BUSINESS:
ನವದೆಹಲಿ: ಆದಾಯ ತೆರಿಗೆ ಮತ್ತು ಕಾರ್ಪೊರೇಷನ್ ತೆರಿಗೆಯನ್ನು ಒಳಗೊಂಡಿರುವ ನೇರ ತೆರಿಗೆಗಳು ಎಲ್ಲಾ ದಾಖಲೆಗಳನ್ನು ಮುರಿದು FY22 ರಲ್ಲಿ 13.81ಟ್ರಿಲಿಯನ್ ರೂಪಾಯಿಗಳನ್ನು ಮುಟ್ಟಿವೆ. ಪ್ರಮುಖವಾಗಿ ಕಡಿಮೆ ಬೇಸ್ ಎಫೆಕ್ಟ್ನಿಂದಾಗಿ ಸಂಗ್ರಹವು ಹಿಂದಿನ ಹಣಕಾಸು ವರ್ಷಕ್ಕಿಂತ 49 ಶೇಕಡಾಕ್ಕಿಂತ ಹೆಚ್ಚು ಎತ್ತರಕ್ಕೆ ಜಿಗಿದಿದೆ.
FY21 ರಲ್ಲಿ ನಿವ್ವಳ ಸಂಗ್ರಹವು 9.23 ಟ್ರಿಲಿಯನ್ ಆಗಿತ್ತು. ಆದಾಗ್ಯೂ, FY22ರಲ್ಲಿ ಸಂಗ್ರಹಣೆಯು FY19 ಮತ್ತು FY20 ರ ಸಾಂಕ್ರಾಮಿಕ ಪೂರ್ವ ಮಟ್ಟಗಳಿಗಿಂತ 34 ಪ್ರತಿಶತಃ ಮತ್ತು 23 ಪ್ರತಿಶತದಷ್ಟು ಹೆಚ್ಚಾಗಿದೆ. FY20ರಲ್ಲಿ, ನಿವ್ವಳ ಸಂಗ್ರಹವು 10.28 ಟ್ರಿಲಿಯನ್ ಮತ್ತು FY 19ರಲ್ಲಿ 11.18 ಟ್ರಿಲಿಯನ್ ಆಗಿತ್ತು. FY 22ರಲ್ಲಿ ಒಟ್ಟು ಸಂಗ್ರಹವು 15.83 ಟ್ರಿಲಿಯನ್ ರೂಪಾಯಿಗಳನ್ನು ಮುಟ್ಟಿ ಐತಿಹಾಸಿಕ ದಾಖಲೆಯನ್ನು ನಿರ್ಮಿಸಿದೆ.