ಈ ಕ್ಷಣ :

ಡೆವಲಪರ್ ಗಳ ಹಣದಾಸೆಗೆ ತಣ್ಣೀರೆರಚಲಿದೆ ಕಂದಾಯ ಇಲಾಖೆ ಹೊಸ ನಿಯಮ

Published 16 ಮಾರ್ಚ್ 2023, 13:07 IST
Last Updated 23 ಏಪ್ರಿಲ್ 2023, 14:37 IST
ಸ್ನೇಹಿತನ ಕತ್ತು ಕೊಯ್ದು ರಕ್ತ ಕುಡಿದ ಕಿರಾತಕ! ಬೆಚ್ಚಿಬಿದ್ದ ಚಿಂತಾಮಣಿ

BUSINESS:

ವಿಶೇಷ ವರದಿ

Illegal layouts ಬೆಂಗಳೂರು: ನಗರ ಪ್ರದೇಶದಲ್ಲಿ ನಾಯಿಕೊಡೆಯಂತೆ ಅಕ್ರಮ ವಸತಿ ಬಡಾವಣೆಗೆ ಕಡಿವಾಣ ಹಾಕಿ ನಿವೇಶನ ಕೊಳ್ಳುವ ಜನ  ಮೋಸ ಹೋಗದಂತೆ ಮಾಡಲು  ಕಂದಾಯ ಇಲಾಖೆ ಲಗಾಮು ಹಾಕಲ ಮುಂದಾಗಿದೆ. ಇನ್ನು ಮುಂದೆ ತುಂಡು ಕೃಷಿಭೂಮಿ ಪರಿವರ್ತನೆಗೆ ಹೊಸ ಸರ್ವೆ ನಂಬರ್ ನೀಡದಿರುವ ದಿಟ್ಟ  ತೀರ್ಮಾನ ಕೈಗೊಂಡಿದೆ. ತುಂಡು ಭೂಮಿಯನ್ನು  ಕಾನೂನಿನ ಪ್ರಕಾರ  ಕೃಷಿಯೇತರ ಭೂಮಿಯನ್ನಾಗಿ ಪರಿವರ್ತನೆ ಮಾಡದೆ ಅಲ್ಲಿ ನಿವೇಶನ ಮಾರಾಟ ಮಾಡದಂತೆ ಕಂದಾಯ ಇಲಾಖೆ ಕಡಿವಾಣ(Revenu Department Curb) ಹಾಕಲು ನಿರ್ಧರಿಸಿದೆ.

ಸಾಮಾನ್ಯವಾಗಿ ಇಂತಹ ಸಣ್ಣ ಭೂಮಿ, ನಿವೇಶನಗಳಿಗೆ ಪ್ರತ್ಯೇಕ ಸರ್ವೆ ನಂಬರ್ ಪಡೆದುಕೊಂಡು ಅಲ್ಲಿ ನಿವೇಶನಗಳನ್ನು ಮಾಡಿ ಮಾರಾಟ ಮಾಡುವ ಕಲೆಯನ್ನು ಡೆವಲಪರ್(Devoloper)ಗಳು ಸಿದ್ದಿಸಿಕೊಂಡು ಬಡವರು ಮತ್ತು ಅಮಾಯಕರಿಗೆ ಮೋಸ ಮಾಡುವುದು ಸಾಮಾನ್ಯವಾಗಿದ್ದು . ಇದಕ್ಕೆ ಕಡಿವಾಣ ಹಾಕಲು ಕಂದಾಯ ಇಲಾಖೆ ಕಠಿಣ ನಿಯಮ ಜಾರಿಗೊಳಿಸಲು ಹೊರಟಿದೆ.

ಸಾಮಾನ್ಯವಾಗಿ ಇಂತಹ ಸಣ್ಣ ಭೂಮಿ, ನಿವೇಶನಗಳಿಗೆ ಪ್ರತ್ಯೇಕ ಸರ್ವೆ(Separate Servey #) ನಂಬರ್ ಪಡೆದುಕೊಂಡು ಅಲ್ಲಿ ನಿವೇಶನಗಳನ್ನು ಮಾಡಿ ಮಾರಾಟ ಮಾಡುವ ಕಲೆಯನ್ನು ಡೆವಲಪರ್ ಗಳು ಸಿದ್ದಿಸಿಕೊಂಡು ಬಡವರು ಮತ್ತು ಅಮಾಯಕರಿಗೆ ಮೋಸ ಮಾಡುವುದು ಸಾಮಾನ್ಯವಾಗಿದ್ದು . ಇದಕ್ಕೆ ಕಡಿವಾಣ ಹಾಕಲು ಕಂದಾಯ ಇಲಾಖೆ ಕಠಿಣ ನಿಯಮ(Strick Rule) ಜಾರಿಗೊಳಿಸಲು ಹೊರಟಿದೆ.

ನಗರ ಪ್ರದೇಶದಲ್ಲಿ ಹೇಗಾದರೂ ಮಾಡಿ ತಲೆ ಮೇಲೆ  ಸೂರು  ಕಟ್ಟಿಕೊಳ್ಳಬೇಕು ಎಂಬ  ಸಾಮಾನ್ಯ ಜನರ ಬದುಕಿನ ದೊಡ್ಡ ಕನಸನ್ನೇ ಬಂಡವಾಳ ಮಾಡಿಕೊಳ್ಳುವ  ಡೆವಲಪರ್ ಗಳು  ಹೇಗಾದರೂ ಮಾಡಿ ಕಂದಾಯ ಇಲಾಖೆಯ ಅಧಿಕಾರಿಗಳ ಕೈ ಬೆಚ್ಚಗೆ ಮಾಡಿ ಪ್ರತ್ಯೇಕ ಸರ್ವೆ ನಂಬರ್ ತೆಗೆದುಕೊಂಡು ನಿವೇಶನ ಮಾಡಿ ಅಮಾಯಕರಿಗೆ ಮಾರಾಟ ಮಾಡಿಬಿಡುತ್ತಾರೆ.

ದಕ್ಷಿಣ ಕನ್ನಡ,  ಉಡುಪಿ  ಮತ್ತು ಉತ್ತರಕನ್ನಡ ಜಿಲ್ಲೆಗಳಲ್ಲಿ ಮೂರು ಗುಂಟೆ ಹಾಗೂ ಇನ್ನುಳಿದ ಜಿಲ್ಲೆಗಳಲ್ಲಿ  5 ಗುಂಟೆ ತುಂಡು ಕೃಷಿ ಭೂಮಿಗೆ  ಹೊಸ ಸರ್ವೆ ನಂಬರ್ ನೀಡದಿರಲು ಹಾಗೂ ನೋಂದಣಿಗೆ  ಅಗತ್ಯವಾಗಿ ಬೇಕಿರುವ  11ಇ -  ನಮೂನೇ  ಸ್ಕೆಚ್ ನಕ್ಷೆ ಸಹ ನೀಡದಿರಲು  ಕಂದಾಯ ಇಲಾಖೆ  ನಿರ್ಧರಿಸಿದೆ.

ಸಾಮಾನ್ಯವಾಗಿ ಇಂತಹ ತುಂಡು ಭೂಮಿಗಳಲ್ಲಿ ಕೃಷಿ ಚಟುವಟಿಕೆ ಮಾಡಲು ಸಾಧ್ಯವಿಲ್ಲ.ಇದನ್ನೇ ಬಂಡವಾಳ ಮಾಡಿಕೊಂಡು ಕೆಲವರು, ಪ್ರತ್ಯೇಕ ಸರ್ವೆ ನಂಬರ್ ತೆಗೆದುಕೊಂಡು ಕೃಷಿಭೂಮಿಯನ್ನು ಕೃಷಿಯೇತರ ಭೂಮಿಯನ್ನಾಗಿ ಪರಿವರ್ತಿಸದೇ(Agri Land Convertion) ನಿವೇಶನ ಹಂಚಿಕೆ  ಮಾಡುತ್ತಿರುವ ಚಟುವಟಿಕೆಗಳು ಬೆಂಗಳೂರು(Bangalore) ಸೇರಿದಂತೆ ರಾಜ್ಯದ ಎರಡನೇ ಹಂತದ ನಗರಗಳಲ್ಲಿ ವ್ಯಾಪಕವಾಗಿದೆ.

ನಿಯಮಾವಳಿ ಪ್ರಕಾರ ಯಾವುದೇ ಹೊಸ ಬಡಾವಣೆಯಲ್ಲಿ, ರಸ್ತೆ ನಿರ್ಮಾಣ, ನೀರು ಶುದ್ಧೀಕರಣ  ಘಟಕಗಳ ಸ್ಥಾಪನೆಗಾಗಿ   ಅರ್ಧ ಜಾಗವನ್ನು ಖಾಲಿ  ಬಿಡಬೇಕಾಗುತ್ತದೆ.  ಆದರೆ ಇಂತಹ ತುಂಡು ಭೂಮಿಯಲ್ಲಿ ನಿವೇಶನಗಳನ್ನು  ನಿರ್ಮಾಣ ಮಾಡುವುದರಿಂದ ಅಲ್ಲಿ ಯಾವುದೇ ಮೂಲ ಸೌಲಭ್ಯ ಕಲ್ಪಿಸಲು ಜಾಗವೇ ಇರುವುದಿಲ್ಲ.  ಹೀಗಾಗಿ ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಕಂದಾಯ ಇಲಾಖೆ ಹೊರಟಿದೆ ಎಂದು ಕಮೀಷನರ್ ಆಫ್ ಸರ್ವೇ ಸೆಟಲ್ಮೆಂಟ್  ಅಂಡ್ ಲ್ಯಾಂಡ್ ರೆಕಾರ್ಡ್ಸ್ ಆಯುಕ್ತ  ಮುನೀಶ್  ಮೌದ್ಗಿಲ್(Munish Mudgil)   ಹೇಳುತ್ತಾರೆ. 

ಇಂತಹ ತಂಡು  ಕೃಷಿ ಭೂಮಿಗಳಿಗೆ ಇನ್ನು ಮುಂದೆ ಪ್ರತ್ಯೇಕ ಸರ್ವೆ ನಂಬರ್ ನೀಡದೆ  ಹಿಂದಿನ ವ್ಯವಸ್ಥೆಯನ್ನೇ ಮುಂದುವರಿಸಿಕೊಂಡು ಹೋಗುವ ಮೂಲಕ ತುಂಡು ಭೂಮಿ ಮತ್ತಷ್ಟು  ತುಂಡಾಗುವುದನ್ನು ಎಲ್ಲಕ್ಕಿಂತ  ಮುಖ್ಯವಾಗಿ ನಗರ ಪ್ರದೇಶಗಳಲ್ಲಿನಾಯಿಕೊಡೆಗಳಂತೆ ಅಕ್ರಮ  ಬಡಾವಣೆಗಳು  ನಿರ್ಮಾಣವಾಗದಂತೆ  ಕಡಿವಾಣ ಹಾಕಲು ಈ ಹೊಸ ನಿಯಮ  ತರಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಹೆಚ್ಚು ಓದಿದ ಸುದ್ದಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ
Published 22 ಡಿಸೆಂಬರ್ 2023, 23:16

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ
Published 22 ಡಿಸೆಂಬರ್ 2023, 23:14

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್
Published 31 ಮಾರ್ಚ್ 2023, 17:40

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ
Published 16 ಮಾರ್ಚ್ 2023, 14:45

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ
Published 16 ಮಾರ್ಚ್ 2023, 14:45

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ
Published 16 ಮಾರ್ಚ್ 2023, 14:45

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!
Published 16 ಮಾರ್ಚ್ 2023, 14:45

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್
Published 16 ಮಾರ್ಚ್ 2023, 14:45

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ
Published 16 ಮಾರ್ಚ್ 2023, 14:45

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!
Published 16 ಮಾರ್ಚ್ 2023, 14:45

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ
Published 16 ಮಾರ್ಚ್ 2023, 14:45

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ
Published 16 ಮಾರ್ಚ್ 2023, 14:45