BREAKING NEWS:
ನಮ್ಮ ಜೀವನದಲ್ಲಿ ವಾಸ್ತು ತುಂಬಾ ಮಹತ್ವ ನೀಡುತ್ತದೆ. ಹಿಂದಿನ ಕಾಲದಲ್ಲಿ ಬಹುತೇಕರು ಮನೆಗಳನ್ನು ವಾಸ್ತು ಪ್ರಕಾರವೇ ಕಟ್ಟಿಸುತ್ತಿದ್ದರು. ಆದರೆ ಇದೀಗ ಜಾಗವಿದ್ದರೆ ಸಾಕು, ಮನೆ ಕಟ್ಟಿಸಿದರಾಯಿತು ಅನ್ನೋ ಹಾಗೆ ಆಗಿದೆ. ಒಂದು ವೇಳೆ ಮನೆಯ ವಾಸ್ತು ಕೆಟ್ಟರೆ ನಮ್ಮ ಜೀವನದ ಮೇಲೆ ಅನೇಕ ಪರಿಣಾಮ ಬೀರುತ್ತದೆ. ವಾಸ್ತು ಸರಿಯಾಗಿಲ್ಲದಿದ್ದರೆ ಹಣ ಕಳೆದುಕೊಳ್ಳುವುದರ ಜೊತೆಗೆ ಮನಸ್ಸಿನ ನೆಮ್ಮದಿಯನ್ನೂ ಕಳೆದುಕೊಳ್ಳುತ್ತಾರೆ. ಹೀಗಿರುವಾಗ ಪ್ರತಿಯೊಬ್ಬರು ವಾಸ್ತು ಬಗ್ಗೆ ತಿಳಿದಕೊಳ್ಳಲೇ ಬೇಕಾಗುತ್ತದೆ. ಇಲ್ಲಿದೆ ವಾಸ್ತು ಮೂಲಕ ಅಭ್ಯುದಯದ ಉಪಾಯಗಳು ಇಲ್ಲಿವೆ ನೋಡಿ.
- ತಿಜೋರಿ ಅಥವಾ ಧನದ ಪೆಟ್ಟಿಗೆಯಲ್ಲಿ ನಿರಂತರವಾಗಿ ಧನ ಸಮೃದ್ಧಿಯಾಗಿರಲು, ಆ ಸ್ಥಾನದಲ್ಲಿ ಕುಬೇರ ಯಂತ್ರ ಅಥವಾ ಶ್ರೀಯಂತ್ರವನ್ನು ಸ್ಥಾಪಿಸಬೇಕು.
- ಮನೆಯಲ್ಲಿ ಮನಿಪ್ಲಾಂಟ್ ನ ಗಿಡದಿಂದ ಧನ ಸಮೃದ್ಧಿಯ ಸೂಚಕವಾಗುತ್ತದೆ
- ಅರಿಶಿಣ ಗಂಟು ಹಾಗೂ ದಾಲ್ಚಿನ್ನಿಯ ತೊಗಟೆ ಎಲ್ಲಿರುತ್ತವೋ, ಅಲ್ಲಿ ಲಕ್ಷ್ಮಿಯ ಕೃಪೆಯಿರುತ್ತದೆ.
- ಮನೆ ಅಥವಾ ಕಾರ್ಯಾಲಯದಲ್ಲಿ ಮೀನಿನ ಅಕ್ವೇರಿಯಮ್ ಸ್ಥಾಪಿಸುವುದರಿಂದ ಭಾಗ್ಯದಲ್ಲಿ ವೃದ್ಧಿಯಾಗುತ್ತದೆ.
- ಮನೆಯ ಆಗ್ನೇಯ ಕೋನದಲ್ಲಿ , ಪಕ್ಷಿಗಳಿಗಾಗಿ ಸ್ನಾನ ಮಾಡಲು ನೀರು ತುಂಬಿದ ಟಬ್ ಸ್ಥಾಪಿಸುವುದರಿಂದ, ಮನೆಯ ಸದಸ್ಯರ ಸಂಪಾದನೆಯ ಮಾರ್ಗಗಳಲ್ಲಿ ವೃದ್ಧಿಯಾಗುತ್ತದೆ.
- ಲಕ್ಷ್ಮಿಯ ಪ್ರಾಪ್ತಿಗಾಗಿ ಮನೆಯ ಮುಖ್ಯ ದ್ವಾರದ ಹೊಸ್ತಿಲು ಸ್ಥೂಲ ಗಟ್ಟಿಮುಟ್ಟಾಗಿ ಇರಬೇಕು.
- ಮನೆಯಲ್ಲಿ ತಾಮ್ರದ ಪಿರಮಿಡ್ ಸ್ಥಾಪಿಸುವುದರಿಂದ ವಾಸ್ತು ದೋಷಗಳು ದೂರವಾಗುತ್ತವೆ.
- ಮುಖದ್ವಾರದತ್ತ ಮುಖ ಮಾಡಿರುವ ಪಂಚಮುಖ ಹನುಮಂತ ದೇವರ ಚಿತ್ರಪಟವನ್ನು ಸ್ಥಾಪಿಸುವುದರಿಂದ ವಾಸ್ತುದೋಷಗಳ ಹರಣವಾಗುತ್ತದೆ.
- ವಾಸ್ತು ದೊಷದ ನಿವಾರಣೆಗೆ ಅಶೋಕ, ಮಾವು, ಅರಳಿ,ಕಣಿಗಲ ಮುಂತಾದ ಮಂಗಳಕಾರಕ ವೃಕ್ಷದ ಎಲೆಗಳ ತೋರಣವನ್ನು ಮನೆಯ ಮುಖ್ಯ ದ್ವಾರಕ್ಕೆ ಕಟ್ಟಬೇಕು.
- ದ್ವಾರ ವೇದದಿಂದ ರಕ್ಷಣೆ ಪಡೆಯಲು, ದ್ವಾರದ ಹೊರಭಾಗದಲ್ಲಿ ದರ್ಪಣವನ್ನು ಸ್ಥಾಪಿಸಬೇಕು.
- ಮನೆಯ ಹೊರಗಿನಿಂದ ಬರುತ್ತಿರುವ ನಕಾರಾತ್ಮಕ ಶಕ್ತಿಯನ್ನು ದೂರಗೊಳಿಸಲು ಮೆಟ್ಟಿಲುಗಳ ಮೇಲೆ ಹಸಿರಿನಿಂದ ಕಂಗೊಳಿಸುವ ಕುಂಡಗಳನ್ನಿರಿಸಬೇಕು.
- ಮನೆಯಲ್ಲಿ ವಾಸ್ತುದೋಷದ ಪರಿಣಾಮ ಸಂತಾನ ರೋಗದಿಂದ ಬಾಧಿತವಾಗುತ್ತಿದ್ದರೆ, ನಿತ್ಯ ನಿಯಮಿತವಾಗಿ ಅರಳಿ ವೃಕ್ಷಕ್ಕೆ ನೀರನ್ನು ಅರ್ಪಿಸಬೇಕು.