BREAKING NEWS:
Garbage Bill: ಬೆಂಗಳೂರು: ಮಹಾನಗರದಲ್ಲಿ ಕಸದ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಈ ದೂರುಗಳ ನಡುವೆ ಬಿಬಿಎಂಪಿ ನಾಗರಿಕರಿಂದ ತಿಂಗಳಗೊಮ್ಮೆ ವಿದ್ಯುತ್ ಬಿಲ್, ಕುಡಿಯುವ ನೀರಿನ ಬಿಲ್ ಜತೆಗೆ ಕಸದ ನಿರ್ವಹಾಣಾ ಬಿಲ್ ವಸೂಲಿ ಮಾಡಲು ಪ್ಲಾನ್ ಮಾಡಿದೆ. ಅದರ ಪ್ರಕಾರ ಬೆಂಗಳೂರಿಗರು ಪ್ರತಿ ತಿಂಗಳು ಗಾರ್ಬೆಜ್ ಯೂಸರ್ ಫೀ ಕಟ್ಟಲು ಸಜ್ಜಾಗಬೇಕು. ಈ ಸಂಬಂಧ ಬಿಬಿಎಂಪಿ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ. ನಗರ ನಿವಾಸಿಗಳು ಈಗಾಗಲೇ ಆಸ್ತಿ ತೆರಿಗೆ ಜತೆ ವರ್ಷಕ್ಕೊಮ್ಮೆ ಗಾರ್ಬೆಜ್ ಸೆಸ್ ಕೂಡ ಕಟ್ಟುತ್ತಿದ್ದಾರೆ. ಇದರ ಜತೆಗೆ ಹೊಸದಾಗಿ ಗಾರ್ಬೇಜ್ ಯೂಸರ್ ಫೀಯನ್ನು ಹೇರುವುದು ಬಿಬಿಎಂಪಿ ಉದ್ದೇಶ.
ಬಿಬಿಎಂಪಿ ಪ್ರಸ್ತಾವನೆಗೆ ಸರ್ಕಾರ ಇನ್ನೂ ಅನುಮತಿ ನೀಡಿಲ್ಲ. ಅನುಮತಿ ಕೊಟ್ಟರೆ ಹೊಸದಾಗಿ ಕಸದ ಶುಲ್ಕದ ಹೊರೆ ನಾಗರಿಕರ ಮೇಲೆ ಬೀಳಲಿದೆ. ಪಾಲಿಕೆ ಈಗಾಗಲೇ ಮನೆಮನೆಯಿಂದ ಕಸ ಸಂಗ್ರಹಿಸುತ್ತಿದೆ. ಇದರ ನಿರ್ವಹಣೆಗೆ ಕೋಟಿಗಟ್ಟಲೇ ಖರ್ಚಾಗುತ್ತಿದೆ. ಇದನ್ನು ನಾಗರಿಕರಿಂದ ವಸೂಲಿ ಮಾಡಬೇಕು. ನಿರ್ವಹಣಾ ಆದಾಯ ಕ್ರೋಢೀಕರಿಸಬೇಕು ಎಂಬುದು ಪಾಲಿಕೆ ಪ್ಲಾನ್.
ಪಾಲಿಕೆ ಪ್ಲಾನ್ ಯಶಸ್ವಿಯಾದರೆ ತಿಂಗಳಿಗೆ 40 ಕೋಟಿ ರೂಪಾಯಿ ಸಂಗ್ರಹದ ನಿರೀಕ್ಷೆ ಇದೆ. ಇದರಿಂದ ಪೌರಕಾರ್ಮಿಕರು ಹಾಗೂ ಕಸದ ಗುತ್ತಿಗೆದಾರರ ಬಿಲ್ ನೀಡಲು ಅನುಕೂಲವಾಗಲಿದೆ ಎನ್ನಲಾಗಿದೆ.