DISTRICT: ಯಾದಗಿರಿ: ಕೋವಿಡ್ ಲಸಿಕೆ ಕೊಡಲು ಹೋದರೆ ಗ್ರಾಮಸ್ಥರು ಲಸಿಕೆ ಪಡೆಯದೆ ಮನೆಗೆ ಬೀಗ ಹಾಕಿ ಓಡಿಹೋದ ಘಟನೆ ಯಾದಗಿರಿ ತಾಲೂಕಿನ ಕಂಚಗಾರಹಳ್ಳಿಯಲ್ಲಿ ನಡೆದಿದೆ. ಗ್ರಾಮಸ್ಥರ ವರ್ತನೆಯಿಂದ ಕೋವಿಡ್ ಲಸಿಕೆ ಜಾಗೃತಿ ಮೂಡಿಸಲು ಹೋದ ಅಧಿಕಾರಿಗಳಿಗೆ ಶಾಕ್ ಕೊಟ್ಟಂತಾಗಿದೆ. ಲಸಿಕೆ ಕುರಿತು ಜಾಗೃತಿ ಮೂಡಿಸುವದು ಜೊತೆಗೆ ಲಸಿಕೆ ನೀಡುವ ಕಾರ್ಯವನ್ನು ಆರೋಗ್ಯ ಸಿಬ್ಬಂದಿ ಗ್ರಾಮದಲ್ಲಿಂದು ಮಾಡಿದರು. ಮನೆ ಮನೆಗೆ ತೆರಳಿದ ಸಿಬ್ಬಂದಿ ಲಸಿಕೆ ಹಾಕಿಕೊಳ್ಳಲು ಮನವಿ ಮಾಡಿದರೆ, ಹಿಂದೇಟು ಹಾಕಿದ ಗ್ರಾಮಸ್ಥರ ತಮ್ಮ ಮನೆಗಳಿಗೆ ಬೀಗ ಹಾಕಿ ಪರಾರಿಯಾಗುತ್ತಿದ್ದಾರೆ. ಇನ್ನೂ ಕೆಲವರು ಮನೆಯೊಳಗೆ ಇದ್ದರೂ ಹೊರಬಾರದೇ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಸಹಾಯಕ ಆಯುಕ್ತ ಪ್ರಶಾಂತ, ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಹಾಗೂ ಆರೋಗ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಮನೆ ಮನೆಗೆ ತೆರಳಿ, ಮನೆಯಲ್ಲಿದ್ದವರನ್ನು ಹುಡುಕಿ, ಬುದ್ದಿ ಮಾತು ಹೇಳಿ ಲಸಿಕೆ ಹಾಕಿಸಲು ಪ್ರಯತ್ನಿಸುತ್ತಿದ್ದಾರೆ. ಕೇವಲ ಬೆರಳೆಣಿಕೆಯಷ್ಟು ಗ್ರಾಮಸ್ಥರು ಮಾತ್ರ ಲಸಿಕೆ ಪಡೆದ್ರೆ, ಬಹುತೇಕ ಜನ ಲಸಿಕೆ ಪಡೆಯದೇ ನಿಷ್ಕಾಳಜಿ ತೊರುತ್ತಿದ್ದಾರೆ. ಇದರಿಂದಾಗಿ ಲಸಿಕೆ ಹಾಕಿಸಲು ಅಧಿಕಾರಿಗಳು ಸಂಕಷ್ಟ ಎದುರಿಸುತ್ತಿದ್ದಾರೆ. ಗ್ರಾಮಸ್ಥರಲ್ಲಿ ಮೂಡಿದ ತಪ್ಪು ಕಲ್ಪನೆ ಹಾಗೂ ಜಾಗೃತಿ ಕೊರತೆಯಿಂದ ಲಸಿಕೆ ಪಡೆಯಲು ಗ್ರಾಮಸ್ಥರು ಹಿಂದೇಟು ಹಾಕುತ್ತಿದ್ದಾರೆ.