
ಬೆಂಗಳೂರು : ಕೊರೊನಾ ವೈರಸ್ ಎರಡನೇ ಅಲೆಯ ತೀವ್ರತೆ ಕಡಿಮೆಯಾಗುತ್ತಿದ್ದಂತೆಯೇ ರಾಜ್ಯದಲ್ಲಿ ಡೆಲ್ಟಾ ಪ್ಲಸ್ ವೈರಸ್ ಆತಂಕ ಎದುರಾಗಿದೆ. ಮೈಸೂರಿನಲ್ಲಿ ಒಂದು ಡೆಲ್ಟಾ ವೈರಸ್ ಪ್ರಕರಣ ಪತ್ತೆಯಾಗಿದ್ದು, ಆ ರೋಗಿಯನ್ನು ಐಸೋಲೇಟ್ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಮಾಹಿತಿ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಡೆಲ್ಟಾ ಪ್ಲಸ್ ಕೇಸ್ ಮಹಾರಾಷ್ಟ್ರದಲ್ಲಿ 20-30 ಕೇಸ್ ಬಂದಿದೆ. ಮೈಸೂರಿನಲ್ಲಿ ಒಂದು ಕೇಸ್ ಬಂದಿದೆ. ಸೋಂಕಿತ ವ್ಯಕ್ತಿಯನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಯಾವುದೇ ರೋಗ ಲಕ್ಷಣ ಕಂಡು ಬಂದಿಲ್ಲ. ಅಲ್ಲದೆ ಅವರಿಂದ ಯಾರಿಗೂ ಸೋಂಕು ಹರಡಿಲ್ಲ ಎಂದರು.
ಈ ವೈರಸ್ ಬಗ್ಗೆ ನಿರಂತರವಾಗಿ ಎಚ್ಚರವಹಿಸಲಾಗಿದೆ. 6 ಜಿನೋಮ್ ಲ್ಯಾಬ್ ಕೂಡಾ ಪ್ರಾರಂಭ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.