DISTRICT:
ಬೆಳಗಾವಿ ಗಡಿ ವಿಚಾರಕ್ಕೆ ಸಂಬಂಧಿಸಿ ಶಾಂತಿ ಸುವ್ಯವಸ್ಥೆ ಕಾಪಾಡಲು ಗೃಹ ಸಚಿವ ಅಮಿತ್ ಶಾ ಸಭೆ ಕರೆದಿದ್ದಾರೆ. ಈ ಹಿನ್ನೆಲೆ ಕಾನೂನಾತ್ಮಕ, ಆಡಳಿತಾತ್ಮಕ ಹಾಗೂ ರಾಜಕೀಯವಾಗಿ ರಾಜ್ಯದ ನಿಲುವನ್ನು ಅಲ್ಲಿ ಸ್ಪಷ್ಟಪಡಿಸಿ ಅವರಿಗೆ ಮನವರಿಕೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಬುಧವಾರ ಮಾತನಾಡಿದ ಅವರು, ಈ ವಿಚಾರವಾಗಿ ಕರ್ನಾಟಕ ನಿಲುವು ಸ್ಪಷ್ಟವಾಗಿದೆ. ಗಡಿ ವಿಚಾರ ಬಗ್ಗೆ ನ್ಯಾಯಾಲಯದ ಬಗ್ಗೆ ಸಾಕಷ್ಟು ವಾದಗಳಾಗಿವೆ. ಹಲವಾರು ವರದಿಗಳು ಸಹ ಬಂದಿವೆ. ಈ ವಿಷಯ ನ್ಯಾಯಾಲಯದಲ್ಲಿ ಇರುವುದರಿಂದ ನಾನು ಈ ಬಗ್ಗೆ ಮಾತನಾಡಲ್ಲ ಎಂದರು.
ಮಹದಾಯಿ ವಿಚಾರವಾಗಿ ರಕ್ತದಲ್ಲಿ ಪತ್ರ ಬರೆದಕ್ಕಾಗಿ ಯೋಜನೆ ನಾನು ಆರಂಭಿಸಿದ್ದೇನೆ. ನೀರಾವರಿ ಸಚಿವನಿದ್ದಾಗ ೫.೫ ಕಿಮೀ ಸಹ ಮಾಡಲಾಗಿದೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಗೋವಾದಲ್ಲಿ ಕರ್ನಾಟಕಕ್ಕೆ ಒಂದು ಹನಿ ನೀರು ಬಿಡಬೇಡಿ ಎಂದು ಹೇಳಿಕೆ ನೀಡಿದರು. ಕಾಂಗ್ರೆಸ್ ಸರ್ಕಾರ ಕರ್ನಾಟಕ ಮಹದಾಯಿ ನೀರು ತರುವ ಕೆನಾಲಗೆ ಗೋಡೆ ಕಟ್ಟಿದ್ದರು ಎಂದು ತಿಳಿಸಿದರು