ART LITERATURE:
ಅದೊಂದು ರಾಜ್ಯ. ಆ ರಾಜ್ಯದಲ್ಲಿ ಒಬ್ಬ ಶ್ರೀಮಂತನಿದ್ದ. ಆತ ವಿದ್ವಾಂಸ ಕೂಡ ಆಗಿದ್ದ. ರಾಜ ಆತನ ಸಂಪತ್ತನ್ನು ಮುಟ್ಟುಗೋಲು ಹಾಕಿಕೊಳ್ಳಲು ಯೋಚಿಸಿ ತನ್ನ ಅರಮನೆಗೆ ಅವನನ್ನು ಕರೆಸಿದ. ರಾಜ ವಿದ್ವಾಂಸರಿಗೆ ವಿದ್ವಾಂಸರೇ ನನ್ನನ್ನು ಬಹಳ ದಿನಗಳಿಂದ ಕಡುತ್ತಿರುವ ಒಂದು ಪ್ರಶ್ನೆಯಿದೆ, ಇದಕ್ಕೆ ನೀವು ಸಮಂಜಸ ಉತ್ತರ ಹೇಳಬೇಕು.
ಹೇಳದಿದ್ದರೆ ನಿಮ್ಮ ಸಂಪತ್ತೆಲ್ಲ ನನ್ನದಾಗುತ್ತದೆ ಎಂದು ಹೇಳುತ್ತಾನೆ. ರಾಜ ವಿದ್ವಾಂಸನಿಗೆ ನಿಮ್ಮಲ್ಲಿ ಬೇಕಾದಷ್ಟು ಧರ್ಮಗಳಿವೆ, ಯಾವ ಧರ್ಮ ಶ್ರೇಷ್ಠ? ಎಂದು ಕೇಳಿದನು. ರಾಜನ ಪ್ರಶ್ನೆಗೆ ವಿದ್ವಾಂಸ ಸ್ವಲ್ಪನು ವಿಚಲಿತನಾಗದೆ ನೊಡಿ ಸ್ವಾಮಿ, ನೋಡಿ ಸ್ವಾಮಿ ನಿಮ್ಮಲಿ ಒಂದು ವಜ್ರವಿದೆ ಎಂದು ತಿಳಿದುಕೋಳ್ಳಿ.
ಆದರೆ ಇದನ್ನು ನೀವು ಮರೆ ಮಾಚಿ. ಕಡಿಮೆ ಬೆಲೆಯ ನಕಲಿ ವಜ್ರಗಳನ್ನು ಮಾಡಿಸಿ ಇದು ಅಮುಲ್ಯ ವಜ್ರ ಇದನ್ನು ಯಾರಿಗೂ ಹೇಳಬೇಡಿ ಎಂದು ಯಾರಿಗಾದರು ಕೊಟ್ಟರೆ ಅದನ್ನು ಅವರು ಅಮುಲ್ಯ ವಜ್ರವೆಂದು ಜೋಪಾನ ಮಾಡುತ್ತಾರೆ. ಧರ್ಮ ಕೂಡ ಹಾಗೆಯೇ ಅವರ ಅವರ ಧರ್ಮ ಅವರವರಿಗೆ ಶ್ರೇಷ್ಠ ಎಂದನು. ವಿದ್ವಾಂಸನ ಉತ್ತರದಿಂದ ಸಂತೃಪ್ತಗೊಂಡ ರಾಜ ಅವನನ್ನು ಸನ್ಮಾನಿಸಿ ಗೌರವದಿಂದ ಕಳುಹಿಸಿ ಕೊಟ್ಟನು.