ಈ ಕ್ಷಣ :

ಆರ್ಥಿಕ ದಿವಾಳಿಯತ್ತ ದ್ವೀಪರಾಷ್ಟ್ರ: ಮೊಟ್ಟೆ 35 ರೂಪಾಯಿ, ಕಪ್ ಟೀ 100 ರೂಪಾಯಿ, ಕೆಜಿ ಚಿಕನ್ 1000 ರೂಪಾಯಿ!

Published 16 ಮಾರ್ಚ್ 2023, 14:18 IST
Last Updated 6 ಮೇ 2023, 13:33 IST
ಸ್ನೇಹಿತನ ಕತ್ತು ಕೊಯ್ದು ರಕ್ತ ಕುಡಿದ ಕಿರಾತಕ! ಬೆಚ್ಚಿಬಿದ್ದ ಚಿಂತಾಮಣಿ

BREAKING NEWS:

ಅದೊಂದು ಘಟನೆ ಇವತ್ತು ದ್ವೀಪರಾಷ್ಟ್ರದ ಜನರ ಬದುಕಿಗೆ ಕೊಳ್ಳಿ ಇಟ್ಟು ಬಿಟ್ಟಿದೆ. ಅನ್ನಕ್ಕಾಗಿ ಹಾಹಾಕಾರ, ವಿದ್ಯುತ್ ಸಮಸ್ಯೆ, ಬೆಲೆ ಏರಿಕೆ, ಇವೆಲ್ಲದ್ದರಿಂದ ಇವತ್ತು ಸುಂದರ ದೇಶ ಮುರಿದ ಮನೆಯಂತಾಗಿ ಹೋಗಿದೆ. ಹೌದು ಅದು 2019ರಲ್ಲಿ ನಡೆದಂತಹ ಒಂದು ಘಟನೆ. ಈಸ್ಟರ್ ಹಬ್ಬದ ಆಚರಣೆ ವೇಳೆ. ಇಡೀ ವಿಶ್ವದ ಕ್ರಿಶ್ಚಿಯನ್ ಬಾಂಧವರು ಸಂಭ್ರಮದಲ್ಲಿ ಹಬ್ಬ ಆಚರಿಸುತ್ತಿದ್ದರು. ಇತ್ತ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಬಾಂಬೊಂದು ಸ್ಫೋಟಗೊಂಡಿತ್ತು. ಸ್ಪೋಟದ ತೀವ್ರತೆಗೆ 269ಕ್ಕೂ ಹೆಚ್ಚು ಮಂದಿ ಸಾವಿನ ಮನೆಯ ಬಾಗಿಲು ಬಡಿದರು. ಅದೇ ಕೊನೆ, ಪ್ರವಾಸಿಗರು ಶ್ರೀಲಂಕಾ ಎಂದರೆ ಸಾಕು ನಡುಗಿ ಹೋದರು. ಅತ್ತ ತಲೆ ಹಾಕಿಯೂ ಮಲಗಲಿಲ್ಲ..ಮುಗಿಯಿತು. ಪ್ರವಾಸೋದ್ಯಮವನ್ನೇ ಮೂಲ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ಶ್ರೀಲಂಕಾ ದೇಶ ಆರ್ಥಿಕವಾಗಿ ಮುಳುಗುತ್ತಾ ಹೋಯ್ತು.  

ಅಲ್ಲಿಂದ ಆರಂಭವಾದ ಶ್ರೀಲಂಕಾದ ಬಿಕ್ಕಟ್ಟಿನ ಕಥೆ ಇವತ್ತು ದೊಡ್ಡ ಮಟ್ಟದಲ್ಲಿ ಸ್ಫೋಟಗೊಂಡಿದೆ. ಜನ ಅನ್ನಕ್ಕಾಗಿ, ಗ್ಯಾಸಿಗಾಗಿ, ಬಡಿದಾಡಿಕೊಳ್ಳುತ್ತಿದ್ದಾರೆ. ಬದುಕು ಕಟ್ಟಿಕೊಳ್ಳಲಾಗದೆ, ತಾಳ್ಮೆಯ ಕಟ್ಟೆ ಹೊಡೆದು ಬೀದಿಗಿಳಿದಿದ್ದಾರೆ. ಇಷ್ಟಕ್ಕೆಲ್ಲಾ ಕಾರಣ ನಮ್ಮ ಅಧ್ಯಕ್ಷರೇ ಅಂತೇಳಿ ರಾಜಪಕ್ಸೆ ರಾಜೀನಾಮೆಗೆ ಪಟ್ಟು ಹಿಡಿದು ಹೋರಾಟ ನಡೆಸುತ್ತಿದ್ದಾರೆ. ಬಸ್ಸು ಕಾರುಗಳಿಗೆ ಬೆಂಕಿ ಹಚ್ಚಿದ್ದಾರೆ. ಆರ್ಥಿಕವಾಗಿ ಅದಾಗಲೇ ದಿವಾಳಿ ಎದ್ದಿರುವ ನೆಲದಲ್ಲಿ ಇದೀಗ ಎಮರ್ಜೆನ್ಸಿ ಘೋಷಣೆಯಾಗಿದೆ.

ಒಂದು ಕಡೆ ದುಡಿಯಲು ಕೆಲಸವಿಲ್ಲ. ಮತ್ತೊಂದು ಕಡೆ ಮಡದಿ ಮಕ್ಕಳು ಉಪವಾಸದಿಂದ ಸಾಯುವಂತಹ ಸ್ಥಿತಿ. ಪರಿಸ್ಥಿತಿ ದಿನೇ ದಿನೇ ಕ್ರೂರವಾಗುತ್ತಿದೆ. ಇಂತಹ ರಾಷ್ಟ್ರ ಇದೀಗ ಕಂಡ ಕಂಡ ದೇಶಗಳ ಬಳಿ ಕೈಚಾಚಿ ನಿಲ್ಲುವಂತಾಗಿದೆ.  ಇತ್ತ ಶ್ರೀಲಂಕಾದಲ್ಲಿ ವ್ಯಾಪಾರ ವಹಿವಾಟಿಗೂ ಹೊಡತ ಬಿದ್ದಿದೆ. ಪೂರೈಕೆ ನಿಂತು ಹೋಗಿರೋ ಕಾರಣ ಬೆಲೆ ದುಬ್ಬರ ಅಧಿಕವಾಗಿದೆ. ನಿಮಗೆ ಶ್ರೀಲಂಕಾದಲ್ಲಿ ತಿನ್ನುವ ಆಹಾರದ ರೇಟು, ಕುಡಿಯುವ ಟೀ ರೇಟು ಕೇಳಿದ್ರೆ ಆಶ್ಚರ್ಯವಾಗಬಹುದು. ಆಶ್ಚರ್ಯವಾದರೂ ಇದು ಸತ್ಯ

