5 ಭಾಷೆಗಳಲ್ಲಿ ಇಂದು ಬಿಡುಗಡೆಯಾಗಲಿದೆ 'ಬನಾರಸ್' ಚಿತ್ರ 

5 ಭಾಷೆಗಳಲ್ಲಿ ಇಂದು ಬಿಡುಗಡೆಯಾಗಲಿದೆ 'ಬನಾರಸ್' ಚಿತ್ರ 

ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ಅಭಿನಯದ 'ಬನಾರಸ್' ಇಂದು ಬಿಡುಗಡೆಯಾಗಲಿದೆ.

ದೇಶದ ಒಂದು ಸಾವಿರಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಪ್ರದರ್ಶನ ಕಾಣಲಿರುವ ಝೈದ್ ಖಾನ್ ಅವರ ಚೊಚ್ಚಲ ಸಿನಿಮಾ 5 ಭಾಷೆಗಳಲ್ಲಿ ತೆರೆ ಕಾಣಲಿದೆ.

ಜಯತೀರ್ಥ ನಿರ್ದೇಶನದ 'ಬನಾರಸ್' ಚಿತ್ರದಲ್ಲಿ ಸೋನಲ್ ಮೊಂತೆರೋ ನಾಯಕಿಯಾಗಿದ್ದಾರೆ. ಪ್ಯಾನ್ ಇಂಡಿಯಾ ಚಿತ್ರ ಇದಾಗಿದ್ದು, ತಿಲಕರಾಜ್ ಬಲ್ಲಾಳ್ ನಿರ್ಮಾಣ ಮಾಡಿದ್ದಾರೆ.

ಕರ್ನಾಟಕದಲ್ಲಿ 125 ಸಿಂಗಲ್ ಸ್ಕ್ರೀನ್, 50 ಮಲ್ಟಿಪ್ಲೆಕ್ಸ್, ಹಿಂದಿಯಲ್ಲಿ 500 ಸ್ಕ್ರೀನ್, ತೆಲುಗು 300 ಸ್ಕ್ರೀನ್, ತಮಿಳುನಾಡಿನಲ್ಲಿ 250 ಸ್ಕ್ರೀನ್ ಮತ್ತು ಕೇರಳದಲ್ಲಿ 120 ಸ್ಕ್ರೀನ್ ಗಳಲ್ಲಿ ಚಿತ್ರ ತೆರೆ ಕಾಣಲಿದೆ.