ಅಭಿಮತಲೇಖನಗಳುಸ್ಪೆಷಲ್ ಸ್ಟೋರೀಸ್

ಟೂಟನ್ ಖಾಮೂನ್ಸ್ ಗೋರಿಯ ನಿಗೂಢ ಕಥೆ

ವಾಯ್ಸ್: ನಿಗೂಢತೆಗಳ ಆಗರ ನಮ್ಮ ಈ ಜಗತ್ತು. ಇಲ್ಲಿನ ಒಂದೊಂದು ನಿಗೂಢತೆಯನ್ನು ಭೇದಿಸಲು ಶತಮಾನಗಳಿಂದಲೂ ವಿಜ್ಞಾನಿಗಳು, ಪುರಾತತ್ವಶಾಸ್ತ್ರಜ್ಞರು ಪ್ರಯತ್ನಿಸ್ತಾನೆ ಇದ್ದಾರೆ. ಆದರೆ ಎಲ್ಲಿ ನೋಡಿದರೂ ನಿಗೂಢತೆಯೇ ತುಂಬಿರುವ ಇತಿಹಾಸದ ಪುಟಗಳಲ್ಲಿ ಪುರಾತತ್ವಶಾಸ್ತ್ರಜ್ಞರನ್ನು ಅತಿಯಾಗಿ ಕಾಡಿದ್ದು, ಇಂದಿಗೂ ಕಾಡುತ್ತಿರುವುದು ಇಜಿಪ್ಟಿನ ಪಿರಮಿಡ್ಡುಗಳು. ಈ ಪಿರಮಿಡ್ಡುಗಳೆಂಬ ಗೋರಿಗಳೊಳಗಿನ ಅಂದಿನ ರಾಜರುಗಳ ನಿಗೂಢ ಜಗತ್ತು. ಇಂತಹ ನಿಗೂಢ ಪಿರಮಿಡ್ಡಿನ ಅಂದರೆ ಈಜಿಪ್ಟಿನ ರಾಜನೊಬ್ಬನ ಗೋರಿಯ ನಿಗೂಢ ಸ್ಟೋರಿ ಇದು.. ಈ ನಿಗೂಢ ಸ್ಟೋರಿಯ ನಾಯಕ ಟೂಟನ್ ಖಾಮೂನ್ಸ್ ಎಂಬ ರಾಜ. ಈ ರಾಜನ ಬಗ್ಗೆ  ಪುರಾತತ್ವಶಾಸ್ತ್ರಜ್ಞರು ನಡೆಸಿದ ಸಂಶೋಧನೆಗಳು ಪುರಾತನ ಇತಿಹಾಸವನ್ನು ಬದಲಿಸಿ ಬರೆಯುವಂತೆ ಮಾಡಿವೆಯೆಂದರೆ ಉತ್ಪ್ರೇಕ್ಷೆಯಿಲ್ಲ.

ಫ್ಲೋ‘

ಗ್ರಾಫಿಕ್ಸ್ ಇನ್

ರಾಜರುಗಳ ಕಣಿವೆಯಲ್ಲಿ ಏನಿತ್ತು? ಏನಿಲ್ಲ?

ಗ್ರಾಫಿಕ್ಸ್ ಔಟ್

3000 ಸಾವಿರ ವರ್ಷಗಳ ಹಿಂದೆ ಈಜಿಪ್ಟ್ ನಲ್ಲಿ ರಾಜನಾಗಿದ್ದ ಟ್ಯೂಟನ್ ಖಾಮುನ್ ನ ಭಾರಿ ಖಜಾನೆಯ ಇರುವಿಕೆಯ ಬಗ್ಗೆ ಎಲ್ಲರಲ್ಲೂ ಒಮ್ಮತವಿದೆಯಾದ್ರೂ ಅದರ ನಿಖರವಾದ ಜಾಗವನ್ನು ಮಾತ್ರ ಇದುವರೆಗೂ ಕಂಡುಹಿಡಿಯಲಾಗಿಲ್ಲ. ರಾಜರುಗಳ ಕಣಿವೆ.. ಹೌದು 3500 ವರ್ಷಗಳ ಹಿಂದಿನ ಈ ಜಾಗದಲ್ಲಿ ಈಜಿಪ್ಟಿನ ಪ್ರಸಿದ್ಧ ಫೆರೋ ರಾಜರುಗಳು ಪಿರಮಿಡ್ ಗಳ ನಿರ್ಮಾಣ ಮಾಡಿದ್ರು. ಈ ವಿಶಾಲ ಕಣಿವೆಯಲ್ಲಿಯ ಇಂಥಹ ಹಲವಾರು ಪಿರಮಿಡ್ಡುಗಳ ರಹಸ್ಯವನ್ನು ಕಂಡುಹಿಡಿಯಲು ಇಂದಿಗೂ ಪ್ರಪಂಚದ ಮೂಲೆಮೂಲೆಗಳಿಂದಲೂ ಸಂಶೋಧಕರು ಬರುತ್ತಲೇ ಇದ್ದಾರೆ.

ಫ್ಲೋ

ಗ್ರಾಫಿಕ್ಸ್ ಇನ್

3000 ಮೈಲುಗಳವರೆಗೆ ಹರಡಿಕೊಂಡಿರುವ ರಾಜರ ಕಣಿವೆ

ಗ್ರಾಫಿಕ್ಸ್ ಔಟ್

3000 ಮೈಲುಗಳವರೆಗೆ ಈಜಿಪ್ಟಿನ ಹೃದಯಭಾಗದಲ್ಲಿ ಈ ರಾಜರುಗಳ ಕಣಿವೆ ಹರಡಿಕೊಂಡಿದೆ. 200 ವರ್ಷಗಳ ಸತತ ಉತ್ಖನನ ಮತ್ತು ಸಂಶೋಧನೆಯ ನಂತರ ಈ ಕಣಿವೆಯಲ್ಲಿನ ಹಲವು ರಹಸ್ಯಗಳನ್ನು ಬಿಡಿಸಲು ಪ್ರಯತ್ನಿಸಿದ್ದಾರೆ. ಕೆಲವು ರಹಸ್ಯಗಳನ್ನು ಬಿಡಿಸುವಲ್ಲಿ ಸಫಲರೂ ಆಗಿದ್ದಾರೆ. ಆದರೆ ಯಾರಿಗೂ ಇದುವರೆಗೂ ಟ್ಯೂಟನ್ ಖಾಮುನ್ ಖಜಾನೆಯ ಬಗ್ಗೆ ಮಾತ್ರ ತಿಳಿದುಕೊಳ್ಳಲು ಸಾಧ್ಯವಾಗಿಲ್ಲ ಎನ್ನುವುದು ಇದರ ನಿಗೂಢತೆಯನ್ನು ಹೆಚ್ಚಿಸಿದೆ.

ಫ್ಲೋ

ಗ್ರಾಫಿಕ್ಸ್ ಇನ್

ನಿಜಕ್ಕೂ ಇತ್ತಾ ಟ್ಯೂಟನ್ ಖಾಮುನ್ ರಾಜನ ಖಜಾನೆ?

ಗ್ರಾಫಿಕ್ಸ್ ಔಟ್

1922ರಲ್ಲಿ ಟ್ಯೂಟನ್ ಖಾಮೂನ್ ನ ಸಮಾಧಿಯನ್ನು ಸಂಶೋಧಿಸಿದ್ದು ಹಾವರ್ಡ್ ಕಾವರ್. ಇವನ ಒಂದು ತಂಡ ಈ ಸಮಾಧಿಯ ಭೂಮಿಯೊಳಗಡೆ ಮರಳಿನ ಮೂಲಕ ಇಳಿದಿರುವುದನ್ನು ಗುರುತಿಸಿದರು. ಈ ಸಂಶೋಧನೆ ನಂತರ ಬಂದ ಹಲವಾರು ಪುರಾತತ್ವಶಾಸ್ತ್ರಜ್ಞರಿಗೆ ಹೊಸ ಹುರುಪು ನೀಡಿ ಮತ್ತೂ ಹೆಚ್ಚಿನ ಸಂಶೋಧನೆ ನಡೆಸಲು ಪ್ರೇರೆಪಿಸಿತು. ಈ ಸಮಾಧಿಯ ವೈಶಿಷ್ಟ್ಯವೆಂದರೆ ಸಮಾಧಿಯ ಬಂಡೆಗಳ ಕೆಳಗೆ ಹಲವಾರು ಸುರಂಗದಂತಿರುವ ರಚನೆಗಳು ಕಂಡುಬಂದಿರುವುದು.  ಈ ನೂರಾರು ಸುರಂಗಗಳಲ್ಲಿರುವ ರಹಸ್ಯ ಸ್ಥಳಗಳಲ್ಲಿ ಟ್ಯೂಟನ್ ಖಾಮುನ್ ಖಜಾನೆ ಇದೆ ಎಂದು ಎಲ್ಲರೂ ನಂಬ್ತಾರೆ. ನಂತರ ನಡೆದ ಸಂಶೋಧನೆ ಎಲ್ಲರನ್ನೂ ಬೆಚ್ಚಿಬೀಳಿಸುವಂತಿತ್ತು.

ಫ್ಲೋ

ಗ್ರಾಫಿಕ್ಸ್ ಇನ್

200 ಪೌಂಡುಗಳ ಶುದ್ಧ ಬಂಗಾರದ ಮಮ್ಮಿ!

