DISTRICT:
ಪ್ರಸ್ತುತ ದಕ್ಷಿಣದಿಂದ ಉತ್ತರಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ನಡೆಯುತ್ತಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಈ ಯಾತ್ರೆ ನಡೆಯಲಿದೆ. ಈ ನಡುವೆ ಪುನಃ ಭಾರತ್ ಜೋಡೋ ಯಾತ್ರೆ ನಡೆಸುವುದಾಗಿ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.
ಆದರೆ ಈ ಯಾತ್ರೆ 2024ರ ಲೋಕಸಭೆ ಚುನಾವಣೆಗೂ ಮುನ್ನ ನಡೆಯಲಿದೆಯಂತೆ. ಭಾರತದ ಪೂರ್ವ ಭಾಗಗಳಿಂದ ಪಶ್ಚಿಮ ಭಾಗದವರೆಗೂ ಭಾರತ್ ಜೋಡೋ ಯಾತ್ರೆ ಆಯೋಜಿಸಲಾಗುವುದು ಎಂದು ಕಾಂಗ್ರೆಸ್ ನಾಯಕ ವಿಭಾಕರ ಶಾಸ್ತ್ರಿ ಹೇಳಿದ್ದಾರೆ. ಪ್ರಸ್ತುತ ಅವರು ಭಾರತ್ ಜೋಡೋ ಯಾತ್ರಾ ರಾಜಸ್ಥಾನದ ಉಸ್ತುವಾರಿ ವಹಿಸಿದ್ದಾರೆ.
ಪೂರ್ವದಿಂದ ಪಶ್ಚಿಮಕ್ಕೆ ರ್ಯಾಲಿ ನಡೆಸುವ ಪ್ರಸ್ತಾವವೂ ಇದೆ. ಅದಕ್ಕಾಗಿ ರಸ್ತೆ ನಕ್ಷೆ ತಯಾರಿಸುತ್ತಿದ್ದೇವೆ. ಲೋಕಸಭೆ ಚುನಾವಣೆಗೂ ಮುನ್ನ ಈ ರ್ಯಾಲಿ ನಡೆಯಲಿದೆ ಎಂದು ಮಾಧ್ಯಮಗಳಿಗೆ ತಿಳಿಸಿದರು. ರಾಜಕೀಯ ಮೀರಿ ಭಾರತ್ ಜೋಡೋ ಯಾತ್ರೆ ಹಮ್ಮಿಕೊಳ್ಳಲಾಗುತ್ತಿದ್ದು, ಈ ಮೂಲಕ ದೇಶದ ಸೌಹಾರ್ದತೆಯನ್ನು ಹೆಚ್ಚಿಸುತ್ತಿದ್ದೇವೆ ಎಂದರು.
ಸದ್ಯ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಡಿಸೆಂಬರ್ ಮೊದಲ ವಾರದಲ್ಲಿ ರಾಜಸ್ಥಾನ ಪ್ರವೇಶಿಸಲಿದೆ. ಅಲ್ಲದೆ, ಅಲ್ವಾರ್ ಜಿಲ್ಲೆಯ ಮಳಖೇಡದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನು ಆಯೋಜಿಸಲಾಗುತ್ತಿದೆ ಎಂಬುದಾಗಿ ತಿಳಿಸಿದರು.