ART LITERATURE:
ತುತ್ತು ಅನ್ನಕ್ಕೂ ಗತಿಯಿಲ್ಲದ
ಹರಿದು ಚಿಂದಿಯಾದ ಬಟ್ಟೆಯುಟ್ಟು
ನಿನ್ನೆ ನಾಳೆಗಳ ಯೋಚನೆ ಬಿಟ್ಟು
ವರ್ತಮಾನವ ಎದುರಿಸಲಾಗದೆ
ಮೂಳೆ ಮಾನವನಾಗಿ
ಹೊಟ್ಟೆ ಬೆನ್ನು ಒಂದಾಗಿ
ಹುಟ್ಟಿದ್ದಕ್ಕೆ ಮರುಗುತ್ತಾ
ಹುಟ್ಟಿಸಿದವರನ್ನು ಶಪಿಸುತ್ತಾ
ಕೊನೆಯ ದಿನಗಳನ್ನು,
ಕೊನೆಯ ಕ್ಷಣಗಳನ್ನು ನಿರೀಕ್ಷಿಸುತ್ತಾ
ಮಲಗಿರುವ ಅವನಿಗೆ
ಬೇಕಾಗಿರುವುದು ಒಂದೆ...
ತುತ್ತು ಅನ್ನ!
ಭಾಷಣ, ಮಂದಿರ, ಮಸೀದಿ, ಚರ್ಚ್
ಹಿಜಾಬ್, ಹಲಾಲ್, ಜಿಡಿಪಿ, ಯುದ್ಧ
ಇವ್ಯಾವುವೂ ಅವನಿಗೆ ಬೇಕಿಲ್ಲ..
ಗೊತ್ತೂ ಇಲ್ಲ.. ಬೇಕಾಗೂ ಇಲ್ಲ!
OPN, BMG24x7