BUSINESS:
ಭಾರತದ ವಾಣಿಜ್ಯ ರಾಜಧಾನಿಯೆನಿಸಿಕೊಂಡಿರುವ ಮುಂಬೈನಲ್ಲಿ ಇಂದು ಷೇರುಪೇಟೆ ಕೊಂಚಮಟ್ಟಿಗೆ ಸುಧಾರಿಸಿದೆ. ಇದಕ್ಕೆ ಕಾರಣ ರಷ್ಯಾ ಉಕ್ರೇನ್ ನಡುವಿನ ಮಾತುಕತೆಯಲ್ಲಿ ಕಂಡುಬಂದಿರುವ ಸುಧಾರಣೆಯೆನ್ನಲಾಗಿದೆ. ದೇಶೀಯ ಷೇರುಗಳಲ್ಲಿನ ಏರಿಕೆಯ ನಂತರ ಬುಧವಾರದ ಅರಂಭಿಕ ವಹಿವಾಟಿನಲ್ಲಿ ರೂಪಾಯಿ ಯುಎಸ್ ಡಾಲರ್ನ ಎದುರು 4 ಪೈಸೆಗಳಷ್ಟು ಏರಿಕೆಯಾಗಿ 75.69ಕ್ಕೆ ತಲುಪಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಜಾಗತೀಕ ಕಚ್ಚಾ ಬೆಲೆಯು ದೇಶೀಯ ಕರೆನ್ಸಿಯ ಲಾಭವನ್ನು ನಿರ್ಬಂಧಿಸಿದೆ ಎಂದು ಹೇಳಲಾಗಿದೆ. ಇಂಟರ್ಬ್ಯಾಂಕ್ ವಿದೇಶಿ ವಿನಿಮಯದಲ್ಲಿ ರೂಪಾಯಿಯು US ಡಾಲರ್ಗೆ 75.65ನಲ್ಲಿ ಬಲವಾಗಿ ಪ್ರಾರಂಭವಾಯಿತು. ಆದರೆ 75.69ರಲ್ಲಿ ಮುಕ್ತಾಯವಾಗಿ 4 ಪೈಸೆಯ ಏರಿಕೆ ಕಂಡಿತು.
ಏತನ್ಮಧ್ಯೆ ಜಾಗತಿಕ ಐಲ ಮಾನದಂಡ ಬ್ರೆಂಟ್ ಕಚ್ಚಾ ತೈಲ ಭವಿಷ್ಯವು ಪ್ರತಿ ಬ್ಯಾರೆಲ್ಗೆ 1.02 ರಷ್ಟು USD 111.35ಕ್ಕೆ ಏರಿತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮಂಗಳವಾರ ಮಾರುಕಟ್ಟೆಯಲ್ಲಿ ನಿವ್ವಳ ಖರೀದಿದಾರರಾಗಿದ್ದಾರೆ, ಅವರು 35.47ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ವಿನಿಮಯದ ಅಂಕಿಅಂಶಗಳು ತಿಳಿಸಿವೆ.