DISTRICT: ಬೆಳಗಾವಿ: ಜಿಲ್ಲೆಯ ವಿವಿಧೆಡೆ ಕಳ್ಳತನ ಮಾಡುತ್ತಿದ್ದ ಹತ್ತು ಜನ ಡಕಾಯತರನ್ನ ಹೇಡೆಮುರಿ ಕಟ್ಟುವಲ್ಲಿ ಅಥಣಿ ಪೋಲಿಸ್ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಕಳೆದ ತಿಂಗಳ ಇಪ್ಪತ್ತೆಳರಂದು ಅಥಣಿ ಹೊರವಲಯದಲ್ಲಿರುವ ವೆಂಕಟೇಶ ಬ್ರ್ಯಾಂಡಿ ಶಾಪ ಕಾವಲುಗಾರನ ಕೈ ಕಾಲು ಕಟ್ಟಿ ಮದ್ಯದಂಗಡಿಯಲ್ಲಿದ್ದ ಅಂದಾಜು ಒಂದುವರೆ ಲಕ್ಷ ರೂಪಾಯಿ ಮೌಲ್ಯದ ಮುವತ್ತು ಬಾಕ್ಸ್ ಮದ್ಯ ಕಳುವು ಮಾಡಿದ್ದಲ್ಲದೆ, ಕುಡಚಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಗ್ಯಾಸ್ ಕಟರ್ ಬಳಸಿ ಎಟಿಎಂ ಮೆಷಿನ್ ಒಡೆಯಲು ಯತ್ನಿಸಿದ ದರೋಡೆಕೋರನ್ನ ಅಥಣಿ ಪೋಲಿಸರು ಬಂಧಿಸಿದ್ದಾರೆ. ದರೋಡೆಗೆ ಬಳಸಿದ ನಾಲ್ಕು ಬೈಕ್ ಒಂದು ಕಾರ ಒಂದು ಗ್ಯಾಸ ಸಿಲಿಂಡರ್ ಒಂದು ಆಕ್ಸಿಜನ್ ಸಿಲಿಂಡರ್ ಸೇರಿದಂತೆ ಕಳವು ಮಾಡಿದ ಮುವತ್ತು ಮದ್ಯದ ಬಾಕ್ಸ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.