ರಾಜ್ಯರಾಷ್ಟ್ರೀಯ

ಕೋವಿಡ್ ಲಸಿಕೆ ಕೊರತೆಗೆ ರಾಜ್ಯಗಳು ಹೊಣೆ; ‘ಕೈತೊಳೆದುಕೊಂಡ’ ಕೇಂದ್ರ ಸಲಹೆಗಾರ

ಕೇಂದ್ರ ಸರ್ಕಾರದ ಕೋವಿಡ್ ಸಲಹೆಗಾರ ವಿ.ಕೆ.ಪಾಲ್, ಲಸಿಕೆ ಕೊರತೆಗೆ ರಾಜ್ಯ ಸರ್ಕಾರಗಳೇ ಹೊಣೆ ಎನ್ನುವ ಮೂಲಕ ಕೈತೊಳೆದುಕೊಂಡಿದ್ದಾರೆ.

ರಾಜ್ಯ ಹಾಗೂ ದೇಶದೆಲ್ಲೆಡೆ ಲಸಿಕೆ ಕೊರತೆ ತೀವ್ರವಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಪೂರೈಕೆ ಕೊರತೆ ಇದ್ದು, ಖಾಸಗಿ ಆಸ್ಪತ್ರೆಗಳು ಡೋಸ್ ಒಂದಕ್ಕೆ 800 ರಿಂದ 1400 ರೂ.ವರೆಗೆ ತೆಗೆದುಕೊಳ್ಳುತ್ತಿವೆ. ಜತೆಗೆ, ಸೇವಾ ಶುಲ್ಕವನ್ನು 100 ರೂ.ನಿಂದ 300 ರೂ.ಗೆ ಹೆಚ್ಚಿಸಿಕೊಂಡಿವೆ. ರಾಜ್ಯ ಸರ್ಕಾರಗಳು ನೇರವಾಗಿ ಅಂತಾರಾಷ್ಟ್ರೀಯ ಟೆಂಡರ್ ಕರೆದು, ಲಸಿಕೆ ಪಡೆದುಕೊಳ್ಳಲು ಲಸಿಕೆಗೆ ಸಂಬಂಧಿಸಿದಂತೆ ಸುಪ್ರೀಂ/ಹೈ ಕೋರ್ಟ್ ಸರ್ಕಾರಗಳಿಗೆ ಮಂಗಳಾರತಿ ಎತ್ತಿವೆ. ರಾಜ್ಯ ಕರೆದಿದ್ದ ಟೆಂಡರ್‍ಗೆ ಓಗೊಟ್ಟಿರುವುದು ಸ್ಪುಟ್ನಿಕ್ ಪೂರೈಕೆದಾರ ಸಂಸ್ಥೆಗಳು ಮಾತ್ರ. ಮಾಡರ್ನಾ ಹಾಗೂ ಫೈಜರ್ ಲಸಿಕೆ ಸದ್ಯಕ್ಕಂತೂ ಸಿಗುವ ಸಾಧ್ಯತೆ ಕಾಣಿಸುತ್ತಿಲ್ಲ.

