DISTRICT: ಬೆಳಗಾವಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ ಹಿನ್ನೀರು ಪ್ರದೇಶದಲ್ಲಿ ಅಕ್ರಮ ಮರಳು ಅಡ್ಡೆ ಮೇಲೆ ದಾಳಿ ಮಾಡಿದ ಅಧಿಕಾರಿಗಳ ಮೇಲೆ ಕಲ್ಲುತೂರಿದ ದಂಧೆಕೋರರು ಗುರುವಾರ ಸಂಜೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮರಳು ಅಡ್ಡೆ ಮೇಲೆ ದಾಳಿ ಮಾಡಿದ್ದರು. ಈ ವೇಳೆ ಅಧಿಕಾರಿಗಳ ಕಾರಿನ ಮೇಲೆ 20 ಜನರಿಂದ ಕಲ್ಲು ತೂರಾಟ ನಡೆಸಿದ್ದಾರೆ. ಇಲಾಖೆಗೆ ಸೇರಿದ ಒಂದು ಟಾಟಾಸುಮೋ ವಾಹನದ ಕಾಜುಗಳು ಪುಡಿ ಪುಡಿ ಮಾಡಲಾಗಿದ್ದು, ಕಲ್ಲುತೂರುತ್ತಿದ್ದಂತೆ ಜೀವಭಯದಿಂದ ಹೊರ ಬಂದಿದ್ದ ಅಧಿಕಾರಿಗಳು, ಡ್ರೈವರ್ ಸೇರಿ ಮೂರು ಜನ ಅಧಿಕಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗವೆ. ಈ ಕುರಿತು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.