ಗ್ರಾಫಿಕ್ಸ್ ಔಟ್

ಭೂಮಿಯಾಳದ ಇಂಥ ಸುರಂಗದಲ್ಲಿ ಟ್ಯೂಟನ್ ಖಾಮುನ್ನ ಭಾರಿ ಖಜಾನೆ ಹೊರಬಿತ್ತು. ಈ ಖಜಾನೆಯಲ್ಲಿನ ಅಗಾಧ ಗಾತ್ರದ ಸಂಪತ್ತು ಎಂಥವರ ಕಣ್ಣನ್ನೂ ಕುಕ್ಕುವಂತಿತ್ತು. ಬಾರಿ ಗಾತ್ರದ ಹಲವಾರು ಚಿನ್ನದ ಮೂರ್ತಿಗಳು, ಆಭರಣಗಳು ಸಿಕ್ಕವು. ಅದರ ಜೊತೆಗೆ ಟ್ಯೂಟನ್ ಖಾಮುನ್ ರಾಜನ ಚಿನ್ನದಿಂದ ಮುಚ್ಚಲ್ಪಟ್ಟಿದ್ದ ಮಮ್ಮಿ. 200 ಪೌಂಡುಗಳ ಶುದ್ಧ ಬಂಗಾರದಿಂದ ನಿರ್ಮಿತವಾಗಿದ್ದ ಈ ಫೆರೊ ರಾಜನ ಮಮ್ಮಿ ಇತಿಹಾಸಕಾರರ ನಿದ್ದೆಗೆಡಿಸುವುದರ ಜೊತೆಗೆ ಟ್ಯೂಟನ್ ಖಾಮುನ್ ನನ್ನು ಪ್ರಸಿದ್ಧನನ್ನಾಗಿ ಮಾಡಿತು.

ಫ್ಲೋ

ಗ್ರಾಫಿಕ್ಸ್ ಇನ್

ಟ್ಯೂಟನ್ ಖಾಮುನ್ ವಿಶೇಷತೆಯಾದ್ರೂ ಎನು?

ಗ್ರಾಫಿಕ್ಸ್ ಔಟ್

ಹೀಗೆ ಚಿನ್ನದಲ್ಲಿ ಮುಳುಗುವಷ್ಟು ಶ್ರೀಮಂತನಾದ ಈ ರಾಜನ ಜೀವನವೇ ಈಗ ಇತಿಹಾಸಕಾರರಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ. ಇಷ್ಟು ಅಗಾಧ ಸಂಪತ್ತಿನ ಒಡೆಯನಾದ ಈ ರಾಜನ ಸಂಪತ್ತು ಹಾಗೂ ವಿಷಯ ಶತಮಾನಗಳವರೆಗೂ ಅದೇಕೆ ನಿಗೂಢವಾಗೆ ಇತ್ತು ಎಂಬುದು ಇತಿಹಾಸಕಾರರಿಗೆ ಹಾಗೂ ಪುರಾತತ್ವಶಾಸ್ತ್ರಜ್ಞರಿಗೆ ತಲೆಕೆಡಿಸಿರುವ ವಿಷಯವಾಗಿದೆ. ಆದರ ಕಳೆದ ಹತ್ತು ವರ್ಷಗಳಲ್ಲಿ ಈ ರಾಜನ ಬಗ್ಗೆ ಹಲವಾರು ಹೊಸ ಹೊಸ ವಿಶಯಗಳು ಬೆಳಕಿಗೆ ಬಂದಿವೆ.

ಫ್ಲೋ

ಗ್ರಾಫಿಕ್ಸ್ ಇನ್

ಸುರಂಗದಲ್ಲಿವೆ ಭಾರಿ ಗಾತ್ರದ ಬಣ್ಣದ ಚಿತ್ರಗಳು

ಗ್ರಾಫಿಕ್ಸ್ ಔಟ್

ಈ ಸುರಂಗದಲ್ಲಿ ಸಂಪತ್ತು ಸಿಕ್ಕಿದರೂ ಅಲ್ಲಿ ಇನ್ನೂ ಹಲವಾರು ರಹಸ್ಯಗಳು ಅಡಗಿದ್ದು ಅದನ್ನು ಬಿಡಿಸುವುದು ಕಗ್ಗಂಟಾಗಿದೆ. ಆ ರಹಸ್ಯವೆಂದರೆ ಟ್ಯೂಟನ್ ಖಾಮುನ್ ಮುಖವನ್ನು ಹೋಲುವ ಭಾರಿ ಪ್ರಮಾಣದ ಪೇಂಟಿಂಗ್. ಸುರಂಗದಲ್ಲಿರುವ ಗೋಡೆಯ ಮೇಲಿನ ಈ ಬಣ್ಣದ ಚಿತ್ರಗಳು ಇನ್ನೂ ಹಲವಾರು ರಹಸ್ಯಗಳನ್ನು ಬಿಚ್ಚಿಡುವಂತಿವೆ. ಅಷ್ಟಕ್ಕೂ ಈ ಗೋಡೆಯ ಮೇಲಿನ ಪೇಂಟಿಂಗ್ ಗಳು ಫೆರೋ ರಾಜ ಟ್ಯೂಟನ್ ಖಾಮುನ್ ನ ಚಿತ್ರಗಳು ಅನ್ನೋದಾದ್ರೆ ಅವನ ಜೀವನದ ಬಗ್ಗೆ ಇತಿಹಾಸಕಾರರಿಗೆ ಇನ್ನಿಲ್ಲದ ಕುತೂಹಲ ಮೂಡಿಸಿತ್ತು.

ಫ್ಲೋ

ಗ್ರಾಫಿಕ್ಸ್ ಇನ್

ಕೇವಲ 9ನೆಯ ವಯಸ್ಸಿನಲ್ಲೇ ರಾಜನಾಗಿದ್ದ ಟ್ಯೂಟನ್ ಖಾಮುನ್

ಗ್ರಾಫಿಕ್ಸ್ ಔಟ್

ಅಷ್ಟಕ್ಕೂ ಈ ಟ್ಯೂಟನ್ ಖಾಮುನ್ ಅನ್ನೋ ರಾಜ ಯಾರು ಎಂದು ಇವನ ಇತಿಹಾಸವನ್ನು ಪರಿಶೀಲಿಸಿದಾಗ ಇವನು ಪುರಾತನ ಈಜಿಪ್ಟ್ ರಾಜಮನೆತನದಲ್ಲಿಯ 18ನೆಯ ಹಾಗು ಆ ರಾಜಮನೆತನದ ಕೊನೆಯ ರಾಜನಾಗಿದ್ದ. ಇವನು ಆಳ್ವಿಕೆ ನಡೆಸಿದ ಕಾಲವನ್ನು ಇಂದಿನ ಕಾಲಗಣನೆಗೆ ಅನುಗುಣವಾಗಿ ತೆಗೆದುಕೊಂಡರೆ ಇವನು ಕ್ರಿಸ್ತಪೂರ್ವ 1334ರಿಂದ 1325ರವರೆಗೂ ಆಳ್ವಿಕೆ ನಡೆಸಿದ್ದ. ಟ್ಯೂಟನ್ ಖಾಮುನ್ ನ ಇನ್ನೊಂದು ವಿಶೇಷವೆಂದರೆ ಇವನು ಕೇವಲ ತನ್ನ 9ನೆಯ ವಯಸ್ಸಿನಲ್ಲೇ ರಾಜನಾಗಿದ್ದ. ಇಷ್ಟು ಚಿಕ್ಕ ವಯಸ್ಸಿನಲ್ಲೇ ಟ್ಯೂಟಕಾರನ್ ರಾಜನಾಗಿದ್ದು ಹೇಗೆ ಮತ್ತು ಏಕೆ ಎಂಬುದು ಇತಿಹಾಸಕಾರರ ಅಚ್ಚರಿಗೆ ಕಾರಣವಾಗಿದೆ. ಇವನು ಸಲಹಾ ಸಮೀತಿಯ ಸಹಾಯದೊಂದಿಗೆ ರಾಜ್ಯಭಾರವನ್ನು ಮಾಡಿದ್ದ. ಆದರೆ ಇಷ್ಟು ಚಿಕ್ಕ ವಯಸ್ಸಿನಲ್ಲೇ ರಾಜಪಟ್ಟವನ್ನು ಅಲಂಕರಿಸಿದ್ದ ಟ್ಯೂಟನ್ ಖಾಮುನ್ ದೀರ್ಘಾವಧಿಯ ರಾಜ್ಯಭಾರ ಮಾಡಿರಲಿಲ್ಲ. ಫೆರೋ ರಾಜರುಗಳಲ್ಲೇ ಈ ಟ್ಯೂಟನ್ ಖಾಮುನ್ ವಾರಿಯರ್ ಕಿಂಗ್ ಎಂಬ ಹೆಸರನ್ನು ಗಳಿಸಿದ್ದು, ಬಿಲ್ಲುಬಾಣ ಹಿಡಿದು ಸಾರೋಟಿನ ಮೇಲೆ ಹೋಗುತ್ತಿರುವ ಈತನ ಚಿತ್ರ ಸಂಶೋಧನಕಾರರಿಗೆ ಸಿಕ್ಕಿದೆ.

ಫ್ಲೋ

ಗ್ರಾಫಿಕ್ಸ್ ಇನ್

ಟ್ಯೂಟನ್ ಖಾಮುನ್ ರಾಜ್ಯಭಾರ ಮಾಡಿದ್ದು ಕೇವಲ 10 ವರ್ಷ!

