ಬಿಡುಗಡೆಯಾದ ಮೊದಲ ದಿನವೇ ₹3 ಕೋಟಿ ಗಳಿಕೆ ಕಂಡ 'ಬನಾರಸ್

ಬಿಡುಗಡೆಯಾದ ಮೊದಲ ದಿನವೇ ₹3 ಕೋಟಿ ಗಳಿಕೆ ಕಂಡ 'ಬನಾರಸ್

ಬೆಂಗಳೂರು: ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಅವರ ಪುತ್ರ ಝೈದ್ ಖಾನ್ ನಾಯಕನಾಗಿ ನಟಿಸಿರುವ 'ಬನಾರಸ್' ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನ.4ರಂದು ಶುಕ್ರವಾರ ದೇಶದಾದ್ಯಂತ ತೆರೆಕಂಡಿರುವ 'ಬನಾರಸ್' ಸಿನಿಮಾ ₹3 ಕೋಟಿ ಗಳಿಸಿದೆ ಎಂದು ವರದಿಯಾಗಿದೆ.

ಎರಡನೇ ದಿನವಾದ ಇಂದು (ಶನಿವಾರ) ಈವರೆಗಿನ ಮಾಹಿತಿ ಪ್ರಕಾರ ₹40 ಲಕ್ಷ ಗಳಿಕೆ ಕಂಡಿದೆ.

ಜಯತೀರ್ಥ ನಿರ್ದೇಶನದ ಈ ಚಿತ್ರದಲ್ಲಿ ಝೈದ್ ಖಾನ್‌ಗೆ ನಾಯಕಿಯಾಗಿ ಸೋನಲ್‌ ಮೊಂತೆರೋ ಅಭಿನಯಿಸಿದ್ದಾರೆ. ಸುಜಯ್‌ ಶಾಸ್ತ್ರಿ, ದೇವರಾಜ್‌, ಅಚ್ಯುತ್‌ ಕುಮಾರ್‌, ಸ್ವಪ್ನ ರಾಜ್‌ ಮತ್ತಿತರರು ನಟಿಸಿದ್ದಾರೆ.

ತಿಲಕ್ ರಾಜ್ ಬಲ್ಲಾಳ್ ಅವರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ನಟ, ದಿವಂಗತ ಪುನೀತ್ ರಾಜ್‌ಕುಮಾರ್ ಅಭಿನಯದ 'ಗಂಧದಗುಡಿ' ಹಾಗೂ ನಟ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ 'ಕಾಂತಾರ' ಸಿನಿಮಾ ತೆರೆಕಂಡಿದ್ದು, 'ಬನಾಸರ್‌' ಚಿತ್ರಕ್ಕೆ ಚಿತ್ರಮಂದಿರಗಳ ಕೊರತೆ ಎದುರಿಸುವಂತಾಗಿದೆ.