ರಾಷ್ಟ್ರೀಯ
ಲಕ್ಷದ್ವೀಪದಲ್ಲಿ ನೀರಿನೊಳಗೆ ಪ್ರತಿಭಟನೆ!

ಲಕ್ಷದ್ವೀಪದಲ್ಲಿ ಅಳವಡಿಸಲಾದ ಹೊಸ ನಿಯಮಗಳನ್ನು ವಿರೋಧಿಸಿ ಕೆಲವು ನಿವಾಸಿಗಳು ನೀರಿನಡಿಯಲ್ಲಿ ಮುಳುಗಿ ಪ್ರತಿಭಟನಾ ಫಲಕಗಳನ್ನು ಪ್ರದರ್ಶಿಸಿದ್ದಾರೆ.
ಅರೇಬಿಯನ್ ಕಡಲಿನ ದ್ವೀಪಗಳಿಗೆ ಅಳವಡಿಸಿರುವ ವಿವಾದಾತ್ಮಕ ನಿಯಮಗಳನ್ನು ವಿರೋಧಿಸಿ ಸೋಮವಾರ 12 ಗಂಟೆಗಳ ಉಪವಾಸ ಮುಷ್ಕರ ನಡೆಸಿರುವ ನಿವಾಸಿಗಳಲ್ಲಿ ಕೆಲವರು ತಮ್ಮ ಮನೆಗಳ ಹೊರಗೆ, ಮತ್ತೆ ಕೆಲವರು ನೀರಿನಾಳದಲ್ಲಿ ಫಲಕಗಳನ್ನು ಹಿಡಿದು ಈಜುತ್ತ ಪ್ರತಿಭಟನೆ ನಡೆಸಿದ್ದಾರೆ.
ಹೊಸ ನಿಯಮಗಳನ್ನು ಹೊಂದಿದ ಲಕ್ಷದ್ವೀಪ ಅಭಿವೃದ್ಧಿ ಪ್ರಾಧಿಕಾರದ ನಿಯಮಗಳು ದ್ವೀಪಗಳ ಆಹಾರ ಪದ್ಧತಿ ಸಹಿತ ವಿಶಿಷ್ಟ ಸಂಸ್ಕೃತಿ ಹಾಗೂ ಸಂಪ್ರದಾಯಗಳನ್ನು ನಾಶಪಡಿಸುತ್ತದೆ ಎಂಬ ಆಕ್ರೋಶ ವ್ಯಕ್ತಪಡಿಸಿ ಅಲ್ಲಿನ ನಿವಾಸಿಗಳು ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ.