Breaking NewsLatestಇತರ ಕ್ರೀಡೆಕ್ರೀಡೆಟೆನಿಸ್

Novak Djokovic: ಕ್ವಾರ್ಟರ್ ನಲ್ಲಿ ಸೋತು ಅಗ್ರಸ್ಥಾನದಿಂದ ಕೆಳಗಿಳಿದ ನೊವಾಕ್ ಜೊಕೊವಿಕ್

ದುಬೈ ಓಪನ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಸರ್ಬಿಯಾದ ನಂಬರ್ ಒನ್ ಆಟಗಾರ ನೊವಾಕ್ ಜೊಕೊವಿಕ್ ನಿರಾಸೆ ಅನುಭವಿಸಿದ್ದಾರೆ. ಅಲ್ಲದೆ 361 ವಾರಗಳ ಕಾಲ ಕಾಯ್ದುಕೊಂಡಿದ್ದ ಅಗ್ರ ಸ್ಥಾನವನ್ನು ರಷ್ಯಾದ ಡೇನಿಯಲ್ ಮೆಡ್ವೆಡೆವ್ ಅವರಿಗೆ ಬಿಟ್ಟು ಕೊಟ್ಟಿದ್ದಾರೆ.

ಜೋಕೊ 4-6 6-7 (4-7) ಸೆಟ್‌ಗಳಿಂದ ವಿಶ್ವದ 123ನೇ ಶ್ರೇಯಾಂಕದ ಜಿರಿ ವೆಸೆಲಿ ಸೋಲಿಸಿದರು. ಈ ಸೋಲಿನಿಂದಾಗಿ ಜೊಕೊವಿಕ್ ವಿಶ್ವದ ನಂಬರ್ ಒನ್ ಟೆನಿಸ್ ಆಟಗಾರ ಪಟ್ಟದಿಂದ ಕೆಳಗಿಳಿದಿದ್ದಾರೆ.

ಫೆಬ್ರವರಿ 28 ರಂದು ಹೊಸ ಎಟಿಪಿ ಶ್ರೇಯಾಂಕಗಳನ್ನು ಬಿಡುಗಡೆ ಆಗಲಿದ್ದು, ಮೆಡ್ವೆಡೆವ್ ಮೊದಲ ಸ್ಥಾನಕ್ಕೆ ಬಡ್ತಿ ಪಡೆಯುತ್ತಾರೆ. ಜೊಕೊವಿಕ್ 2020ರ ನಂತರ ಮೊದಲ ಬಾರಿಗೆ ಎಟಿಪಿ ಶ್ರೇಯಾಂಕದಲ್ಲಿ ಮೊದಲ ಸ್ಥಾನದಿಂದ ಕೆಳಗಿಳಿದಿದ್ದಾರೆ. ಅವರು ಸುಮಾರು 361 ವಾರಗಳ ಕಾಲ ವಿಶ್ವದ ನಂಬರ್ ಒನ್ ಸ್ಥಾನದಲ್ಲಿದ್ದರು.

ರೋಜರ್ ಫೆಡರರ್, ರಾಫೆಲ್ ನಡಾಲ್, ಆಂಡಿ ಮರ್ರೆ ಮತ್ತು ನೊವಾಕ್ ಜೊಕೊವಿಕ್ ಇಷ್ಟು ದಿನ ಈ ಸ್ಥಾನ ಅಲಂಕರಿಸಿದ್ದರು. ಈಗ ಈ ನಾಲ್ವರನ್ನು ಹೊರತುಪಡಿಸಿ, ಹೊಸ ಮುಖವು ವಿಶ್ವ ಶ್ರೇಯಾಂಕದ ದೊಡ್ಡ ಮುಖವಾಗಿದೆ.

ಜೊಕೊವಿಕ್ ಇದುವರೆಗೆ 20 ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅತಿ ಹೆಚ್ಚು ಗ್ರ್ಯಾನ್ ಸ್ಲ್ಯಾಮ್‌ಗಳನ್ನು ಗೆದ್ದ ಆಟಗಾರರ ಪಟ್ಟಿಯಲ್ಲಿ ನಡಾಲ್ ಅಗ್ರಸ್ಥಾನದಲ್ಲಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button