ASTROLOGY:
ಸಾಮಾನ್ಯವಾಗಿ ಎಲ್ಲರಿಗೂ ಪದೇಪದೇ ಗಡಿಯಾರವನ್ನು ನೋಡುವ ಹವ್ಯಾಸ ಇರುತ್ತದೆ. ವಾಸ್ತುಶಾಸ್ತ್ರದಲ್ಲಿ ಮನೆಯಲ್ಲಿ ಇಡುವ ವಸ್ತುಗಳ ನಿಶ್ಚಿತ ಸ್ಥಾನದ ಬಗ್ಗೆ ತಿಳಿಸಿದ್ದಾರೆ. ಅದೇ ರೀತಿ ಗಡಿಯಾರಕ್ಕೂ ಸಹ ಒಂದು ನಿಶ್ಚಿತವಾದ ದಿಕ್ಕುಗಳು ಇರುತ್ತದೆ. ಮನೆಯ ಗೋಡೆಯ ಮೇಲೆ ಇರುವ ಗಡಿಯಾರದಲ್ಲಿ ಅದೃಷ್ಟವು ಅಡಗಿಕೊಂಡಿರುತ್ತದೆ.
ವಾಸ್ತುಶಾಸ್ತ್ರದಲ್ಲಿ ದಿಕ್ಕುಗಳಿಗೆ ಬಹಳ ಮಹತ್ವವಿದೆ. ವಾಸ್ತು ಶಾಸ್ತ್ರದ ಪ್ರಕಾರ ಗಡಿಯಾರವನ್ನು ತಪ್ಪು ದಿಕ್ಕಿನಲ್ಲಿ ಅಳವಡಿಸಿದರೆ ಕೆಟ್ಟ ಪ್ರಭಾವಗಳನ್ನು ಎದುರಿಸಬೇಕಾಗುತ್ತದೆ. ಗಡಿಯಾರವನ್ನು ಸರಿಯಾದ ಸಮಯಕ್ಕೆ ಸೆಟ್ ಮಾಡಿ ಇಡಬೇಕು, ಗಡಿಯಾರದ ಸಮಯ ಹಿಂದಕ್ಕೆ ಇಟ್ಟರೆ ಕಷ್ಟಗಳನ್ನು ಎದುರಿಸಬೇಕಾಗುತ್ತದೆ.
ಮನೆಯಲ್ಲಿ ನಿಂತುಹೋದ ಗಡಿಯಾರ, ಒಡೆದು ಹೋದ ಗಡಿಯಾರ, ಶಬ್ದ ಮಾಡುವ ಗಡಿಯಾರವನ್ನು ಇಟ್ಟುಕೊಳ್ಳಬಾರದು. ಗಡಿಯಾರವನ್ನು ಮುಖ್ಯ ದ್ವಾರದ ಮುಂದೆ ಕೆಳಗೆ ಹಾಕಬಾರದು. ಮನೆಯಲ್ಲಿ ಗಡಿಯಾರವನ್ನು ಪೂರ್ವ ದಿಕ್ಕಿಗೆ ಅಥವಾ ಉತ್ತರ ದಿಕ್ಕಿಗೆ ಅಳವಡಿಸುವುದು ತುಂಬಾನೇ ಉತ್ತಮ. ಪಶ್ಚಿಮ ದಿಕ್ಕಿಗೆ ಗಡಿಯಾರವನ್ನು ಅಳವಡಿಸಬಹುದು ಆದರೆ ಎಲ್ಲಕ್ಕಿಂತ ಉತ್ತಮ ಪೂರ್ವದಿಕ್ಕು ಆಗಿದೆ.
ಯಾವುದೇ ಕಾರಣಕ್ಕೂ ದಕ್ಷಿಣ ದಿಕ್ಕಿಗೆ ಗಡಿಯಾರವನ್ನು ಹಾಕಬಾರದು.ದಕ್ಷಿಣ ದಿಕ್ಕಿಗೆ ಹಾಕುವುದರಿಂದ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಸಾಮಾನ್ಯವಾಗಿ ಕೆಲವರು ಹಳೆಯ ಕ್ಯಾಲೆಂಡರ್ ಅನ್ನು ಹೊಸ ಕ್ಯಾಲೆಂಡರ್ ಕೆಳಗೆ ಹಾಕುತ್ತಾರೆ. ಮನೆಯ ಗೋಡೆಯ ಮೇಲೆ ಯಾವುದೇ ಕಾರಣಕ್ಕೂ ಹಳೆಯ ಕ್ಯಾಲೆಂಡರ್ ಅನ್ನು ಹಾಕಬಾರದು. ಈ ರೀತಿ ಮಾಡಿದರೆ ನಿಮಗೆ ಮುಂಬರುವ ಅವಕಾಶಗಳನ್ನು ನಿಲ್ಲಿಸುತ್ತವೆ.