DISTRICT:
ಚಿಕ್ಕಮಗಳೂರು: ಹಿಂದುತ್ವ ವಿಚಾರಕ್ಕಾಗಿ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿಕಾರುತ್ತಿರುತ್ತಾರೆ.
ಇದೆ ವಿಚಾರಕ್ಕಾಗಿ ಬಿಜೆಪಿಗರ ವಿರದ್ಧ ಅಸಮಾಧಾನ ಗೊಂಡಿರುವ ಅವರು, ರಾಜಕೀಯ ಅಖಾಡಕ್ಕೆ ಇಳಿಯಲು ಮುಂದಾಗಿದ್ದಾರೆ. ಈ ಕುರಿತು ಮಾತನಾಡಿದ ಅವರು ಹಿಂದೂಗಳ ರಕ್ಷಿಸಲು 25 ಪ್ರಖರ ಹಿಂದುವಾದಿಗಳು ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ. ದತ್ತಪೀಠ ಮುಕ್ತಿ, ಗೋಹತ್ಯೆ ನಿಲುಗಡೆ, ಮತಾಂತರ ಮುಕ್ತ, ಲವ್ ಜಿಹಾದ್ ನಿಲ್ಲಿಸುತ್ತೇವೆ ಎಂದು ದತ್ತಪೀಠದ ದೇವಸ್ಥಾನದ ಬಾಗಿಲಲ್ಲಿ ಸಂಕಲ್ಪ ಮಾಡಿದ್ದಾರೆ.
ಬಿಜೆಪಿಯವರು 25 ವರ್ಷದಿಂದ ದತ್ತಪೀಠದ ಹೋರಾಟದ ಲಾಭ ಪಡೆದಿದ್ದಾರೆ. ಬಿಜೆಪಿ ಹುಟ್ಟಿದ್ದೇ ಹಿಂದುತ್ವಕ್ಕಾಗಿ, ಪ್ರಾಮಾಣಿಕತೆಗಾಗಿ, ಪಾರ್ಲಿಮೆಂಟ್ ಮತ್ತು ವಿಧಾನಸಭೆಯಲ್ಲಿ ಹಿಂದುಗಳ ರಕ್ಷಣೆಗಾಗಿ. ಪ್ರಧಾನಿ ಮೋದಿ ಮತ್ತು ಯೋಗಿ ಬಿಟ್ಟರೇ ಹಿಂದೂಗಳ ಉಳಿವಿಗಾಗಿ ಯಾರೂ ಕೂಡ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇವತ್ತು ರೌಡಿಶೀಟರ್ಗಳು ಆರಾಮಾಗಿ ಓಡಾಡಿಕೊಂಡಿದ್ದಾರೆ. ಅವರನ್ನು ತೆಗೆಯುವ ಕೆಲಸ ಮಾಡುತ್ತಿಲ್ಲ. ಹಿಂದೂ ಕಾರ್ಯಕರ್ತರು ಕೊಲೆಯಾಗಿದ್ದಾರೆ, ಹಿಂದುತ್ವದ ಹೆಸರಲ್ಲಿ ಗೆದ್ದವರು ಹಿಂದೂಗಳ ರಕ್ಷಣೆ ಮಾಡಲು ಆಗಲಿಲ್ಲ. ಹೀಗಾಗಿ, ಪ್ರಖರ ಹಿಂದೂವಾದಿಗಳು, ಸ್ವಾಮೀಜಿಗಳು ರಾಜಕೀಯ ಪ್ರವೇಶ ಮಾಡಿ ಹಿಂದುತ್ವ ಉಳಿಸುತ್ತೇವೆ. ಮುಂದಿನ ವರ್ಷದ ದತ್ತಪೀಠದ ಅಭಿಯಾನ ಕೊನೆ ಅಭಿಯಾನವಾಗುತ್ತೆ ಎಂದು ತಿಳಿಸಿದರು.