ART LITERATURE:
ರಾಜಪುರವೆಂಬ ಊರು, ಓರ್ವ ಸನ್ಯಾಸಿ ಒಮ್ಮೆ ಆ ಊರಿಗೆ ಬಂದ. ಊರ ಜನರು ಭಯ ಭಕ್ತಿಯಿಂದ ಅವರನ್ನು ಬರಮಾಡಿಕೊಂಡು ಉಪಚರಿಸಿದರು. ಆದರಾತಿಥ್ಯ ನೀಡಿ ತಮ್ಮನ್ನು ಹರಸಲು ಬೇಡಿಕೊಂಡರು. ಸಂತೃಪ್ತನಾದ ಸನ್ಯಾಸಿ ಕೈ ಎತ್ತಿ ' ಮುದುಕರೇ ನೀವು ಮೊದಲು ಸತ್ತು ಹೋಗಿರಿ, ನಿಮ್ಮ ಸ್ಥಾನಕ್ಕೆ ಬಂದ ಯುವಕರು ನಂತರ ಸಾಯಲಿ, ನಿಮ್ಮ ನಿಮ್ಮ ಮಕ್ಕಳೂ ಮೊಮ್ಮಕ್ಕಳನ್ನು ಕಂಡು ಸಾಯುವಂತಾಗಲಿ' ಎಂದು ಹರಸಿ ಹೊರಟುಹೋದ.
ನೆರೆದ ಜನರೆಲ್ಲ ಒಂದು ಕ್ಷಣ ಸ್ತಂಭೀಭೂತರಾದರು, ಇದೆಂತಹ ಆಶೀರ್ವಾದ ? ಚೇತರಿಸಿ ಕೊಂಡ ಅನೇಕರು ಸನ್ಯಾಸಿಯ ವಿರುದ್ಧ ಧಿಕ್ಕಾರ ಕೂಗಿದರು, ಕೆಲವರು ಕತ್ತಿ ಹಿಡಿದು ಅವರನ್ನು ಇರಿಯಲು ಹೊರಟರು. ಏನೋ ಸೇವೆ ಸತ್ಕಾರಗಳಿಂದ ಸಂಪ್ರೀತನಾಗಿ ಊರ ಒಳಿತಿಗಾಗಿ ಹರಸುವನೆಂದು ತಿಳಿದರೆ ಅವನು ಎಲ್ಲರೂ ಸಾಯಲಿ ಎಂದು ಶಪಿಸುವುದೇ! ಎಂದು ಗಲಾಟೆ ಜೋರಾಯಿತು. ಆಗ ಆ ಅತೀ ವೃದ್ಧ ಹಾಗೂ ಹೆಚ್ಚುತಿಳಿದವನೊಬ್ಬ ಎದ್ದು ನಿಂತು ಕೂಗಿದ. ನೀರಿನಲ್ಲಿ ಕತ್ತಿ ಹಿಡಿದು ಹೊರಟವರು ಹೋಗದಿರಿ, ಘೋಷಣೆ ಕೂಗುತ್ತಿರುವವರೂ ಕೂಗದಿರಿ ಗಲಾಟೆ ಮಾಡುತ್ತಿರುವವರೂ ಮಾಡದಿರಿ. ಆ ಸನ್ಯಾಸಿ ತಪ್ಪಾಗಿ ಹರಸಿಲ್ಲ. ಒಳಿತನ್ನೇ ಬಯಸಿ ಹರಸಿದ್ದಾರೆ. ಸಾಯಲಿ ಎಂದು ಕೈ ಎತ್ತಿ ಶಪಿಸುವುದು ಹರಸುವುದೆಂದು ಅರ್ಥವೇನು? ಈ ಮುದುಕನಿಗೂ ಮುದಿತನದ ಹುಚ್ಚು ಹಿಡಿದಿರಬೇಕು. ನಡೆಯಿರಿ ಎಲ್ಲಾ ಪ್ರತಿಕಾರ ತೀರಿಸಿಕೊಳ್ಳೋಣ ಎಂದು ಕೆಲವು ಮಂದಿ ಸಿಟ್ಟಿನಿಂದ ಹಾರಾಡಿದರು. ಅದಕ್ಕೆ ವೃದ್ಧ ಶಾಂತಿ…… ಶಾಂತಿ ….. ದಯವಿಟ್ಟು ನನ್ನ ಮಾತು ಮೊದಲು ಪೂರ್ತಿ ಕೇಳಿಸಿಕೊಳ್ಳಿ. ಮುದುಕರು ಮೊದಲು ಸಾಯಿರಿ ಅಂದರೆ, ಹೇಗೂ ಅವರು ತಮ್ಮ ಜೀವಿತಾವಧಿ ಕಳೆದವರಾಗಿದ್ದಾರೆ. ಇನ್ನು ಅವರೆದುರೇ ಅವರ ಮಕ್ಕಳು ಮತ್ತು ಮೊಮ್ಮಕ್ಕಳು ಸತ್ತರೆ ಅವರಿಗೆ ಪುತ್ರ ಶೋಕಾದಿಗಳು ಕಾಡುವುದಿಲ್ಲವೇ? ಹೀಗಾಗಿ ಇಹಲೋಕದ ಯಾತ್ರೆ ಮುಗಿಯುವಂತಾಗಲಿ ಎಂಬುವುದು ಅದರ ಅರ್ಥ. ಮುದುಕರ ಸ್ಥಾನಕ್ಕೆ ಬಂದ ಯುವಕರು ನಂತರ ಸಾಯಲಿ ಎಂದರೆ ಅವರೂ ತಮ್ಮ ಹಿರಿಯರ ಹಾಗೆ ಪೂರ್ಣಾಯುಷ್ಯ ಬಾಳಿ ಬುದುಕಿ ತದನಂತರವಷ್ಟೇ ಅಸುನೀಗಲಿ ಎಂದು. ನಂತರ ಮಕ್ಕಳು ಅವರ ಮೊಮ್ಮಕ್ಕಳನ್ನು ಕಂಡು ಸಾಯಲಿ ಅಂದರೆ ಅವರೂ ತಂದೆ ತಾತರಂತೆ ಮುದುಕರಾದ ಮೇಲೆ ಹಸುನೀಗಿದರೆ ಸಾಕು ಎಂದರ್ಥ, ಯಾರೂ ರೋಗರುಜಿನಾದಿಗಳು ಬಂದು ,ಅನ್ಯರ ಅಕ್ರಮಣ ದಾಳಿ ತಿಂದು ಅರ್ಧಾಯುಷ್ಯದಲ್ಲೇ ಮೃತ್ಯು ಹೊಂದದಂತಾಗಲಿ ಎಂದು ಆಶೀರ್ವಾದ ಮಾಡಿ ಹೋಗಿದ್ದಾರೆ ಎಂದು ವಿವರಿಸಿದ. ಅರ್ಥ ತಿಳಿಯುತ್ತಿದ್ದಂತೆ ಎಲ್ಲರೂ ಸನ್ಯಾಸಿಯ ಗುಣಗಾನ ಮಾಡಿ ಜಯಕಾರದ ಘೋಷಣೆ ಕೂಗಿದರು
ನೀತಿ: ಆತುರಗಾರನಿಗೆ ಬುದ್ದಿ ಮಟ್ಟ