ಭ್ರಷ್ಟಾಚಾರ ವಿರೋಧಿ ಸಹಾಯವಾಡಿ ಆರಂಭಿಸಲಿರೋ ಪಂಜಾಬ್ ಸಿಎಂ

ಭಗತ್ ಸಿಂಗ್ ಹುತಾತ್ಮ ದಿನವಾದ ಮಾರ್ಚ್ 23ರಂದು ಭ್ರಷ್ಟಾಚಾರ ವಿರೋಧಿ ಸಹಾಯವಾಣಿ ಆರಂಭಿಸುವುದಾಗಿ ಪಂಜಾಬ್ ಸಿಎಂ ಭಗವಂತ್ ಮಾನ್ ಹೇಳಿದ್ದಾರೆ.
'ಭಗತ್ ಸಿಂಗ್ ಅವರ ಹುತಾತ್ಮ ದಿನದಂದು ನಾವು ಭ್ರಷ್ಟಾಚಾರ ವಿರೋಧಿ ಸಹಾಯವಾಣಿ ಸಂಖ್ಯೆಯನ್ನು ಪ್ರಾರಂಭಿಸುತ್ತೇವೆ. ಅದು ನನ್ನ ವೈಯಕ್ತಿಕ ವಾಟ್ಸಾಪ್ ನಂಬರ್ ಆಗಿರುತ್ತದೆ ಎಂದು ತಿಳಿಸಿದ ಅವರು ತಳಮಟ್ಟದಲ್ಲಿ ಸಾಮಾನ್ಯರ ಜೀವನದಲ್ಲಿ ಬದಲಾವಣೆ ತಂದ ಸಿವಿಲ್ ಮತ್ತು ಪೊಲೀಸ್ ಅಧಿಕಾರಿಗಳಿಗೆ ಪ್ರತಿ ತ್ರೈಮಾಸಿಕದಲ್ಲಿ 'ಅತ್ಯುತ್ತಮ ಕಾರ್ಯಕ್ಷಮತೆ ಪ್ರಶಸ್ತಿ'ಯನ್ನು ನೀಡಲಾಗುವುದು ಎಂದರು.
ಯಾರಾದರೂ ಲಂಚ ಕೇಳಿದರೆ ಅದರ ವಿಡಿಯೋ ಅಥವಾ ಆಡಿಯೋ ರೆಕಾರ್ಡ್ ಮಾಡಿ ನನಗೆ ಕಳುಹಿಸಿ. ಭ್ರಷ್ಟರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇನೆ. ಪಂಜಾಬ್‌ನಲ್ಲಿ ಇನ್ನು ಮುಂದೆ ಭ್ರಷ್ಟಾಚಾರ ಕೆಲಸ ಮಾಡುವುದಿಲ್ಲ. ತೊಂಬತ್ತೊಂಬತ್ತು ಪ್ರತಿಶತ ಜನರು ಪ್ರಾಮಾಣಿಕರಾಗಿದ್ದಾರೆ. ಆದರೆ 1 ಪ್ರತಿಶತದಷ್ಟು ಜನರು ವ್ಯವಸ್ಥೆಯನ್ನು ಒಡೆಯುತ್ತಿದ್ದಾರೆ ಎಂದು ಭಗವಂತ್ ಮಾನ್ ಹೇಳಿದರು.
ಮಾನ್ ಕ್ರಮವನ್ನ ಶ್ಲಾಘಿಸಿದ ದೆಹಲಿ ಮುಖ್ಯಮಂತ್ರಿ, ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್, ಪಂಜಾಬ್‌ನಲ್ಲಿ ಭ್ರಷ್ಟಾಚಾರ ಇನ್ನು ಮುಂದೆ ಕೆಲಸ ಮಾಡುವುದಿಲ್ಲ ಎಂದರು. ಲಂಚ ನೀಡುವಂತೆ ಯಾರಾದರೂ ಕೇಳಿದರೆ, ಅಧಿಕಾರಿಯ ವಿಡಿಯೋ ಮಾಡಿ, ವಾಟ್ಸಾಪ್ ಸಂಖ್ಯೆಗೆ ಕಳುಹಿಸಿ ಎಂದು ಹೇಳಿದ್ದಾರೆ.