ರಾಷ್ಟ್ರೀಯ

ಆಹಾರ ಹಂಚಲು ಹೋಗುತ್ತಿರುವ ವಾಹನದ ಹಿಂದೆ ಹಸಿದವರ ಓಟ; ಮನ ಕಲಕುವ ಕಥೆ

ಕೊರೊನಾ ಮೊದಲನೆ ಅಲೆಯಲ್ಲಿ ಆಳುವ ಸರ್ಕಾರ ತಟ್ಟೆ, ಜಾಗಟೆ, ಗಂಟೆ , ಚಪ್ಪಾಳೆ, ದೀಪ ಗಳಲ್ಲಿ ಜನರ ಗಮನ ಬೇರೆಡೆಗೆ ಸೆಳೆದು ದಿನ ಕಳೆದರೆ, ಎರಡನೇ ಅಲೆಯಲ್ಲಿ ಚುನಾವಣೆಯಲ್ಲಿ ಮೈಮರೆತು ದೇಶದಾದ್ಯಂತ ಕೊರೊನಾ ವ್ಯಾಪಕವಾಗಿ ಹರಡುತ್ತಿದ್ದರು ತಜ್ಞರ ಎಚ್ಚರಿಕೆಗಳನ್ನು ಕಡೆಗಣಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ ಇರುವುದು ಕೊರೋನ ಹೆಚ್ಚಾಗಲು ಕಾರಣ ಮತ್ತು ಲಸಿಕೆಗಳನ್ನು ವಿದೇಶಗಳಿಗೆ ಕಳಿಸಿ ದೇಶದ ಜನರ ಪ್ರಾಣದ ಜೊತೆಗೆ ಚೆಲ್ಲಾಟವಾಡಿದೆ ಎಂದು ಜನ ಹಿಡಿಶಾಪ ಹಾಕುತ್ತಿರುವ ನಡುವೆಯೇ ವಲಸೆ ಕಾರ್ಮಿಕರು ದಿನಕೂಲಿ ನೌಕರರು ಕೊರೋನ ಸೋಂಕಿತರಾಗಿ ಸಾಯುವ ಮೊದಲು ಹಸಿವಿನಿಂದ ನಾವು ಸಾಯುತ್ತೇವೆ ಎಂದು ತಮ್ಮ ಅಸಹಾಯಕತೆಯನ್ನು ತೋಡಿಕೊಳ್ಳುತ್ತಿದ್ದಾರೆ.

ಕಳೆದ ವರ್ಷ ಉಳ್ಳವರು ರಾಜಕೀಯ ಪಕ್ಷಗಳು ಮುಖಂಡರುಗಳು ಆಹಾರದ ಕಿಟ್‌ಗಳನ್ನು ಹಂಚುತ್ತಿದ್ದರು ಆದರೆ ಈ ಬಾರಿ ಅವರುಗಳು ಕೂಡ ಬಡ ಜನರಿಂದ ಅಂತರ ಕಾಯ್ದುಕೊಂಡು ಮನೆಯೊಳಗೆ ಉಳಿದಿದ್ದಾರೆ.

ಇದರಿಂದಾಗಿ ಬಡ ಜನರು ಎಂತಹ ಕಷ್ಟದ ಪರಿಸ್ಥಿತಿಯಲ್ಲಿ ದಿನ ಕಳೆಯುತ್ತಿದ್ದಾರೆಂದರೆ. ರಾಷ್ಟ್ರದ ರಾಜಧಾನಿ ದೆಹಲಿಯ ರಸ್ತೆಯಲ್ಲಿ ವಿಡಿಯೋದಲ್ಲಿ ಕಾಣುತ್ತಿರುವ ಜನ ಓಡುತ್ತಿರುವುದು ಯಾವುದೋ ಮ್ಯಾರಥಾನ್ ಓಟವಲ್ಲ ಆಹಾರ ಹಂಚುತ್ತಾ ಹೋದ ವ್ಯಾನ್ ಒಂದರ ಹಿಂದೆ ಹಸಿವು ನೀಗಿಸಲು ಓಡುತ್ತಿರುವ ಬಡವರು, ದಿನ ಕೂಲಿ ಕಾರ್ಮಿಕರು.

ಪರಿಸ್ಥಿತಿ ಇದೆ ರೀತಿ ಮುಂದುವರಿದರೆ ಜನರ ಬಗೆಗೆ ಕರುಣೆ ಇಲ್ಲದ ಸರ್ಕಾರಗಳ ನೀತಿಯಿಂದ ಮುಂದಿನ ದಿನಗಳಲ್ಲಿ ವೆಂಟಿಲೇಟರ್, ಆಕ್ಸಿಜನ್ ಔಷಧೀಗಳ ಕೊರತೆಗಳಿಂದ ಕೇಳುತ್ತಿದ್ದ ಸಾವಿನ ಸುದ್ದಿಗಳು ಹಸಿವಿನಿಂದ ಸತ್ತರು ಎಂಬಲ್ಲಿಗೆ ಬದಲಾಗಬಹುದೆಂದು ಹಿರಿಯರು ತಿಳಿದವರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರಗಳ ಅಂಗಳದಲ್ಲೇ ಇಂತಹ ಸ್ಥಿತಿ ನಿರ್ಮಾಣವಾಗಿದೆ ಎಂದರೆ‌ ಮುಂದಿನ ದಿನಗಳಲ್ಲಿ ಉಳಿದ ಪ್ರದೇಶಗಳ ಸ್ಥಿತಿ ಊಹಿಸಲು ಕಷ್ಟ.

Spread the love

Related Articles

Leave a Reply

Your email address will not be published. Required fields are marked *

Back to top button