ಅಧಿಕಾರಿಯನ್ನು ಗುರಿಯಾಗಿಸಿರುವುದು ಮೋದಿ, ಶಾ ಸೇಡಿನ ನಡೆ; ಮಮತಾ ಬ್ಯಾನರ್ಜಿ ಆರೋಪ

ಕೇಂದ್ರದ ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಕ್ರೋಶ ಮುಂದುವರಿದಿದೆ. ರಾಜ್ಯ ಮುಖ್ಯ ಕಾರ್ಯದರ್ಶಿ ಆಲಾಪನ್ ಬಂಡೋಪಾಧ್ಯಾಯ ಅವರನ್ನು ವಾಪಸ್ ಕರೆಸಿಕೊಳ್ಳುವ ಕೇಂದ್ರದ ನಿರ್ಧಾರವನ್ನು ಪಕ್ಕಾ ಸೇಡಿನ ಕ್ರಮ ಎಂದು ಮಮತಾ ಟೀಕಿಸಿದ್ದಾರೆ.
ಮೋದಿ ಮತ್ತು ಅಮಿತ್ ಶಾ ಇಬ್ಬರೂ ಸೇಡಿನ ಭಾಗವಾಗಿ ನಮ್ಮ ಅಧಿಕಾರಿಯನ್ನು ಗುರುಯಾಗಿಸಿದ್ದಾರೆ ಎಂದು ಮಮತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ತೃಣಮೂಲ ಕಾಂಗ್ರೆಸ್ನ ಇತರ ನಾಯಕರೂ ಪ್ರತಿಕ್ರಿಯಿಸಿದ್ದು, ಅಧಿಕಾರಿಯೊಬ್ಬರ ಪರವಾಗಿ ಕೇಂದ್ರದ ವಿರುದ್ಧ ಹೋರಾಟ ನಡೆಸುತ್ತಿರುವ ಸಂದರ್ಭ ಮಮತಾ ವಅರಿಗೇ ಇದೇ ಮೊದಲಲ್ಲ. ಮತ್ತು ಅವರ ಹೋರಾಟ ವಿನಾಕಾರಣದ್ದಲ್ಲ ಎಂದಿದ್ದಾರೆ.
ಕಳೆದ 10 ವರ್ಷಗಳ ಅವಧಿಯಲ್ಲಿ ಅನೇಕ ಬಾರಿ ಅವರು, ಕೇಂದ್ರ ಸೇವೆಗೆ ರಾಜ್ಯದ ಅಧಿಕಾರಿಗಳನ್ನು ಕಳಿಸಲು ನಿರಾಕರಿಸಿದ್ದಾರೆ, ಒಂದು ಸಂದರ್ಭದಲ್ಲಂತೂ ರಾಜ್ಯದಲ್ಲಿನ ಖಾಲಿ ಇರುವ ಹುದ್ದೆಗಳ ಕುರಿತ ಅಂಕಿಅಂಶವನ್ನು ತೋರಿಸಿ, ಕೇಂದ್ರ ಸೇವೆಗೆ ರಾಜ್ಯದ ಅಧಿಖಾರಿಗಳನ್ನು ಕರೆಸಿಕೊಳ್ಳದಿರುವಂತೆ ಒತ್ತಾಯಿಸಿದ್ದರು ಎಂದಿದ್ದಾರೆ.
ಈ ಮಧ್ಯೆ, ರಾಜ್ಯ ಮುಖ್ಯ ಕಾರ್ಯದರ್ಶಿ ಅಲಾಪನ್ ಬಂಡೋಪಾಧ್ಯಾಯ ಅವರನ್ನು ವಾಪಸ್ ಕರೆಸಿಕೊಳ್ಳುವ ಆದೇಶವನ್ನು ಹಿಂಪಡೆಯುವಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಕೋರಿದ್ದಾರೆ.
ಅವರು ಪ್ರಧಾನ ಮಂತ್ರಿಗೆ ಬರೆದ ಪತ್ರದಲ್ಲಿ ಈ ಮನವಿ ಮಾಡಿದ್ದಾರೆ ಮತ್ತು ಅವರ ಸರ್ಕಾರವು ಉನ್ನತ ಅಧಿಕಾರಿಗಳನ್ನು ಬಿಡುಗಡೆ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾಋಎ.
ಪರಸ್ಪರ ಲಿಖಿತ ಸಮಾಲೋಚನೆ ನಂತರವೇ ರಾಜ್ಯದಲ್ಲಿ ಬ್ಯಾಂಡೋಪಾಧ್ಯಾಯ ಅವರ ಸೇವೆಯನ್ನು ಇತ್ತೀಚೆಗೆ ಮೂರು ತಿಂಗಳು ವಿಸ್ತರಿಸಲಾಯಿತು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ರಾಜ್ಯ ಸರ್ಕಾರದೊಂದಿಗೆ ಯಾವುದೇ ಪೂರ್ವ ಸಮಾಲೋಚನೆ ಇಲ್ಲದದೇ ಈ ಆದೇಶ ಹೊರಡಿಸಿರುವುದು ಆಘಾತ ಮತ್ತು ದಿಗ್ಭ್ರಮೆ ತಂದಿದೆ ಎಂದೂ ಹೇಳಿರುವ ಅವರು, ಕೋವಿಡ್ ಬಿಕ್ಕಟ್ಟಿನ ಈ ಹೊತ್ತಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಆದೇಶ ಹಿಂತೆಗೆದುಕೊಳ್ಳುವಂತೆ ಪ್ರಧಾನಿಯನ್ನು ವಿನಂತಿಸಿದ್ದಾರೆ.