ಗ್ರಾಫಿಕ್ಸ್ ಔಟ್

ಟ್ಯೂಟನ್ ಖಾಮುನ್ ಹೆಸರೆ ಇತಿಹಾಸಕಾರರ ಪಾಲಿಗೆ ಒಂದು ರಹಸ್ಯ. ಇವನ ಬಗ್ಗೆ ಬಗೆದಷ್ಟೂ ಇತಿಹಾಸಕಾರರಿಗೆ ಹೊಸ ಹೊಸ ವಿಷಯಗಳು ಸಿಗುತ್ತಲೇ ಹೋಗುತ್ತಿವೆ. ಕೇವಲ ತನ್ನ 9ನೆಯ ವರ್ಷದಲ್ಲೇ ರಾಜನಾಗಿ ಅಧಿಕಾರ ವಹಿಸಿಕೊಂಡಿದ್ದ ಟ್ಯೂಟನ್ ಖಾಮುನ್ ರಾಜ್ಯಭಾರ ಮಾಡಿದ್ದು ಕೇವಲ ತನ್ನ ಹತ್ತೊಂಬತ್ತನೆಯ ವಯಸ್ಸಿನವರೆಗೆ ಮಾತ್ರ! ಹಾಗಾದರೆ ಟ್ಯೂಟನ್ ಖಾಮನ್ ನಂತರ ಏನಾದ ಎಂಬ ಪ್ರಶ್ನೆಗೆ ಉತ್ತರ ನಮ್ಮನ್ನು ಅವನ ಬಗ್ಗೆ ಅಯ್ಯೋ ಪಾಪ ಎಂಬ ಭಾವ ತರುತ್ತದೆ. ಏಕೆಂದರೆ ಅಂಥ ದೊಡ್ಡ ರಾಜನಾಗಿಯೂ ಟ್ಯೂಟನ್ ಖಾಮುನ್ ತನ್ನ ಹತ್ತೊಂಬತ್ತನೆಯ ವಯಸ್ಸಿನಲ್ಲಿ ಸೊಳ್ಳೆಗಳಿಂದ ಬರುವ ಮಲೇರಿಯ ರೋಗದಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಅವನು ಇದೇ ಮಲೇರಿಯ ರೋಗದಿಂದ ಅಷ್ಟು ಚಿಕ್ಕ ವಯಸ್ಸಿನಲ್ಲೇ ಸಾವನ್ನಪ್ಪಿದ ಎಂದು ಇತಿಹಾಸ ಹೇಳುತ್ತದೆ.

ಫ್ಲೋ

ಗ್ರಾಫಿಕ್ಸ್ ಇನ್

ಮಲೇರಿಯಾದಿಂದ ಸಾವಿಗೀಡಾದ ಅತಿ ಚಿಕ್ಕ ಫೆರೊ

ಗ್ರಾಫಿಕ್ಸ್ ಔಟ್

ಟ್ಯೂಟನ್ ಖಾಮುನ್ ನ ಈ ಆಕಸ್ಮಿಕ  ಸಾವಿನ ಬಗ್ಗೆ ಸಂಶೋಧಕರಿಗೆ ಹಲವಾರು ಪುರಾವೆಗಳು ಸಿಕ್ಕಿವೆ. ಹೀಗೆ ತನ್ನ 19ನೆಯ ವಯಸ್ಸಿನಲ್ಲೇ ಮಮ್ಮಿಯಾಗಿ ಹೋದ ಈ ಫೆರೊ ರಾಜನ ಸಮಾಧಿಯ ಜೊತೆಗೆ ಹೀಗೆ ಅಗಣಿತ ಸಂಪತನ್ನು ಹೂತಿದ್ದಾದರೂ ಏಕೆ ಎಂಬ ಪ್ರಶ್ನೆಗೆ ಈಜಿಪ್ಟಿನ ಮಮ್ಮಿಗಳ ಹಾಗೂ ಪಿರಮಿಡ್ಡುಗಳ ಬಗ್ಗೆ ಅಧ್ಯಯನ ನಡೆಸುವ ಇತಿಹಾಸಕಾರರಿಗೆ ಹಾಗೂ ಪುರಾತತ್ವಶಾಸ್ತ್ರಜ್ಞರಿಗೆ ಈಗಾಗಲೇ ಉತ್ತರ ಸಿಕ್ಕಿದೆ.

ಫ್ಲೋ

ಗ್ರಾಫಿಕ್ಸ್ ಇನ್

ಚಿನ್ನದ ಭಂಡಾರವೇ ಇತ್ತು ಈ ರಾಜನ ಮಮ್ಮಿಯ ಜೊತೆ..

ಗ್ರಾಫಿಕ್ಸ್ ಔಟ್

ಫೆರೋ ರಾಜರ ಸಮಾಧಿಯ ಜೊತೆಗೆ ಅವರು ತಮ್ಮ ಜೀವನಕಾಲದಲ್ಲಿ ಬಳಸುವ ಪ್ರತಿಯೊಂದನ್ನೂ ಇರಿಸುವ ಪದ್ಧತಿ ಆಗಿನ ಕಾಲದಲ್ಲಿ ರೂಢಿಸಿಕೊಳ್ಳಲಾಗಿತ್ತು. ಅವರು ಬಳಸುವ ದಿನನಿತ್ಯದ ವಸ್ತುಗಳಿಂದ ಹಿಡಿದು, ಬಂಗಾರದ ಮೂರ್ತಿಗಳು, ರಥಗಳು ಹೀಗೆ ಅಸಂಖ್ಯ ಅಮೂಲ್ಯ ಚಿನ್ನದ ಸಂಪತ್ತನ್ನೇ ಈ ಟ್ಯೂಟನ್ ಖಾಮುನ್ ರಾಜನ ಮಮ್ಮಿಯ ಜೊತೆಗಿನ ಸಮಾಧಿಯಲ್ಲಿರಿಸಲಾಗಿತ್ತು. ಹಾಗಾದರೆ ಸಾವಿರಾರು ವರ್ಷಗಳಾದರೂ ಕೆಡದಂತೆ ಮಮ್ಮಿಯನ್ನಾಗಿಸಿ ಇವರನ್ನು ರಕ್ಷಿಸಿಡುತ್ತಿದ್ದುದಾದರೂ ಏಕೆ ಎನ್ನುವ ಪ್ರಶ್ನೆಗೆ ಉತ್ತರ ಹುಡುಕಲು ಇತಿಹಾಸಕಾರರು ಸತತ ಪ್ರಯತ್ನ ನಡೆಸಿದರು.

ಫ್ಲೋ

ಗ್ರಾಫಿಕ್ಸ್ ಇನ್

ಪಿರಮಿಡ್ಡುಗಳಲ್ಲಿ ಸಿಕ್ಕ ವಸ್ತುಗಳ ಸಂಗ್ರಹಕ್ಕೆ ಸ್ಥಾಪಿಸಲಾಗಿದೆ ಅತಿ ದೊಡ್ಡ ಮ್ಯೂಸಿಯಂ..

ಗ್ರಾಫಿಕ್ಸ್ ಔಟ್

ಈ ರಹಸ್ಯವನ್ನು ಕಂಡುಹಿಡಿಯಲು ಸಂಶೋಧಕರು ಇಲ್ಲಿಂದ ಉತ್ತರದಲ್ಲಿ 300 ಮೈಲುಗಳ ದೂರದಲ್ಲಿರುವ ದೈತ್ಯ ಪಿರಮಿಡ್ಡುಗಳ ಮೊರೆಹೊಕ್ಕರು. ಹಾಗೆ ಅವರ ಸಂಶೋಧನೆಗೆ ಆಹಾರವಾಗಿದ್ದು ಅಲ್ಲಿದ್ದ ಗೀಜಾ ಪಿರಮಿಡ್. ಈ ಪಿರಮಿಡ್ ಬಳಿ ಸ್ಥಾಪಿಸಿರುವ ಈಜಿಪ್ಟ್ ಪಿರಮಿಡ್ ಹಾಗೂ ಮಮ್ಮಿಗಳಿಗೆ ಸಂಬಂಧಿಸಿದ ಅತಿ ದೊಡ್ಡ ಮ್ಯೂಸಿಯಂನಲ್ಲಿ ಇಲ್ಲಿ ಸಿಕ್ಕಿರುವ ಎಲ್ಲ ರೀತಿಯ ಪುರಾವೆಗಳನ್ನೂ ಸಂಗ್ರಹಿಸಿಡಲಾಗಿದೆ. ಈ ಸಂಗ್ರಹಗಳು ಎಷ್ಟೊ ಸಂಶೋಧಕರಿಗೆ ಹೊಸ ಹೊಸ ವಿಶಯಗಳನ್ನು ತಿಳಿದುಕೊಳ್ಳುವಲ್ಲಿ ಸಹಾಯಕವಾಗಿದೆಯಲ್ಲದೆ ಹೊಸ ಹೊಸ ಸಂಶೋಧನೆಯಗಳಿಗೂ ಸಹಾಯಕವಾಗಿದೆ.

ಫ್ಲೋ

ಗ್ರಾಫಿಕ್ಸ್ ಇನ್

ಸ್ವಂತ ತಂಗಿಯನ್ನೇ ಮದುವೆಯಾಗಿದ್ದ ಟ್ಯೂಟನ್ ಖಾಮುನ್ ತಂದೆ

ಗ್ರಾಫಿಕ್ಸ್ ಔಟ್

ಫೆರೋ ಕಣಿವೆಯಲ್ಲಿ ಸಿಕ್ಕಿರುವ ಇನ್ನಿತರೆ ಮಮ್ಮಿಗಳನ್ನು ಶೋಧಿಸಿದ ಇತಿಹಾಸಕಾರರಿಗೆ ಅಲ್ಲಿ ದೊರೆತ ಮತ್ತೂ ಹಲವು ಮಮ್ಮಿಗಳು ಟ್ಯುಟನ್ ಖಾಮುನ್ ಗೆ ಸಂಬಂಧಪಟ್ಟವು ಎಂಬ ಅಂಶವು ಗೊತ್ತಾಯಿತು. ಹಾಗೆ ಸಿಕ್ಕ ಒಂದು ಮಮ್ಮಿ ಕೆವಿ55 ಎಂಬ ಸಮಾಧಿಯಲ್ಲಿ ದೊರೆತ ಮಮ್ಮಿ. ಇದು ಟ್ಯೂಟನ್ ಖಾಮುನ್ ತಂದೆ  ಫೆರೊ ಅಖೆನಾಟೆನ್ ಮಮ್ಮಿ ಎಂಬುದು ಇತಿಹಾಸಕಾರರ ನಂಬುಗೆ. ಇಲ್ಲಿ ದೊರೆತ ಇನ್ನೊಂದು ಮಮ್ಮಿ ಇತಿಹಾಸ ಕೇಳಿದರೆ ನಿಮ್ಮ ಹುಬ್ಬೇರುವುದು ಖಂಡಿತ. ಏಕೆಂದರೆ ಅಲ್ಲಿ ಹಾಗೆ ದೊರೆತ ಇನ್ನೊಂದು ಮಮ್ಮಿ ಟ್ಯೂಟನ್ ಖಾಮುನ್ ತಾಯಿಯದ್ದು. ಡಿಎನ್ಎ ಪರೀಕ್ಷೆಯ ಪ್ರಕಾರ ಇವನ ತಾಯಿ ಟ್ಯೂಟನ್ ಖಾಮುನ್ ತಂದೆಯ ಸಹೋದರಿ! ಕೆವಿ 35ಎಂಬ ಹೆಸರಿನ ಸಮಾಧಿಯಲ್ಲಿ ಸಿಕ್ಕ ಈ ಅಪರಿಚಿತ ಮಮ್ಮಿಯನ್ನು ದಿ ಯಂಗರ್ ಲೇಡಿ ಎಂಬ ಹೆಸರಿನಿಂದ ಇತಿಹಾಸಕಾರರು ಕರೆದಿದ್ದಾರೆ.

ಫ್ಲೋ

ಗ್ರಾಫಿಕ್ಸ್ ಇನ್

ರಕ್ತ ಸಂಬಂಧಿಗಳನ್ನೇ ಮದುವೆಯಾಗುತ್ತಿದ್ದ ಫೆರೊ ರಾಜರು..

ಗ್ರಾಫಿಕ್ಸ್ ಔಟ್

ಫೆರೋ ರಾಜರುಗಳಲ್ಲಿ ಅವರ ರಕ್ತಸಂಭಂಧಿಗಳನ್ನೇ ಮದುವೆಯಾಗುವ ಪರಿಪಾಠವಿದ್ದುದು ಈ ಮಮ್ಮಿಗಳಿಂದ ತಿಳಿದುಬರುತ್ತೆ. ತನ್ನ ತಂದೆ ತನ್ನ ಸಹೋದರಿಯನ್ನೇ ಮದುವೆಯಾದಂತೆ ಟ್ಯೂಟಿಕಾರನ್ ಸಹ ತನ್ನ ಮಲಸಹೋದರಿಯಾದ ಅಂಕೆಶನುಮ ಎಂಬವಳನ್ನು ಮದುವೆಯಾಗಿದ್ದ. ಆದರೆ ಹಾಗೆ ಮದುವೆಯಾದ ಇವರಿಗೆ ಹುಟ್ಟಿದ ಇಬ್ಬರೂ ಹೆಣ್ಣುಮಕ್ಕಳು ತೀರಿಕೊಂಡರು. ಮೊದಲನೆಯ ಮಗು ಗರ್ಭಧಾರಣೆಯ ಐದಾರು ತಿಂಗಳಲ್ಲೇ ತೀರಿಕೊಂಡರೆ, ಮತ್ತೊಂದು ಮಗು ಹುಟ್ಟಿದ ನಂತರ ತೀರಿಕೊಂಡಿತು. ಟ್ಯೂಟನ್ ಖಾತೇನ್ ಮತ್ತು ಟ್ಯೂಟನ್ ಖಾಮುನ್ ಎಂದು ಈ ಮಕ್ಕಳಿಗೆ ಹೆಸರಿಡಲಾಗಿತ್ತು ಅಂತ ಸಂಶೋಧಕರು ಹೇಳುತ್ತಾರೆ.

ಫ್ಲೋ

ಗ್ರಾಫಿಕ್ಸ್ ಇನ್

ಪ್ರಪಂಚದಾದ್ಯಂತ ಸಂಚಲನ ಸೃಷ್ಟಿಸಿದ ಟ್ಯೂಟನ್ ಖಾಮುನ್ ಪ್ರದರ್ಶನ..

