BUSINESS: ಬ್ಯಾಂಕ್ಗಳ ಎಟಿಎಂ ಮೂಲಕ ವ್ಯವಹರಿಸುವ ಗ್ರಾಹಕರಿಗೆ ಶಾಕ್ ಕಾದಿದೆ. ಆರ್ಬಿಐ ಸಮಿತಿಯ ಶಿಫಾರಸು ಮೇರೆಗೆ ಎಟಿಎಂ ಬಳಕೆದಾರರ ಶುಲ್ಕ ಹೆಚ್ಚಳ ಮಾಡಲು ಬ್ಯಾಂಕ್ಗಳಿಗೆ ಅವಕಾಶ ದೊರಕಿದೆ. ಸೆಂಟ್ರಲ್ ಬ್ಯಾಂಕಿನಿಂದ ಸುತ್ತೋಲೆ ಬಿಡುಗಡೆಯಾಗಿದ್ದು, ಇದರ ಪ್ರಕಾರ ಎಟಿಎಂ ಹಾಗೂ ಆನ್ಲೈನ್ ವಹಿವಾಟುಗಳಿಗೆ ಇಂಟರ್ಚೇಂಜ್ ಶುಲ್ಕ ಏರಿಸಲು ಬ್ಯಾಂಕ್ಗಳಿಗೆ ಅವಕಾಶವಿದೆ. ಹೀಗಾಗಿ ಗ್ರಾಹಕರು ತಾವು ಖಾತೆ ಹೊಂದಿದ ಬ್ಯಾಂಕ್ ಎಟಿಎಂ ಕಾರ್ಡನ್ನು ಪ್ರತೀ ಮಾಹೆಯಲ್ಲಿ ಮಿತವಾಗಿ ಬಳಕೆ ಮಾಡಿ. ಮಿತಿಮೀರಿ ಬಳಕೆ ಮಾಡಿದರೆ ನಿಮಗೆ ಹೆಚ್ಚು ಶುಲ್ಕದ ಬರೆ ಬೀಳಲಿದೆ. ಬಳಕೆದಾರರ ಇಂಟರ್ಚೇಂಜ್ ಶುಲ್ಕವನ್ನು ರೂ.15ರಿಂದ 17ರೂ.ಗಳವರೆಗೆ ಹೆಚ್ಚಿಸಬಹುದಾಗಿದೆ. ಖಾತೆ ಹೊಂದಿರುವ ಬ್ಯಾಂಕಿನ ಎಟಿಎಂಗಳಲ್ಲೇ ಗ್ರಾಹಕರು ವ್ಯವಹರಿಸಿದರೆ 5 ಬಾರಿ ಶುಲ್ಕ ಇರುವುದಿಲ್ಲ. 5ಕ್ಕಿಂತ ಹೆಚ್ಚುಬಾರಿ ಬಳಕೆ ಮಾಡಿದರೆ ಹೆಚ್ಚುವರಿ ಶುಲ್ಕ ಬೀಳಲಿದೆ. ಬೇರೆ ಬ್ಯಾಂಕ್ಗಳ ಎಟಿಎಂ ಬಳಸಿದರೆ ಹೆಚ್ಚಿನ ಶುಲ್ಕ ಭರಿಸಬೇಕಾಗುತ್ತದೆ. ಮೆಟ್ರೋ ಸಿಟಿಗಳಲ್ಲಿ ಖಾತೆ ಹೊಂದಿದ ಬ್ಯಾಂಕುಗಳಲ್ಲಿ 3 ಬಾರಿ ಮಾತ್ರ ಉಚಿತವಿರುತ್ತದೆ. ಈ ಹಿಂದೆ 2012ರಲ್ಲಿ ಬದಲಾವಣೆ ಮಾಡಲಾಗಿತ್ತು. ಗ್ರಾಹಕರು ಪಾವತಿಸಬೇಕಿದ್ದ ಶುಲ್ಕವನ್ನು 2014ರಲ್ಲಿ ಪರಿಷ್ಕರಣೆ ಮಾಡಲಾಗಿತ್ತು. ನಂತರ ದೀರ್ಘ ಅವಧಿವರೆಗೆ ಶುಲ್ಕದಲ್ಲಿ ಬದಲಾವಣೆ ಮಾಡಿರಲಿಲ್ಲ ಎಂದು ಆರ್ಬಿಐ ಸ್ಪಷ್ಟಪಡಿಸಿದೆ