DISTRICT: ಬೆಳಗಾವಿ: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಇಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಇಂದು ಹಿಂಡಲಗಾ ಪೆಟ್ರೋಲ್ ಬಂಕ್ ಎದುರು ವಿನೂತನವಾಗಿ ಪ್ರತಿಭಟಿಸಿದ್ರು. ಸ್ವತಃ ಬೈಕ್ ಗೆ ಪೆಟ್ರೋಲ್ ಹಾಕಿ,ಪೆಟ್ರೋಲ್, ಡಿಸೈಲ್ ಬೆಲೆ ಏರಿಕೆಯಿಂದ ಗ್ರಾಹಕರಿಗೆ ಆಗುತ್ತಿರುವ ಕಷ್ಟವನ್ನು ವಿಚಾರಿಸಿದ್ರು. ನಂತರ ಬೈಕ್ ಒಂದನ್ನು ಪೆಟ್ರೋಲ್ ಬಂಕ್ ಎದುರು ಮಲಗಿಸಿ, ಅದಕ್ಕೆ ಹೂವಿನ ಹಾರ ಹಾಕಿ ಅಂತ್ಯಸಂಸ್ಕಾರದ ಅಣಕು ಪ್ರದರ್ಶನ ಮಾಡುವ ಮೂಲಕ ಪ್ರತಿಭಟಿಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ಅವರು,ಕೇಂದ್ರದಲ್ಲಿರುವ ನರೇಂದ್ರ ಮೋದಿ ಸರ್ಕಾರ,2014 ರಲ್ಲಿ ಪೆಟ್ರೋಲ್ ಡಿಸೈಲ್ ಬೆಲೆ ಕಡಿಮೆ ಮಾಡುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದಿದೆ. ಇವತ್ತು ಪೆಟ್ರೋಲ್, ಡಿಸೈಲ್, ಅಡುಗೆ ಅನೀಲದ ಬೆಲೆ ಯಾವ ಮಟ್ಟದಲ್ಲಿ ಏರಿಕೆ ಆಗಿದೆ ಅನ್ನೋದನ್ನು ಜನ ಅರ್ಥ ಮಾಡಿಕೊಳ್ಳಬೇಕು,ಪ್ರಧಾನಿ ನರೇಂದ್ರ ಮೋದಿ ಹೇಳಿದ್ದೇನು? ಮಾಡಿದ್ದೇನು? ಅನ್ನೋದ ಈಗ ಗೊತ್ತಾಗುತ್ತಿದೆ.ಎಂದು ಲಕ್ಷ್ಮೀ ಹೆಬ್ಬಾಳಕರ ಕೇಂದ್ರ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ಮಾಡಿದ್ರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಚನ್ನಮ್ಮ ವೃತ್ತದಲ್ಲರುವ ಪೆಟ್ರೀಲ್ ಬಂಕ್ ಬಳಿ ಪ್ರತಿಭಟಿಸಿದರು.ಮಹಿಳಾ ಕಾಂಗ್ರೆಸ್ ನವರು ಫೋರ್ಟ್ ರಸ್ತೆಯ ಪೆಟ್ರೋಲ್ ಬಂಕ್ ಬಳಿ,ನಗರ ಕಾಂಗ್ರೆಸ್ ಅಧ್ಯಕ್ಷ ರಾಜು ಸೇಠ,ಯಮನಾಪೂರ ಪೆಟ್ರೋಲ್ ಬಂಕ್ ಬಳಿ,ಯುಥ್ ಕಾಂಗ್ರೆಸ್ ಕಾರ್ಯಕರ್ತರು ಆಝಂ ನಗರ ಪೆಟ್ರೋಲ್ ಬಂಕ್ ಬಳಿ ,ಪಟ್ರೋಲ್ ,ಡಿಸೈಲ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟಿಸಿದರು.