BREAKING NEWS:
ಬೆಂಗಳೂರು: 2020-21ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಎಸ್ ಎಸ್ ಎಲ್ ಸಿ ಅಂಕಗಳಲ್ಲಿ ಶೇ. 45, ಪ್ರಥಮ ಪಿಯುಸಿ ಪರೀಕ್ಷೆಯ ಶೇ. 45 ಹಾಗೂ ಆಂತರಿಕ ಮೌಲ್ಯಮಾಪನದ ಶೇ. 10ರಷ್ಟು ಅಂಕಗಳನ್ನು ಪರಿಗಣಿಸಿ ಫಲಿತಾಂಶ ಪ್ರಕಟಿಸಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಈ ಬಾರಿ ದ್ವಿತೀಯ ಪಿಯುಸಿಯಲ್ಲಿ 6,66,497 ವಿದ್ಯಾರ್ಥಿಗಳಿದ್ದರು. ಗ್ರೇಡ್ ಆಧಾರದಲ್ಲಿ ಫಲಿತಾಂಶ ಪ್ರಕಟಿಸಲಾಗಿದೆ ಎಂದು ಅವರು ಹೇಳಿದರು.
ಫಲಿತಾಂಶ ಒಪ್ಪದವರಿಗೆ ಆ. 19ರಿಂದ ಸೆಪ್ಟೆಂಬರ್ 3ರವರೆಗೆ ಪರೀಕ್ಷೆ ನಡೆಸಲಾಗುವುದು. ಫಲಿತಾಂಶದ ಬಗ್ಗೆ ಅಸಮಾಧಾನವಿರುವವರು ಪರೀಕ್ಷೆಗೆ ಹೆಸರು ನೊಂದಾಯಿಸಿಕೊಳ್ಳಲು ಜುಲೈ 30 ಕೊನೆಯ ದಿನ ಎಂದು ಅವರು ಹೇಳಿದರು. ಫ್ರಷರ್ಸ್ ಫಲಿತಾಂಶ ತಿರಸ್ಕರಿಸಿ ಮತ್ತೆ ಪರೀಕ್ಷೆ ತೆಗೆದುಕೊಂಡರೆ ಅವರನ್ನು ಫ್ರಷರ್ಸ್ ಎಂದೇ ಪರಿಗಸಲಾಗುವುದು ಎಂದರು.
ಎಲ್ಲಾ ರಿಪೀಟರ್ಸ್ಗಳಿಗೆ ಕನಿಷ್ಠ ಅಂಕ ನೀಡಿ ಪಾಸ್ ಮಾಡಲಾಗಿದೆ. 4,50,706 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ಮೊದಲ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಪರೀಕ್ಷೆಗೆ ಹಾಜರಾದ 1,47,594 ಗ್ರಾಮೀಣ ವಿದ್ಯಾರ್ಥಿಗಳ ಪೈಕಿ, 12,243 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ಧಾರೆ. 2,239 ವಿದ್ಯಾರ್ಥಿಗಳು ನೂರಕ್ಕೆ ನೂರು ಫಲಿತಾಂಶ ಪಡೆದಿದ್ದಾರೆ ಎಂದು ಸಚಿವರು ವಿವರಿಸಿದರು.
ಟಾಪ್ 5 ಜಿಲ್ಲೆಗಳ ಪಟ್ಟಿ ಹೀಗಿದೆ:
ಫಲಿತಾಂಶವನ್ನು https://karresults.nic.in/ ತಾಣದಲ್ಲಿ ವೀಕ್ಷಿಸಬಹುದು. ಎಸ್ ಎಸ್ ಎಲ್ ಸಿ ಫಲಿತಾಂಶ ಆಗಸ್ಟ್ 10ರಂದು ಪ್ರಕಟವಾಗಲಿದೆ.