ಗ್ರಾಫಿಕ್ಸ್ ಔಟ್

ಈಜಿಪ್ಟಿನ ವಸ್ತುಸಂಗ್ರಹಾಲಯದಲ್ಲಿ ಟ್ಯೂಟನ್ ಖಾಮುನ್ ಮುಖವಾಡವು ತುಂಬ ಜನಪ್ರಿಯ ಸಂಕೇತವಾಗಿ ಉಳಿದುಕೊಂಡಿದೆ. ಇನ್ನು ಫೆರೋ ರಾಜರ ಈ ಮಮ್ಮಿಗಳನ್ನು ಸಂಶೋಧಿಸಿದ ಹಲವಾರು ಸಂಶೋಧಕರು ಸಂಶೋಧನೆಯ ಸಮಯದಲ್ಲೇ ತೀರಿಕೊಂಡಿದ್ದನ್ನು ಅಲ್ಲಿನ ಜನರು ಫೇರೊ ರಾಜರ ಶಾಪದಿಂದ ಅವರುಗಳು ಸತ್ತಿದ್ದು ಎಂದು ಬಣ್ಣಿಸುತ್ತಾರೆ. ಟ್ಯೂಟನ್ ಖಾಮುನ್ ನ ಸಮಾಧಿಯಲ್ಲಿ ಸಿಕ್ಕ ಹಲವಾರು ಅಮೂಲ್ಯ ವಸ್ತುಗಳನ್ನು ಪ್ರಪಂಚದಾದ್ಯಂತ ಪ್ರದರ್ಶನಕ್ಕಾಗಿ ತೆಗೆದುಕೊಂಡು ಹೋಗಿರುವುದು ಇವನ ಜನಪ್ರಿಯತೆಗೆ ಸಾಕ್ಷಿ. ಹೀಗೆ ಪ್ರದರ್ಶನಗೊಂಡ ವಸ್ತುಗಳನ್ನು ಪ್ರಪಂಚದ ಎಲ್ಲಾ ಭಾಗದ ಜನರು ಅತೀವ ಕುತೂಹಲದಿಂದ ನೋಡಿದ್ದು ಸಹ ಟ್ಯೂಟನ್ಖಾಮುನ್ ಫೆರೋ ರಾಜರಲ್ಲೇ ಅತ್ಯಂತ ಜನಪ್ರಿಯ ರಾಜನೆಂಬುದನ್ನು ಸಾರಿ ಹೇಳುತ್ತದೆ.

ಫ್ಲೋ

1962ರಲ್ಲಿ ಪ್ಯಾರಿಸ್ ಹಾಗೂ ಜಪಾನ್ ಗಳಲ್ಲಿ ನಡೆದ ಟ್ಯೂಟನ್ ಖಾಮುನ್ ಗೆ ಸಂಬಂಧಿಸಿದ ಇಂತಹ ಪ್ರದರ್ಶನವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದು ದಾಖಲೆಯಾಯಿತು.1972ರಿಂದ 1979ರವರೆಗೆ ಅಮೆರಿಕ, ರಷ್ಯ , ಜಪಾನ್, ಫ್ರಾನ್ಸ್, ಜರ್ಮನಿ ಹೀಗೆ ಹಲವಾರು ದೇಶಗಳಲ್ಲಿ ಪ್ರದರ್ಶನವನ್ನು ನಡೆಸಲಾಯಿತು. ಇದೀಗ ಈ ಪ್ರದರ್ಶನದ ಪ್ರವಾಸವು 2019ರಿಂದ 2022ರವರೆಗೆ ಅಮೆರಿಕದ ಲಾಸ್ ಎಂಜಲಿಸ್ ನಿಂದ ಪ್ರಾರಂಭವಾಗಿ ಕೈರೊ ದ ಗ್ರಾಂಡ್ ಇಜಿಪ್ಷಿಯನ್ ಮ್ಯೂಸಿಯಂನಲ್ಲಿ ಕೊನೆಗೊಳ್ಳಲಿದೆ. ಕೇವಲ 9 ವರ್ಷದಿಂದ 18 ವರ್ಷಗಳವರೆಗೆ ರಾಜ್ಯಭಾರ ನಡೆಸಿದ ಒಬ್ಬ ಬಾಲಕ ಇಂದು ಟ್ಯೂಟನ್ ಖಾಮುನ್ ಹೆಸರಿನಿಂದ ಇಷ್ಟೊಂದು ಜನಪ್ರಿಯನಾಗಿರುವುದು ಜನರಲ್ಲಿಯ ಇತಿಹಾಸದ ಬಗೆಗಿನ ಆಸಕ್ತಿಯನ್ನು ತೋರಿಸುತ್ತದೆ. ಸ್ಪೆಷಲ್ ಡೆಸ್ಕ್​ನಿಂದ ಓಂಪ್ರಕಾಶ್​ನಾಯಕ್, ಬಿಎಂಜಿನ್ಯೂಸ್

Spread the love

Related Articles

Leave a Reply

Your email address will not be published. Required fields are marked *

Back to top button