DISTRICT:
ಬೆಂಗಳೂರು: ನಗರದಲ್ಲಿ ನಡೆದ ವೋಟರ್ ಐಡಿ ಪರಿಷ್ಕರಣೆ ಅಕ್ರಮದಲ್ಲಿ ಮತದಾರರ ಪಟ್ಟಿಯಿಂದ ಮತದಾರರ ಹೆಸರು ತೆಗೆದುಹಾಕಿರುವ ಮತ್ತು ಸೇರ್ಪಡಿಸಿರುವ ಬಗ್ಗೆ ಪರಿಶೀಲಿಸುತ್ತಿದ್ದೇವೆ.
ಈ ಸಂಬಂಧ ಈಗಾಗಲೇ 12 ಕೆಎಎಸ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅವರು ಮತದಾರರ ಮಾಹಿತಿ, ಪಟ್ಟಿಯಲ್ಲಿ ಹೆಸರು ಸೇರ್ಪಡೆ ಸೇರಿದಂತೆ ತೆಗೆದುಹಾಕಿರುವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ನಗರದ ಚಿಕ್ಕಪೇಟೆ, ಮಹದೇವಪುರ ವಿಧಾನಸಭಾ ಕ್ಷೇತ್ರ, ಶಿವಾಜಿನಗರದಲ್ಲಿ ಮತದಾರರ ಮಾಹಿತಿ ಪರಿಷ್ಕರಣೆ ನಡೆಯುತ್ತಿದೆ. ವಾರಕ್ಕೊಮ್ಮೆ ರಾಜಕೀಯ ಮುಖಂಡರ ಸಭೆ ಕರೆಯುವಂತೆ ಸೂಚಿಸಲಾಗಿದೆ. ಪ್ರತಿ ಕ್ಷೇತ್ರದ ಒಬ್ಬ ಮುಖಂಡರನ್ನು ಸಭೆಗೆ ಕರೆಯುವಂತೆ ಮನವಿ ಮಾಡಲಾಗಿದೆ. ವೆಬ್ಸೈಟ್ನಲ್ಲಿ 5 ಕ್ಷೇತ್ರವಾರು ಮತದಾರರ ಮಾಹಿತಿ ಪ್ರಕಟವಾಗುತ್ತದೆ. ಸಮಸ್ಯೆ ಇದ್ದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡುತ್ತೇವೆ ಎಂದು ಹೇಳಿದರು.
ಬೂತ್ ಮಟ್ಟದಲ್ಲಿ ಏಜೆಂಟ್ ನೇಮಿಸಿದರೆ ಮತದಾರರ ಸಮಸ್ಯೆ ನಿವಾರಣೆಯಾಗಲಿದೆ. ಎಲ್ಲ ಬಿಎಲ್ಒಗಳ ಮಾಹಿತಿ ವೆಬ್ಸೈಟ್ನಲ್ಲಿ ಪ್ರಕಟಿಸುತ್ತೇವೆ. ರಾಜಕೀಯ ಪಕ್ಷಗಳು ತಮ್ಮ ಇಮೇಲ್ ಐಡಿ ಕೊಟ್ಟಿದ್ದಾರೆ. ಪ್ರತಿ ವಾರದ ಮಾಹಿತಿ ಆಯಾ ರಾಜಕೀಯ ಪಕ್ಷಕ್ಕೆ ನೀಡುತ್ತೇವೆ ಎಂದು ಹೇಳಿದ್ದಾರೆ.
ಬಳಕೆಯಾಗದ ಹಿನ್ನೆಲೆ ಇಂದಿರಾ ಮೊಬೈಲ್ ಕ್ಯಾಂಟೀನ್ ಮುಚ್ಚಲಾಗಿದೆ
ಬಳಕೆಯಾಗದ ಹಿನ್ನೆಲೆ ಇಂದಿರಾ ಮೊಬೈಲ್ ಕ್ಯಾಂಟೀನ್ ಮುಚ್ಚಲಾಗಿದೆ. ಶೆಫ್ಟೆಕ್ ಕಂಪನಿಗಳು ಅಸಮಾಧಾನ ಕಡಿಮೆ ಬಿಲ್ ನೀಡಲಾಗುತ್ತಿದೆ ಅಂತ ಅಸಮಾಧಾನ ವ್ಯಕ್ತಪಡಿಸುತ್ತಿವೆ. ಅದಮ್ಯ ಚೇತನ ಸಂಸ್ಥೆಗೆ ವಿಸ್ತರಿಸುವ ಕುರಿತಂತೆ ಚಿಂತನೆ ನಡೆಯುತ್ತಿದೆ ಎಂದು ತಿಳಿಸಿದರು.