BREAKING NEWS:
ನವದೆಹಲಿ: ಕೋವಿಡ್ ಮೂರನೇ ಅಲೆಯ ಭೀತಿ ನಡುವೆಯೇ ಕಳೆದ ಮೂರು ವಾರಗಳಲ್ಲಿ ಅತ ಹೆಚ್ಚು ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ.
ಶುಕ್ರವಾರ 44,230 ಹೊಸ ಕೇಸ್ಗಳು ದಾಖಲಾಗುವುದರೊಂದಿಗೆ, ದೇಶದ ಕೋವಿಡ್ ಗ್ರಾಫ್ ಸತತವಾಗಿ ಮೇಲ್ಮುಖವಾಗಿ ಸಾಗುತ್ತಲೇ ಇರುವುದು ಸ್ಪಷ್ಟವಾಗಿದೆ.
ಕೋವಿಡ್ ಸೋಂಕು ಅತಿ ವೇಗವಾಗಿ ಹೆಚ್ಚುತ್ತಿರುವುದನ್ನು ಈ ಗ್ರಾಫ್ ಸೂಚಿಸುತ್ತಿದೆ. ಕೇರಳ ಮತ್ತು ಈಶಾನ್ಯ ರಾಜ್ಯಗಳಲ್ಲಿ ಕೋವಿಡ್ ಕೇಸ್ಗಳು ತೀವ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಳೆದ ವಾರಕ್ಕಿಂತ ಗಮನಾರ್ಹ ಮಟ್ಟದಲ್ಲಿ ಕೋವಿಡ್ ಗ್ರಾಫ್ನಲ್ಲಿ ಏರಿಕೆ ಕಂಡಿದೆ.
ಕೇರಳದಲ್ಲಿ ಕಳೆದ ಮೂರು ದಿನಗಳಲ್ಲಿ 22 ಸಾವಿರಕ್ಕೂ ಹೆಚ್ಚು ಹೊಸ ಕೇಸ್ಗಳು ವರದಿಯಾಗಿದ್ದು, ದೇಶದ ಸಕ್ರಿಯ ಕೇಸ್ಗಳು ಶೇ.37ಕ್ಕಿಂತ ಹೆಚ್ಚಾದಂತಾಗಿದೆ. ನಿರ್ವಹಣೆಗೆ ಕೇಂದ್ರ ಸರಕಾರ ತಂಡವೊಂದನ್ನು ಕಳಿಸಲು ನಿರ್ಧರಿಸುವ ಮಟ್ಟಿಗೆ ಕೇರಳದಲ್ಲಿನ ಕೋವಿಡ್ ಪ್ರಕರಣಗಳ ಏರಿಕೆ ತೀವ್ರ ಗತಿಯಲ್ಲಿದೆ.
ಕೇರಳದ ನೆರೆಯ ರಾಜ್ಯ ಕರ್ನಾಟಕದಲ್ಲಿಯೂ ಶುಕ್ರವಾರ ಕೋವಿಡ್ ಪ್ರಕರಣಗಳಲ್ಲಿ ಏರಿಕೆ ಕಂಡಿದ್ದು, 2,052 ಚಹೊಸ ಪ್ರಕರಣಗಳು ವರದಿಯಾಗಿವೆ. ಇದು ಬುಧವಾರಕ್ಕಿಂತ ಶೇ.34ರಷ್ಟು ಹೆಚ್ಚು. ಇದರಲ್ಲಿ ಬೆಂಗಳೂರೊಂದರಿಂದಲೇ ಕನಿಷ್ಠ 505 ಕೇಸ್ಗಳು ವರದಿಯಾಗಿವೆ.