ಈ ಕ್ಷಣ :

ಇಂದಿನ ರಾಶಿ ಭವಿಷ್ಯ: ಯಾರಿಗೆ ಶುಭ? ಯಾರಿಗೆ ಅಶುಭ

Published 16 ಮಾರ್ಚ್ 2023, 14:29 IST
Last Updated 6 ಮೇ 2023, 21:59 IST
ಸ್ನೇಹಿತನ ಕತ್ತು ಕೊಯ್ದು ರಕ್ತ ಕುಡಿದ ಕಿರಾತಕ! ಬೆಚ್ಚಿಬಿದ್ದ ಚಿಂತಾಮಣಿ

ASTROLOGY:

ಮೇಷ ರಾಶಿ: ತಪ್ಪು ನಿರ್ಣಯಗಳನ್ನು ತೆಗೆದುಕೊಳ್ಳಬೇಡಿ. ಹಲವು ದಿನದಿಂದ ಮಾಡಬೇಕಾದ ಕೆಲಸ ಇಂದು ಮುಗಿಯತ್ತೆ. ಬೇರೆಯವರ ಮಾತು ಕೇಳಿ ಮೋಸ ಹೋಗುವ ಅವಕಾಶವಿದೆ ಹುಷಾರಾಗಿರಿ. ವೈದ್ಯ ವೃತ್ತಿಯವರಿಗೆ ಒಳ್ಳೆಯ ದಿನ. ಹಾಲು ವ್ಯಾಪಾರರಿಗೆ ಲಾಭ ಆಗುವ ಸಾಧ್ಯತೆ ಇದೆ.

ವೃಷಭ ರಾಶಿ: ಈ ದಿನ ಉತ್ತಮವಾಗಿದೆ. ಕೆಲವು ಮೂಲಗಳಿಂದ ಆದಾಯ ಬರುವ ದಿನವಾಗಿದೆ. ಹಿರಿಯರ ಆರೋಗ್ಯದ ಮೇಲೆ ಗಮನ ಹರಿಸಿ. ಮನೆಯಲ್ಲಿ ಮದುವೆಯ ಪ್ರಸ್ತಾಪ ಆಗಲಿದೆ. ಸ್ನೇಹಿತರ ಆಗಮನದಿಂದ ಸಂತೋಷವಾಗಿರುತ್ತೀರಿ. ದುಂದುವೆಚ್ಚ ಮಾಡದಿರಿ.

ಮಿಥುನ ರಾಶಿ: ಸಾಂಸಾರಿಕ ಜೀವನ ಉತ್ತಮವಾಗಿದೆ. ಇಂದು ನಿಮಗೆ ಅನಾರೋಗ್ಯ ಉಂಟಾಗುವ ಸಾಧ್ಯತೆ ಇದೆ. ಕೆಲಸದಲ್ಲಿ ಇನ್ನಷ್ಟು ಜವಾಬ್ದಾರಿಯಿಂದ ಕೆಲಸ ಮಾಡಿ. ನಿಮ್ಮ ತಪ್ಪನ್ನು ಹುಡುಕಲು ಜನರು ಕಾಯುತ್ತಿರುತ್ತಾರೆ ಅದಕ್ಕೆ ಆಸ್ಪದ ಕೊಡಬೇಡಿ. ಮನೆಯಲ್ಲಿ ಶಾಂತಿಯ ವಾತಾವರಣವಿರುತ್ತದೆ.

ಕರ್ಕ ರಾಶಿ: ಹೊಸ ವಾಹನ ಖರೀದಿ ಮಾಡುವ ಯೋಗವಿದೆ. ಆರೋಗ್ಯದ ದೃಷ್ಟಿಯಿಂದ ಯೋಗವನ್ನು ಮಾಡಿ. ಸಾಲಗಾರರ ಕಾಟದಿಂದ ಮುಕ್ತಿ ದೊರೆಯಲಿದೆ. ಕೋರ್ಟ್ ವ್ಯವಹಾರಗಳಲ್ಲಿ ಜಯ ಸಿಗಲಿದೆ. ಪತಿಯ ವಿಷಯದಲ್ಲಿ ಮನಸ್ತಾಪ ಉಂಟಾಗಲಿದೆ. ಕೃಷಿಕರಿಗೆ ಒಳ್ಳೆಯ ಫಲ ಸಿಗಲಿದೆ. ಸಂಗೀತಗಾರರಿಗೆ ಕೀರ್ತಿ ಸನ್ಮಾನ ಸಿಗುವ ದಿನ.

ಸಿಂಹ ರಾಶಿ: ಈ ದಿನ ವೈವಾಹಿಕ ಜೀವನಕ್ಕೆ ಕಾಲಿಡುವವರಿಗೆ ಸಂತೋಷದ ಸುದ್ಧಿ ಸಿಗಲಿದೆ. ಕೈಗೊಂಡ ಕೆಲಸವನ್ನು ಅರ್ಧದಲ್ಲೇ ಬಿಡಬೇಡಿ ಪೂರ್ಣಗೊಳಿಸಿ. ಸಹೋದರನಿಂದ ಆರ್ಥಿಕ ಸಂಕಷ್ಟ ಉಂಟಾಗಲಿದೆ. ಆಸ್ತಿಯಲ್ಲಿ ಪಾಲು ಸಿಗುತ್ತದೆ. ಹೊಸ ಉದ್ಯೋಗವನ್ನು ಶುರು ಮಾಡಲು ಉತ್ತಮ ದಿನ.

