ASTROLOGY:
ಸನಾತನ ಎಂದರೆ "ಆದಿ ಮತ್ತು ಅಂತ್ಯವಿಲ್ಲದ, ನಿರಂತರ ನಡೆಯುತ್ತಿರುವ" ಎಂದರ್ಥ ಮತ್ತು ಧರ್ಮ ಎಂದರೆ ಎಲ್ಲರಿಂದ ಎಲ್ಲವನ್ನು ಸ್ವೀಕರಿಸವಂತಹ ಜೀವನ ಮಾರ್ಗ ಎಂದರ್ಥ. ಸೇವೆ ಮಾಡುವುದರಿಂದ ನಮ್ಮ ಮನಸ್ಸಿಗೆ ಆನಂದ ಸಿಗುತ್ತದೆ. ಅದನ್ನು ಸಂಸ್ಕೃತ ಭಾಷೆಯಲ್ಲಿ ರಸ ಎನ್ನುತ್ತಾರೆ. ನಮ್ಮ ಎಲ್ಲಾ ಜೀವಿಗಳಿಗೂ ಭಗವಂತನ ಜೊತೆ ಸೇವೆ ಇರುತ್ತದೆ. ಅದನ್ನ ರಸ ಎನ್ನುತ್ತಾರೆ. ಆ ರಸವೇ ಧರ್ಮ.
ಸನಾತನ ಧರ್ಮವನ್ನು ಆಧ್ಯಾತ್ಮಿಕದ ತೊಟ್ಟಿಲು' ಹಾಗೂ ‘ಎಲ್ಲಾ ಧರ್ಮಗಳ ತಾಯಿ' ಎಂದೂ ಸಹ ಕರೆಯುತ್ತಾರೆ. ಸನಾತನ ಧರ್ಮ ಎಲ್ಲಾ ಧರ್ಮಗಳಂತೆಯಲ್ಲ. ಅದು ಅದರದೇ ಆದ ಒಂದು ಚೌಕಟ್ಟಿಗೆ ಮೀರದ ನೀತಿಗೆ ಒಳಪಟ್ಟ ನಿಯಮವೇ ಆಗಿದೆ. ಸನಾತನ ಧರ್ಮವನ್ನು ನೈಸರ್ಗಿಕ ಕಾನೂನು ಎಂದೂ ಹೇಳಬಹುದು. ಇದು ಕ್ರೈಸ್ತಮತ ಅಥವಾ ಇಸ್ಲಾಂಗೆ ಹೋಲಿಸಲು ಸಾಧ್ಯವಿಲ್ಲ.
ಇದು ಜೀವನವನ್ನು ಹೇಗೆ ಸಾಗಿಸಬೇಕು ಎಂಬುದರ ನಿರ್ದಿಷ್ಟ ನೀತಿಗಳನ್ನು ಪಾಲಿಸುವುದಾಗಿದೆ. ವಿಶ್ವದ ಅತ್ಯಂತ ಪುರಾತನ ಸಂಸ್ಕೃತಿಯಾಗಿ ಇದನ್ನು ಗುರುತಿಸಲಾಗುತ್ತದೆ. ಹಾಗೂ ಸನಾತನ ಜೀವಿಯಿಂದ ಸನಾತನ ಭಗವಂತನ ಸೇವೆ ಮಾಡುವುದೇ ಸನಾತನ ಧರ್ಮ.
ಸನಾತನಧರ್ಮದಲ್ಲಿ ಕೆಲವು ಅಚ್ಚರಿಯ ಸಂಗತಿಗಳಿವೆ ’ಸನಾತನ ಧರ್ಮದ ಪ್ರಕಾರ ದೇವರು ಒಬ್ಬನೇ’ ಅವನೇ ಬ್ರಹ್ಮ.
ಈ ಧರ್ಮದ ಪ್ರಕಾರ ಮೂರು ಋಣಗಳು ಮತ್ತು ಮೂರ್ತಿಗಳಿವೆ. ಪ್ರತಿಯೊಬ್ಬರೂ ಮೂರು ಋಣಗಳಿಗೆ ಬಾಧ್ಯರಾಗಿದ್ದಾರೆ.
ಅವು ಯಾವು ಎಂದರೆ ದೇವಋಣ (ದೇವರಿಂದ ಪಡೆದದ್ದು), ಪಿತೃಋಣ (ವಂಶಸ್ಥರಿಂದ ಪಡೆದದ್ದು) ಮತ್ತು ಗುರುಋಣ (ಗುರುವಿನಿಂದ ಪಡೆದದ್ದು)
ತ್ರಿಮೂರ್ತಿಗಳು: ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ
ಇದು ಸನಾತನ ಧರ್ಮದ ಒಂದು ಸಣ್ಣ ಮಾಹಿತಿ. ಸನಾತನ ಧರ್ಮವನ್ನ ಜಸ್ಟ್ ಮೂರ್ನಾಲ್ಕು ಸಾಲುಗಳಲ್ಲಿ ಹೇಳಿ ಮುಗಿಸಲು ಸಾಧ್ಯವಿಲ್ಲ. ಸನಾತನ ಧರ್ಮದ ವ್ಯಾಪಕತೆ ಅಪಾರ. ಅದನ್ನ ಮುಂದಿನ ಅಧ್ಯಾಯಗಳಲ್ಲಿ ನೋಡೋಣ.