ರಾಜ್ಯ
ರಾಜ್ಯದೆಲ್ಲೆಡೆ ಒಮ್ಮೆಲೆ ಅನ್ಲಾಕ್ ಇಲ್ಲ: ಆರ್.ಅಶೋಕ್

ಲಾಕ್ಡೌನ್ ಕೊನೆಗೊಳಿಸಲು ಜೂನ್ 14ಕ್ಕೆ ದಿನಾಂಕ ನಿಗದಿಪಡಿಸಿದ್ದರೂ ಒಮ್ಮೆಲೇ ಅನ್ಲಾಕ್ ಮಾಡುವುದಿಲ್ಲ. ಐದು ಹಂತಗಳಲ್ಲಿ ಲಾಕ್ಡೌನ್ ತೆರವು ಪ್ರಕ್ರಿಯೆ ನಡೆಯಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ರಾಜ್ಯದ ಎಲ್ಲಾ ಜಿಲ್ಲೆಗಳ ಪರಿಸ್ಥಿತಿ ಒಂದೇ ತೆರನಾಗಿಲ್ಲ. ಏಕಾಏಕಿ ಅನ್ಲಾಕ್ ಮಾಡಿದರೆ ಸೋಂಕು ಮತ್ತೆ ವ್ಯಾಪಿಸಬಹುದು. ಹೀಗಾಗಿ ಪಾಸಿಟಿವಿಟಿ ಕಡಿಮೆ ಇರುವ ಜಿಲ್ಲೆಗಳನ್ನು ಗುರುತಿಸಿ, ಯಾವುದಕ್ಕೆಲ್ಲಾ ವಿನಾಯಿತಿ, ದಿನದಲ್ಲಿ ಎಷ್ಟು ಗಂಟೆಗಳ ಸಮಯ ವಿಸ್ತರಣೆ ಮಾಡುವುದು ಎಂಬುದನ್ನು ನಿರ್ಧರಿಸಿ, ಹಂತ ಹಂತವಾಗಿ ಲಾಕ್ಡೌನ್ ತೆರವು ಮಾಡಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು.