ಬಿಎಸ್ವೈ ರಾಜೀನಾಮೆ ಹೇಳಿಕೆ; ಇತರರು ಕಂಡಂತೆ…

ಹೈಕಮಾಂಡ್ ಹೇಳಿದರೆ ರಾಜೀನಾಮೆ ಕೊಟ್ಟು ಹೊರಡಲು ಸಿದ್ಧ ಎಂಬ ಬಿಎಸ್ವೈ ಹೇಳಿಕೆ ಬಗ್ಗೆ ರಾಜಕೀಯ ವಲಯದಲ್ಲಿ ವಿವಿಧ ಬಗೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಕಂದಾಯ ಸಚಿವ ಆರ್ ಅಶೋಕ್ ಇದರ ಬಗ್ಗೆ ಪ್ರಸ್ತಾಪಿಸಿ, ಯಡಿಯೂರಪ್ಪ ಮನಸ್ಸಿಗೆ ನೋವಾಗಿರುವಂತಿದೆ ಎಂದಿದ್ದಾರೆ. ಪದೇ ಪಧೆ ನಾಯಕತ್ವ ಬದಲಾವಣೆ ಎಂಬ ಮಾತುಗಳು ಕೇಳಿಬರುತ್ತಿರುವುದರಿಂದ ಅವರ ಮನಸ್ಸಿಗೆ ಘಾಸಿಯಾಗಿರುವಂತೆ ಕಾಣಿಸುತ್ತಿದೆ ಎಂದು ಅಶೋಕ್ ಹೇಳಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕೋವಿಡ್ನಂಥ ಸಂಕಷ್ಟದ ಸ್ಥಿತಿಯಲ್ಲಿಯೂ ಯಡಿಯೂರಪ್ಪ ದಕ್ಷ ಆಡಳಿತ ನಡೆಸಿದ್ದಾರೆ. ಅವರಿಂದ ರಾಜೀನಾಮೆ ಕೊಡಿಸುವ ಉದ್ದೇಶ ಹೈಕಮಾಂಡ್ಗಿಲ್ಲ ಎಂದಿದ್ದಾರೆ. ಸಿಎಂ ಸಮರ್ಥರಾಗಿದ್ದು, ಅವರನ್ನು ಬದಲಾಯಿಸುವ ಮಾತು ಸದ್ಯಕ್ಕಂತೂ ಇಲ್ಲ ಎಂದು ಜೋಶಿ ಸ್ಪಷ್ಟಪಡಿಸಿದ್ದಾರೆ.
ಗೃಹ ಸಚಿವ ಬಸವರಾಜ ಬೊಮ್ಮಾಯಿ, ಇತ್ತೀಚೀನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಯಡಿಯೂರಪ್ಪ ಮನಸ್ಸಿಗೆ ನೋವಾಗಿರಬೇಕು. ಅವರ ಮಾತುಗಳಲ್ಲಿ ಆ ಬೇಸರ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಯಡಿಯೂರಪ್ಪ ನಾಯಕತ್ವದ ವಿಚಾರವಾಗಿ ಹೈಕಮಾಂಡ್ಗೆ ಯಾವುದೇ ಗೊಂದಲವಿಲ್ಲ. ಟಪಸ್ವರ ಎತ್ತಿರುವವರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ರಾಜೀನಾಂಎಗೆ ಸಿದ್ಧ ಎಂದು ಬಿಎಸ್ವೈ ಬಹಳ ದೊಡ್ಡ ಮಾತನ್ನಾಡಿದ್ದಾರೆ. ಅವರ ಹೇಳಿಕೆಯನ್ನು ಸ್ವಾಗತಿಸುವೆ ಎಂದಿರುವವರು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ರಾಜೀನಾಂಎ ನೀಡುವುದಾಗಿ ಹೇಳಿರುವ ಬಿಎಸ್ವೈ ಮಾತಿನ ಹಿಂದೆ ಬೇರೆಯದೇ ತಂತ್ರಗಾರಿಕೆಯಿದೆ ಎಂದಿದ್ದಾರೆ. ನನ್ನ ಪ್ರಕಾರ ಯಡಿಯೂರಪ್ಪ ಗಟ್ಟಿ ಮನುಷ್ಯ. ಅಷ್ಟು ಸುಲಭವಾಗಿ ಬಗ್ಗುವವರಲ್ಲ ಎಂದಿದ್ದಾರೆ ಶಿವಕುಮಾರ್.