ಲಸಿಕೆಗೆ ಸಂಬಂಧಿಸಿದ ರಾಷ್ಟ್ರೀಯ ಉನ್ನತ ಸಮಿತಿಯ ಅಧ್ಯಕ್ಷರಾಗಿರುವ ಪಾಲ್, ಜನವರಿಯಿಂದ ಏಪ್ರಿಲ್‍ವರೆಗೆ ಕೇಂದ್ರ ಲಸಿಕೆ ಪೂರೈಕೆಯನ್ನು ಸಮರ್ಥವಾಗಿ ನಿಭಾಯಿಸಿದ್ದು, ಮೇ ಮಾಸದಲ್ಲಿ ಸಾಧನೆ ತೃಪ್ತಿದಾಯಕವಾಗಿಲ್ಲ. ಕೇಂದ್ರ ಲಸಿಕೆಗೆ ಸಂಬಂಧಿಸಿದಂತೆ ಹೆಚ್ಚು ಕೆಲಸ ನಿರ್ವಹಿಸಿದ್ದು, ಲಸಿಕೆ ಉತ್ಪಾದಕರಿಗೆ ಬಂಡವಾಳ ಕೂಡ ನೀಡಿದೆ. ವಿದೇಶಿ ಲಸಿಕೆಗಳನ್ನೂ ತರಲಾಗಿದೆ. ಅಷ್ಟಲ್ಲದೆ, ಲಸಿಕೆಯನ್ನು ರಾಜ್ಯಗಳಿಗೆ ಉಚಿತ ನೀಡಿಕೆಗೆ ಪೂರೈಸಿದೆ. ಇದೆಲ್ಲ ರಾಜ್ಯಗಳಿಗೆ ಗೊತ್ತಿದೆ. ರಾಜ್ಯಗಳು ಲಸಿಕೆ ಖರೀದಿಸಲು ಕೇಂದ್ರ ಅಗತ್ಯ ನೆರವು ನೀಡುತ್ತಿದೆ. ದೇಶದ ಲಸಿಕೆ ಉತ್ಪಾದನೆ ಸಾಮಥ್ರ್ಯವೇನು ಹಾಗೂ ವಿದೇಶಗಳಿಂದ ಲಸಿಕೆ ಪಡೆದುಕೊಳ್ಳುವುದು ಎಷ್ಟು ಕಷ್ಟ ಎನ್ನುವುದು ರಾಜ್ಯಗಳಿಗೆ ತಿಳಿದಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮೇ ತಿಂಗಳಿನಿಂದ 18 ವರ್ಷ ದಾಟಿದವರಿಗೆ ಲಸಿಕೆ ನೀಡಲಾಗುತ್ತಿದೆ. ರಾಜ್ಯ ಹಾಗೂ ಖಾಸಗಿ ಆಸ್ಪತ್ರೆಗಳು ಅರ್ಧದಷ್ಟು ಲಸಿಕೆಯನ್ನು ಕಸೌಲಿಯ ಕೇಂದ್ರೀಯ ಸಂಶೋಧನಾ ಪ್ರಯೋಗಾಲಯದಿಂದ ಪಡೆದುಕೊಳ್ಳಲು ಅನುಮತಿ ನೀಡಲಾಗಿದೆ. ಏಪ್ರಿಲ್ ಮೊದಲ ವಾರಗಳಲ್ಲಿ 2.5 ಕೋಟಿಯಷ್ಟಿದ್ದ ಲಸಿಕೆ ನೀಡಿಕೆ ಪ್ರಮಾಣ ಮೇ ಮೊದಲ ವಾರದಲ್ಲಿ 1.2 ಹಾಗೂ ಮೇ 22-28ರ ಅವಧಿಯಲ್ಲಿ 87 ಲಕ್ಷಕ್ಕೆ ಕುಸಿದಿದೆ ಎಂದು ಕೋವಿಡ್ ಪೋರ್ಟಲ್‍ನ ಅಂಕಿಅಂಶ ತಿಳಿಸುತ್ತದೆ. ಹೆಚ್ಚು ಜನರಿಗೆ ಲಸಿಕೆ ನೀಡುವಂತೆ ಮಾಡಲು, ಕೋವಿಶೀಲ್ಡ್ ಮೊದಲ ಡೋಸ್ ಎರಡನೇ ಡೋಸ್ ನಡುವಿನ ಅಂತರವನ್ನು 3 ತಿಂಗಳಿಗೆ ವಿಸ್ತರಿದರೂ ದೇಶದೆಲ್ಲಡೆ ಲಸಿಕೆ ಕೊರತೆ ವ್ಯಾಪಕವಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗದ ಲಸಿಕೆ ಖಾಸಗಿ ಆಸ್ಪತ್ರೆಗಳಲ್ಲಿ ಸಿಗುತ್ತಿರುವುದು ಹೇಗೆ ಎಂದು ಜನ ಪ್ರಶ್ನಿಸುತ್ತಿದ್ದಾರೆ.

ಅಕ್ಟೋಬರ್ ಅಂತ್ಯದ ವೇಳೆಗೆ ಕೋವ್ಯಾಕ್ಸಿನ್ 10 ಕೋಟಿ ಡೋಸ್ ಉತ್ಪಾದಿಸಲಾಗುತ್ತದೆ. ಜತೆಗೆ ಮೂರು ಸಾರ್ವಜನಿಕ ಸಂಸ್ಥೆಗಳು ಡಿಸೆಂಬರ್ ಒಳಗೆ ಮೂರು ಕೋಟಿ ಡೋಸ್ ಕೋವ್ಯಾಕ್ಸಿನ್ ಉತ್ಪಾದಿಸಲಿವೆ. ಸೀರಂ ಇನ್‍ಸ್ಟಿಟ್ಯೂಟ್ ಕೋವಿಶೀಲ್ಡ್ ಉತ್ಪಾದನೆಯನ್ನು 3.5 ಕೋಟಿಯಿಂದ 11 ಕೋಟಿ ಡೋಸ್‍ಗೆ ಹೆಚ್ಚಿಸಲಿದೆ. ಫೈಜರ್ ಲಸಿಕೆಗಳನ್ನು ಜುಲೈನಿಂದ ಪೂರೈಸಲಿದೆ ಎಂದು ಎಂದು ಪಾಲ್ ಹೇಳಿದ್ದಾರೆ.

ಕೋವಿಡ್ ನಿಭಾವಣೆಯಲ್ಲಿ ದಯನೀಯವಾಗಿ ವಿಫಲವಾಗಿರುವ ಕೇಂದ್ರ, ಸದ್ಯಕ್ಕೆ ಸೋಂಕು ಹರಡುವುದನ್ನು ತಡೆಯುವ ಏಕೈಕ ಮಾರ್ಗವಾದ ಲಸಿಕೆ ನೀಡುವಿಕೆಯಲ್ಲೂ ವಿಫಲವಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button