ಹೊಟೇಲಿನಲ್ಲಿ ಒಂದು ಚಹಾ ಬೆಲೆ 100 ರೂಪಾಯಿ ಅಂದ್ರೆ ನಾವು ನೀವು ಬೆಚ್ಚಿಬೀಳಲೇಬೇಕು. ಇನ್ನು ಚಿಕನ್ ತಿನ್ನಬೇಕು ಅಂದ್ರೆ ಕೆಜಿಗೆ 1000ರೂಪಾಯಿ. ಆಫ್ಟರ್ ಆಲ್ ನಮ್ಮಲ್ಲಿ 5 ರಿಂದ 6 ರೂಪಾಯಿಗೆ ಸಿಗುವ ಕೋಳಿಮೊಟ್ಟೆಯ ಬೆಲೆ ಅಲ್ಲಿ 35 ರೂಪಾಯಿ. ಹಾಲಿನ ಪುಡಿಯ ರೇಟು 400ಗ್ರಾಮಿಗೆ 250ರೂಪಾಯಿ. ಇನ್ನು ಪೆಟ್ರೋಲ್ ಮತ್ತು ಡಿಸೇಲ್ ರೇಟಿನ ಬಗ್ಗೆ ಹೇಳುವಂತೆಯೇ ಇಲ್ಲ. ಒಂದು ಲೀಟರ್ ಪೆಟ್ರೋಲಿನ ಬೆಲೆ 283 ರೂಪಾಯಿ ಆದ್ರೆ, ಒಂದು ಲೀಟರ್ ಡಿಸೇಲ್ ರೇಟು 220 ರೂಪಾಯಿ. ಇನ್ನು 12.5 ಕೆಜಿ ಗ್ಯಾಸಿನ ಬೆಲೆ 1350 ರೂಪಾಯಿ ಮೀರುತ್ತಿದೆ. ಇನ್ನು ಇಲ್ಲಿನ ಜನ ಇವತ್ತಿಗೂ ಸೀಮೆ ಎಣ್ಣೆಯಲ್ಲಿ ಅಡುಗೆ ಮಾಡುವವರಿದ್ದಾರೆ. ಆದ್ರೆ ಅಂತಹ ಸೀಮೆಎಣ್ಣೆಗೂ ಬರವಿದೆ. ಸೀಮೆ ಎಣ್ಣೆಗಾಗಿ ಕಿಲೋಮೀಟರ್ ಗಟ್ಟಲೇ ಕ್ಯೂ ನಿಲ್ಲಬೇಕು. ಇದೇ ರೀತಿ ಕ್ಯೂನಲ್ಲಿ ನಿಂತು ಸುಸ್ತಾಗಿಯೇ ಇಬ್ಬರು ಸಾವನ್ನಪ್ಪಿದ್ರು. ಅಡುಗೆ ಎಣ್ಣೆಯನ್ನಂತೂ ಹುಡುಕಾಡಬೇಕಿದೆ.  ಇದು ಶ್ರೀಲಂಕಾದ ಸ್ಥಿತಿ. ಒಂದು ದೇಶ ಆರ್ಥಿಕ ಹೊಡೆತಕ್ಕೆ ಸಿಲುಕಿದ್ರೆ, ಎಷ್ಟರ ಮಟ್ಟಿಗೆ ದಿವಾಳಿಯಾಗುತ್ತೆ ಅನ್ನೋದಿಕ್ಕೆ ದ್ವೀಪರಾಷ್ಟ್ರ ಶ್ರೀಲಂಕಾವೇ ಸಾಕ್ಷಿ. 100% ಸಾವಯವ ಕೃಷಿ ದೇಶದಲ್ಲೀಗ ಕಿತ್ತು ತಿನ್ನುವ ದಾರಿದ್ರ್ಯ. ಇದು ಭಾರತಕ್ಕೂ ಎಚ್ಚರಿಕೆಯ ಗಂಟೆ.  

-ರಮೇಶ್, ಹಿರಿಯ ಕಾರ್ಯಕ್ರಮ ನಿರ್ಮಾಪಕ, 24X7ಲೈವ್ ಕನ್ನಡ

ಹೆಚ್ಚು ಓದಿದ ಸುದ್ದಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ
Published 22 ಡಿಸೆಂಬರ್ 2023, 23:16

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ
Published 22 ಡಿಸೆಂಬರ್ 2023, 23:14

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್
Published 31 ಮಾರ್ಚ್ 2023, 17:40

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ
Published 16 ಮಾರ್ಚ್ 2023, 14:45

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ
Published 16 ಮಾರ್ಚ್ 2023, 14:45

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ
Published 16 ಮಾರ್ಚ್ 2023, 14:45

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!
Published 16 ಮಾರ್ಚ್ 2023, 14:45

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್
Published 16 ಮಾರ್ಚ್ 2023, 14:45

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ
Published 16 ಮಾರ್ಚ್ 2023, 14:45

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!
Published 16 ಮಾರ್ಚ್ 2023, 14:45

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ
Published 16 ಮಾರ್ಚ್ 2023, 14:45

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ
Published 16 ಮಾರ್ಚ್ 2023, 14:45