ಕನ್ಯಾ ರಾಶಿ: ಇಂದು ಪುಣ್ಯಕ್ಷೇತ್ರಗಳ ದರ್ಶನ ಮಾಡಲಿದ್ದೀರಿ. ಬಟ್ಟೆ ವ್ಯಾಪಾರಿಗಳಿಗೆ ಅನುಕೂಲಕರ ದಿನ. ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಮಾನಸಿಕ ನೆಮ್ಮದಿ ಸಿಗಲಿದೆ. ಜಾತ್ರೆಗಳಲ್ಲಿ ವಸ್ತುಗಳನ್ನು ಖರೀದಿ ಮಾಡುತ್ತೀರಿ. ಹೊಸ ಕ್ಷೇತ್ರದಲ್ಲಿ ಪ್ರಗತಿ ಕಾಣಲಿದ್ದೀರಿ. ಕೋಳಿ ಸಾಕಾಣಿಕೆ ಮಾಡುವವರಿಗೆ ಲಾಭದ ದಿನ.

ತುಲಾ ರಾಶಿ: ಸೀರೆ ವ್ಯಾಪಾರಿಗಳಿಗೆ ಲಾಭ ಸಿಗುವ ದಿನ. ದೂರ ಪ್ರಯಾಣ ಸಂಭವ. ದೇವತಾ ಕಾರ್ಯಗಳಲ್ಲಿ ಭಾಗಿಯಾಗುತ್ತೀರ. ಆರೋಗ್ಯ ಉತ್ತಮವಾಗಿರುತ್ತದೆ. ಸಹೋದ್ಯೋಗಿಗಳಿಂದ ಉತ್ತಮ ಸಹಕಾರ ಸಿಗಲಿದೆ. ಸ್ವಂತ ಪರಿಶ್ರಮದಿಂದ ಯಶಸ್ಸು ಗಳಿಸುತ್ತೀರಿ. ಮನೆಯಲ್ಲಿ ಸಂತಸದ ವಾತಾವರಣ.

ವೃಶ್ಚಿಕ ರಾಶಿ: ರಾಜಕೀಯ ಕ್ಷೇತ್ರದಲ್ಲಿ ಮೇಲುಗೈ ಸಾಧಿಸಲಿದ್ದೀರಿ. ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ. ಜವಾಬ್ದಾರಿಯಿಂದ ಕಾರ್ಯ ನಿರ್ವಹಣೆ. ಆರೋಗ್ಯದಲ್ಲಿ ಚೇತರಿಕೆ ಕಾಣುವಿರಿ. ಹೋಟೆಲ್ ಉದ್ಯಮದವರಿಗೆ ಲಾಭ. ಕೌಟಂಬಿಕ ಜೀವನದಲ್ಲಿ ಸಂತಸ. ಆಪ್ತರಿಂದ ಉಡುಗೊರೆ ಸಿಗಲಿದೆ.

ಧನು ರಾಶಿ: ಆಭರಣದ ವ್ಯಾಪಾರಿಗಳಿಗೆ ಇಂದು ಉತ್ತಮ ದಿನ. ಕೋರ್ಟ್ ವ್ಯಾಜ್ಯಗಳು ಇಂದು ಬಗೆಹರೆಯಲಿದೆ. ಸಂಗಾತಿಯ ಜೊತೆ ಪ್ರಯಾಣ ಮಾಡುವಿರಿ. ವೈವಾಹಿಕ ವಿಚಾರದಲ್ಲಿ ಪ್ರಗತಿ. ಅರ್ಧಕ್ಕೆ ನಿಂತ ಮನೆ ಪೂರ್ಣಗೊಳ್ಳಲಿದೆ. ಗುರು ಹಿರಿಯರ ಆಶೀರ್ವಾದಿಂದ ನಿಮ್ಮ ಕೆಲಸದಲ್ಲಿ ಯಸಶ್ಸನ್ನು ಕಾಣುತ್ತೀರಿ.

ಮಕರ ರಾಶಿ: ಪ್ರೀತಿ ವಿಷಯದಲ್ಲಿ ಅನುಕೂಲಕರ ದಿನ. ಕೆಲಸದ ಒತ್ತಡದಿಂದ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಅಲರ್ಜಿಯ ಸಮಸ್ಯೆ ಉಂಟಾಗಬಹುದು. ಇಂದು ಕುಟುಂಬದಲ್ಲಿ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ. ನಿಮ್ಮ ವೈಯಕ್ತಿಕ ಜೀವನ ಸ್ವಲ್ಪ ಮಟ್ಟಿಗೆ ಸುಧಾರಿಸಬಹುದು.

