ರಾಜ್ಯ

ಕವಿ ಸಿದ್ದಲಿಂಗಯ್ಯ ನಿಧನಕ್ಕೆ ಗಣ್ಯರ ಸಂತಾಪ

ಮುಖ್ಯಮಂತ್ರಿ ಬಿಎಸ್​ವೈ ಸಂತಾಪ:

ದಲಿತರ ನೋವನ್ನು ಸಮರ್ಥವಾಗಿ ಅಕ್ಷರ ರೂಪಕ್ಕಿಳಿಸಿ, ಅವರನ್ನು ಜಾಗೃತಗೊಳಿಸಿದವರು ಡಾ. ಸಿದ್ದಲಿಂಗಯ್ಯ. ನೋವಿನ ಕೆಂಡವನ್ನೇ ಒಡಲೊಳಗಿರಿಸಿಕೊಂಡ ಅವರ ಕವನಗಳು ದಲಿತ ಚಳವಳಿಗೆ ಕಾವು ನೀಡಿತ್ತು. ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅವರು ನಾಡು-ನುಡಿಗೆ ಸಲ್ಲಿಸಿದ ಸೇವೆ ಅನನ್ಯ ಅವರ ನಿಧನದಿಂದ ಸಾಮಾಜಿಕ ಕಳಕಳಿಯ ಅಪೂರ್ವ ಸಾಹಿತಿಯನ್ನು ಕಳೆದುಕೊಂಡಂತಾಗಿದೆ.
-ಬಿ ಎಸ್ ಯಡಿಯೂರಪ್ಪ, ಸಿಎಂ

————————

ಸಿದ್ದರಾಮಯ್ಯ ಸಂತಾಪ:

ಕಾವ್ಯವನ್ನೇ ಖಡ್ಗವನ್ನಾಗಿಸಿ ಸಾಮಾಜಿಕ‌‌ ಸಮಾನತೆಯ ಹೋರಾಟವನ್ನು‌ ಮುನ್ನಡೆಸಿದ್ದ ದಲಿತ ಕವಿ, ವಿಧಾನಪರಿಷತ್‌ನ ಮಾಜಿ ಸದಸ್ಯ ಮತ್ತು ನನ್ನ ಆತ್ಮೀಯ ಮಿತ್ರ ಸಿದ್ದಲಿಂಗಯ್ಯನವರ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ಸಾವನ್ನು ಮೀರಿದ ಸಾಹಿತ್ಯದ ಮೂಲಕ ಅವರು ಅಜರಾಮರ. ಅವರ ಕುಟುಂಬದ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ.
-ಸಿದ್ದರಾಮಯ್ಯ, ಮಾಜಿ ಸಿಎಂ

—————————–

ಲೇಖಕರ ಪ್ರತಿಕ್ರಿಯೆಗಳು:

ಆಕಾಶದ ಅಗಲಕ್ಕೂ ನಿಂತ ಆಲದ ಮರ ಎಂದು ಬಾಬಾ ಸಾಹೇಬರನ್ನು ಕರೆದಿದ್ದ ಕವಿ ಹಾಗೂ ನಮ್ಮ ಊರು ಕೇರಿಯ ಮೇಷ್ಟ್ರು ಸಿದ್ದಲಿಂಗಯ್ಯನವರು ಇನ್ನು ನೆನಪು ಮಾತ್ರ.
-ಡಾ. ವೆಂಕಟೇಶ್ ನೆಲ್ಲುಕುಂಟೆ, ಕವಿ, ಲೇಖಕ

ಊರು-ಕೇರಿ ಬಿಟ್ಟು ಹೊರಟ ಹಿರಿಯ ಸಾಹಿತಿ. ಕವಿ ಡಾ. ಸಿದ್ದಲಿಂಗಯ್ಯ ಅವರಿಗೆ ಅಂತಿಮ ನಮನಗಳು.
-ವಸುಧೇಂದ್ರ, ಕಥೆಗಾರ

ಸಿದ್ಧಲಿಂಗಯ್ಯ ಅವರು ಅಪರೂಪದ ಕನ್ನಡ ಬರಹಗಾರರಲ್ಲಿ ಒಬ್ಬರು. ಅವರ ಕೃತಿಗಳು ಜನಸಾಮಾನ್ಯರೊಂದಿಗೆ ಒಂದು ಸ್ವರಮೇಳದ ಬಾಂಧವ್ಯ ಹೊಂದಿದ್ದವು ಮತ್ತು ಪ್ರಾಯೋಗಿಕ ರೀತಿಯಲ್ಲಿ ಉಪಯುಕ್ತವಾದವು. ಕನ್ನಡ ದಲಿತ ಸಾಹಿತ್ಯದ ದಿಕ್ಕನ್ನು ನಿರ್ದೇಶಿಸಿದ ರೀತಿಯಿಂದಾಗಿ ಅವರ ಕಾವ್ಯವು ಗಣನೀಯ. ಅವರ ಆತ್ಮಚರಿತ್ರೆ, “ಊರುಕೇರಿ” ವಿಶಿಷ್ಟವಾಗಿತ್ತು ಮತ್ತು ನಗು ಮತ್ತು ಅಪಹಾಸ್ಯದ ವಿಧ್ವಂಸಕ ಶಕ್ತಿಯನ್ನು ತೋರಿಸಿತು. ಅವರಲ್ಲಿ ಕರ್ನಾಟಕವು ಸಾಂಸ್ಕೃತಿಕ ಶಕ್ತಿ ಮತ್ತು ರಾಜಕೀಯ ಪ್ರಜ್ಞೆಯ ಅಪರೂಪದ ಸಾಂದ್ರತೆಯನ್ನು ಕಂಡುಕೊಂಡಿತ್ತು. ಅವರ ರಾಜಕೀಯ ನಡೆಗಳು ಅವರ ಹಿತೈಷಿಗಳಲ್ಲಿ ಆಗಾಗ್ಗೆ ವಿವಾದಾಸ್ಪದವಾಗಿದ್ದರೂ, ಅವರ ಕಾವ್ಯವು ಯಾವಾಗಲೂ ಅನೇಕ ಅನುಯಾಯಿಗಳನ್ನು ಹೊಂದಿತ್ತು.
-ಕಮಲಾಕರ ಕಡವೆ, ಕವಿ

Spread the love

Related Articles

Leave a Reply

Your email address will not be published. Required fields are marked *

Back to top button