DISTRICT:
ಕೊಡವರಿಗೆ ಕೋವಿಯ ಜೊತೆ ಅವಿನಾಭಾವ ಸಂಬಂಧವಿದೆ. ಮನೆಯಲ್ಲಿ ಸಂಭ್ರಮವಿದ್ರು, ಸೂತಕವಿದ್ರು ಗಾಳಿಯಲ್ಲಿ ಗುಂಡು ಹಾರಿಸಿ ಗೌರವ ಸಲ್ಲಿಸುತ್ತಾರೆ. ಕೊಡವರಲ್ಲಿ ಪೂಜ್ಯನೀಯ ಭಾವ ಹೊಂದಿರುವ ಕೋವಿಗೆ ವಿಶೇಷ ಸ್ಥಾನವಿದೆ. ಇದೀಗ ಕೊಡವರ ಕೋವಿಯ ಹಕ್ಕನ್ನೇ ಪ್ರಶ್ನಿಸಿ ಅರೆಭಾಷೆ ಗೌಡ ಜನಾಂಗದ ನಿವೃತ್ತ ಕ್ಯಾಪ್ಟನ್ ವೈ.ಕೆ.ಚೇತನ್ ಎಂಬುವವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಕೋವಿ ಕೊಡವರ ಮತ್ತು ಅರೆಭಾಷೆ ಗೌಡ ಜನಾಂಗಗಳ ನಡುವೆ ದ್ವೇಷ ಮನೋಭಾವ ಹುಟ್ಟುವಂತೆ ಮಾಡಿತ್ತು. ಕೋವಿ ಕೊಡವರ ಹಕ್ಕು ಅದನ್ನು ಯಾವುದೇ ಅನುಮತಿ ಇಲ್ಲದೆ ಹೊಂದಬಹುದು ಮತ್ತು ಸಾಗಿಸಬಹುದು ಎಂದು ರಾಜ್ಯ ಸರ್ಕಾರ ತಿಳಿಸಿತ್ತು. ಜೊತೆಗೆ ರಾಜ್ಯ ಉಚ್ಚನ್ಯಾಯಾಲಯವು ಇದನ್ನೇ ಎತ್ತಿ ಹಿಡಿದಿತ್ತು.
ಇದೀಗ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಅರೆಭಾಷೆ ಗೌಡ ಜನಾಂಗದ ನಿವೃತ್ತ ಕ್ಯಾಪ್ಟನ್ ವೈ.ಕೆ.ಚೇತನ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಕ್ಯಾಪ್ಟನ್ ಚೇತನ್ ಅವರ ಮೇಲ್ಮನವಿಯನ್ನು ಪರಿಶೀಲಿಸಿರುವ ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ಅವರ ಪೀಠ, ಅನುಮತಿ ಇಲ್ಲದೆ ಕೋವಿ ಹೊಂದುವುದು ಮತ್ತು ಸಾಗಾಟ ಮಾಡುವುದು ಅಪರಾಧ. ಆದರೆ ಸಶಸ್ತ್ರ ಕಾಯ್ದೆ 41 ಪ್ರಕಾರ ಸಾರ್ವಜನಿಕರ ಹಿತಾಸಕ್ತಿಯಿಂದ ಕೋವಿ ಹೊಂದುವುದಕ್ಕೆ ವಿನಾಯಿತಿ ನೀಡಬಹುದು ಎಂದಿದ್ದಾರೆ.
ಇದರಿಂದ ಕೊಡವರಿಗೆ ಆತಂಕ ಶುರುವಾಗಿದೆ. ತಲತಲಾಂತರಗಳಿಂದ ಸಾಂಪ್ರದಾಯಿಕವಾಗಿ ಹೊಂದಿದ್ದ ಕೋವಿಯ ಹಕ್ಕನ್ನು ಉಳಿಸಿಕೊಳ್ಳಲು ಕೊಡವರು ಮತ್ತೆ ಕಾನೂನು ಹೋರಾಟ ನಡೆಸಬೇಕಿದೆ.