ಕುಂಭ ರಾಶಿ: ಆರೋಗ್ಯವೂ ಉತ್ತಮವಾಗಿರುತ್ತದೆ. ಹೊರಗೆ ಕೆಲಸ ಮಾಡುವ ಪುರುಷರಿಗೆ ಒಳ್ಳೆಯ ದಿನ. ಹೆಚ್ಚು ಹಣ ಖರ್ಚು ಮಾಡಬೇಡಿ. ಅನಿರೀಕ್ಷಿತ ಮೂಲಗಳಿಂದ ನೀವು ಹಣವನ್ನು ಪಡೆಯುತ್ತೀರಿ. ನಿಮ್ಮ ಸಮಸ್ಯೆಯಿಂದ ಹೊರ ಬರಲು ಪ್ರಯತ್ನ ಪಡಿ. ನಿಮ್ಮ ಸಂಗಾತಿ ಜೊತೆ ಅನಗತ್ಯ ಕಾರಣಗಳಿಂದ ಜಗಳವಾಗಬಹುದು.

ಮೀನ ರಾಶಿ: ಈ ದಿನ ನಿಮಗೆ ಮಿಶ್ರಫಲವಿದೆ. ಒಳ್ಳೆಯ ಆರೋಗ್ಯಕ್ಕೆ ನಿಯಮಿತ ಆಹಾರ ಅತ್ಯಗತ್ಯ. ಅತ್ತೆ-ಮಾವ ನಿಂದ ಪ್ರಶಂಸೆ ಸಿಗಲಿದೆ. ಹಣಕಾಸಿನ ವ್ಯವಹಾರದಲ್ಲಿ ಜಾಗೃತರಾಗಿರಿ. ಗ್ರಹಗಳ ಸ್ಥಾನಪಲ್ಲಟದಿಂದಾಗಿ ಕೆಲಸದ ಸ್ಥಳದಲ್ಲಿ ಕೆಟ್ಟ ಪರಿಣಾಮ ಬೀರುತ್ತದೆ. ಉದ್ಯಮದಲ್ಲಿ ಉತ್ತಮ ಬೆಳವಣಿಗೆಯಿಂದ ನಿಮ್ಮ ಖ್ಯಾತಿ ಹೆಚ್ಚಲಿದೆ.


ಹೆಚ್ಚು ಓದಿದ ಸುದ್ದಿ

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್

Cartoon ಚಿನಕುರಳಿ| ಸೋಮವಾರ, 26 ಜೂನ್‌ 2023
Published 31 ಮಾರ್ಚ್ 2023, 17:40

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ

Cartoon ಚಿನಕುರಳಿ| ಸೋಮವಾರ, 26 ಜೂನ್‌ 2023
Published 16 ಮಾರ್ಚ್ 2023, 14:45

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ

Cartoon ಚಿನಕುರಳಿ| ಸೋಮವಾರ, 26 ಜೂನ್‌ 2023
Published 16 ಮಾರ್ಚ್ 2023, 14:45

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ

Cartoon ಚಿನಕುರಳಿ| ಸೋಮವಾರ, 26 ಜೂನ್‌ 2023
Published 16 ಮಾರ್ಚ್ 2023, 14:45

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!

Cartoon ಚಿನಕುರಳಿ| ಸೋಮವಾರ, 26 ಜೂನ್‌ 2023
Published 16 ಮಾರ್ಚ್ 2023, 14:45

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್

Cartoon ಚಿನಕುರಳಿ| ಸೋಮವಾರ, 26 ಜೂನ್‌ 2023
Published 16 ಮಾರ್ಚ್ 2023, 14:45

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ

Cartoon ಚಿನಕುರಳಿ| ಸೋಮವಾರ, 26 ಜೂನ್‌ 2023
Published 16 ಮಾರ್ಚ್ 2023, 14:45

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!

Cartoon ಚಿನಕುರಳಿ| ಸೋಮವಾರ, 26 ಜೂನ್‌ 2023
Published 16 ಮಾರ್ಚ್ 2023, 14:45

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ

Cartoon ಚಿನಕುರಳಿ| ಸೋಮವಾರ, 26 ಜೂನ್‌ 2023
Published 16 ಮಾರ್ಚ್ 2023, 14:45

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ

Cartoon ಚಿನಕುರಳಿ| ಸೋಮವಾರ, 26 ಜೂನ್‌ 2023
Published 16 ಮಾರ್ಚ್ 2023, 14:45

ನಟ ದುನಿಯಾ ವಿಜಯ್ ಗೆ ನೋಟೀಸ್ ಜಾರಿ

Cartoon ಚಿನಕುರಳಿ| ಸೋಮವಾರ, 26 ಜೂನ್‌ 2023
Published 16 ಮಾರ್ಚ್ 2023, 14:45

ರಾಮನಗರ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಕಣಕ್ಕೆ : ಹೆಚ್.ಡಿ ಕುಮಾರಸ್ವಾಮಿ

Cartoon ಚಿನಕುರಳಿ| ಸೋಮವಾರ, 26 ಜೂನ್‌ 2023
Published 16 ಮಾರ್ಚ್ 2023, 14:45