BREAKING NEWS:
ನವದೆಹಲಿ: ದೀಪಾವಳಿ ಕಳೆದು ಎರಡು ದಿನಗಳ ಬಳಿಕವೂ ದೆಹಲಿ ಮತ್ತದರ ನೆರೆಯ ನಗರಗಳಲ್ಲಿ ದಟ್ಟ ಹೊಗೆ ಆವರಿಸಿಕೊಂಡೇ ಇದೆ.
ಅತ್ಯಂತ ಕೆಟ್ಟ ವಾತಾವರಣದಿಂದ ದೆಹಲಿ ನಲುಗುತ್ತಿದೆ. ನವೆಂಬರ್ 7ರವರೆಗೂ ಇದೇ ಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದೆಹಲಿಯಲ್ಲಿ ವಾಹನ ಚಲಾಯಿಸಲು ದಾರಿಯೂ ಕಾಣಿಸದ ಸ್ಥಿತಿಯಿರುವುದ ಮಾತ್ರವಲ್ಲ, ಉಸಿರಾಟಕ್ಕೂ ಸಮಸ್ಯೆಯಾಗುತ್ತಿರುವುದಾಗಿ ವರದಿಗಳಾಗಿವೆ.
ಇಡೀ ಜಗತ್ತಿನ ಎಲ್ಲ ರಾಜಧಾನಿಗಳಲ್ಲಿಯೇ ಅತಿ ಕೆಟ್ಟ ಹವಾಮಾನ ದೆಹಲಿಯದ್ದಾಗಿದೆ ಎಂದು ಹಲವಾರು ವರದಿಗಳು ಮತ್ತು ಅಧ್ಯಯನಗಳು ಈಗಾಗಲೇ ಹೇಳಿವೆ.
ದೀಪಾವಳಿ ವೇಳೆ ದೆಹಲಿ ಸರ್ಕಾರ ಹಸಿರು ಪಟಾಕಿಗಳೂ ಸೇರಿದಂತೆ ಎಲ್ಲ ಪಟಾಕಿಗಳನ್ನು ನಿಷೇಧಿಸಿದ್ದರೂ ಜನರು ಮಾತ್ರ ಪಟಾಕಿ ಹಚ್ಚಿ, ಕೆಟ್ಟ ಹವಾಮಾನಕ್ಕೆ ಇನ್ನಷ್ಟು ಉಡುಗೊರೆ ಕೊಟ್ಟಿದ್ದಾರೆ.