ART LITERATURE:
ಒಬ್ಬ ರಾಜನಿದ್ದ. ಅವನಿಗೆ ಜ್ಯೋತಿಷ್ಯದಲ್ಲಿ ಅಪಾರ ನಂಬಿಕೆ. ಅಷ್ಟೇ ಅಲ್ಲ ಮೂಢನಂಬಿಕೆಯು ಉಂಟು. ಇದನ್ನು ಅರಿತುಕೊಂಡ ಜ್ಯೋತಿಷ್ಯಗಳು ಬಾಯಿಗೆ ಬಂದದ್ದನ್ನು ಹೇಳಿ ಮರಳು ಮಾಡಿ ಸನ್ಮಾನ ಪಡೆಯುತ್ತಿದ್ದರು. ಒಮ್ಮೆ ಹಾಗೆಯೇ ಬಂದಾಗ ಜ್ಯೋತಿಶಿಯೋಬ್ಬ ರಾಜನಿಗೆ ಜೋಡಿ ಕಾಗೆಗಳನ್ನು ನೋಡುವುದು ಅದೃಷ್ಟ ತರುತ್ತದೆ ಎಂದು ಹೇಳಿ ಬಹುಮಾನ ಪಡೆದು ಹೋದನು.
ಅವನ ಮಾತನ್ನು ನಂಬಿ ರಾಜ ತನ್ನ ಮಂತ್ರಿಯನ್ನು ಕರೆದು ಜೋಡಿ ಕಾಗೆಗಳು ಕಂಡಾಗ ನನಗೆ ತಿಳಿಸಿ,ಇದೊಂದೇ ನಿಮ್ಮ ಈಗಿನ ಕೆಲಸ, ಬೇರೆಲ್ಲಾ ಕೆಲಸಗಳನ್ನು ಆಮೇಲೆ ನೋಡುವ ಎಂದು ಆಜ್ಞೆ ಮಾಡಿದನು.ಮಂತ್ರಿ ದಿನವಿಡೀ ಅರಮನೆಯ ಹೊರಗೆ ಕೂಳಿತು ಕಾಗೆಗಳಿಗಾಗಿ ಕಾಯುತ್ತಿದ್ದನು. ಮೂರನೇ ದಿನವೇ ಅರಮನೆಯ ಅಂಗಳದಲ್ಲಿ ಮರದ ಕೊಂಬೆಯ ಮೇಲೆ ಎರಡು ಕಾಗೆಗಳು ಜೊತೆಯಾಗಿ ಕೂತಿದ್ದನ್ನು ಕಂಡ. ರಾಜನ ಬಳಿ ಹೋಡಿ ಹೋಗಿ, ಪ್ರಭು ಭೇಗ ಬನ್ನಿ. ನೀವು ನಿರೀಕ್ಷಿಸಿದ ಅದೃಷ್ಟ ದೇವತೆಗಳು ಮರದ ಮೇಲೆ ಕುಳಿತಿವೆ ಎಂದು ಉಸಿರು ಬಿಡುತ್ತಾ ಹೇಳಿದ.ವಿಷಯ ತಿಳಿದ ರಾಜ ರಭಸದಿಂದ ಓಡಿಬಂದ.
ಆದರೆ ಅಷ್ಟರಲ್ಲಿ ಒಂದು ಕಾಗೆ ಹಾರಿಹೋಗಿತ್ತು. ಒಂದೇಕಾಗೆ ಕುಳಿತಿರುವುದನ್ನು ನೋಡಿ ರಾಜನಿಗೆ ತಾಳಲಾರದ ಕೋಪ ಬಂತು, ನೀನು ಮಾತ್ರ ಜೋಡಿ ಕಾಗೆಗಳನ್ನು ನೋಡಿ ಅದೃಷ್ಟಕ್ಕೆ ಪಾತ್ರನಾಗಿ ಬಿಟ್ಟೆ. ಅದಕ್ಕೆ ನಿನಗೆ ದಂಡನೆಯಾಗಿ ಹತ್ತು ಚವಟಿ ಏಟುಗಳನ್ನು ಶಿಕ್ಷೆಯಾಗಿದೆ ವಿಧಿಸುತ್ತೇನೆ ಎಂದು ಸೇವಕರನ್ನು ಕರೆದು, ಮಂತ್ರಿಗೆ ಹೋಡೆಯಲು ಹೇಳಿದ.
ಸೇವಕಅರು ಹೋಡೆಯಲು ಆರಂಭಿಸಿದರು. ಚವಟಿ ಏಟುಗಳನ್ನು ತಿನ್ನುತ್ತಾ ಮಂತ್ರಿ ನಗಲು ಪ್ರಾರಂಭಿಸಿದ. ಇದನ್ನು ನೋಡಿದ ರಾಜನಿಗೆ ಆಶ್ಚರ್ಯವಾಯಿತು. ಯಾಕೆ ನಗುತ್ತಿದ್ದೀರಿ ಮಂತ್ರಿಗಳೆ? ಎಂದು ಪ್ರಶ್ನಿಸಿದ ಏನಿಲ್ಲ ಪ್ರಭು ಜೋಡಿ ಕಾಗೆಗಳನ್ನು ನೋಡಿದ ಅದೃಷ್ಟದ ಫಲವಾಗಿ ನನಗೆ ಸಿಕ್ಕಿದ್ದು ಏನು? ಹತ್ತು ಚವಟಿ ಏಟುಗಳು ಅದನ್ನು ನೆನೆದು ನಗು ಬಂತು ಅಷ್ಟೇ ಎಂದನು. ಆಗ ರಾಜನಿಗೆ ತನ್ನ ತಪ್ಪಿನ ಅರಿವಾಗಿ ನಾಚಿಕೆಯಾಯಿತು. ಇನ್ನು ಮುಂದೆ ಇಂಥ ಮೂಢನಂಬಿಕೆಗಳಿಗೆ ಬಲಿಯಾಗಬಾರದು ಎಂದು ಆ ಕ್ಷಣದಲ್ಲೇ ರಾಜ ನಿರ್ಧಾರ ಮಾಡಿದನು.