸಿವೆ.
ಮಮತಾ ಬ್ಯಾನರ್ಜಿ ಅವರಿಗೆ ಇದು ಅನಿರೀಕ್ಷಿತವಾಗಿ ದೊರಕಿರುವ ಬೆಂಬಲ.
ಬಿಜೆಪಿಯ ಮಯಖವಾಣಿಯಂತೆ ಗವರ್ನರ್ ವರ್ತಿಸುತ್ತಿದ್ದಾರೆ ಎಂದು ಪ್ರಮುಖ ಎಡಪಕ್ಷ ನಾಯಕರೊಬ್ಬರು ಟೀಕಿಸಿದ್ದು, ಗವರ್ನರ್ ತೋರುತ್ತಿರುವ ಪಕ್ಷಪಾತ ಧೋರಣೆಯನ್ನು ಖಂಡಿಸಿದ್ದಾರೆ.
ಒಂದು ಪಕ್ಷಕ್ಕೆ ಸಂಬಮಧಪಟ್ಟವರಂತೆ ನಡೆದುಕೊಳ್ಳುವುದು ಗವರ್ನರ್ ಹುದ್ದೆಗೆ ತಕ್ಕುದಲ್ಲ. ಅವರು ತನ್ನನ್ನು ತಾನು ಬಿಜೆಪಿಯವರೆಂಬಂತೆ ಭಾವಿಸಿ ವರ್ತಿಸುತ್ತಿದ್ದಾರೆ. ಇದು ಸರಿಯಲ್ಲ ಎಂದು ಅವರು ಹರಿಹಾಯ್ದಿದ್ದಾರೆ.
ಚುನಾವಣೋತ್ತರ ಹಿಂಸಾಚಾರದ ಬಳಿಕ ಪಶ್ಚಮ ಬಂಗಾಳ ಗವರ್ನರ್ ಸರಣಿ ಸಭೆ ನಡೆಸುತ್ತಿದ್ದು, ಮಮತಾ ಸರ್ಕಾರದ ವಿರುದ್ಧ ಸಮರಕ್ಕ ನಿಂತಂತೆ ನಿಂತಿರುವುದು ಕೆಲ ದಿನಗಳಿಂದ ಕಂಡುಬರುತ್ತಿದೆ.