DISTRICT:
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಉಲ್ಪಣಗೊಂಡಿರುವ ಕೋವಿಡ್ ಪ್ರಕರಣಗಳ ನಡುವೆ ಸಂಸತ್ತಿನ ಬಜೆಟ್ ಅಧಿವೇಶನ ಇದೇ ಜನವರಿ 31ರಿಂದ ಆರಂಭವಾಗಲಿದೆ. ಈಗಾಗಲೇ ನಿಗದಿಯಾಗಿರುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ ಒಂದರಂದು 2022- 23 ನೇ ಸಾಲಿನ ಮುಂಗಡಪತ್ರವನ್ನು ಸಂಸತ್ತಿನಲ್ಲಿ ಮಂಡಿಸಲಿದ್ದಾರೆ.
ಬಜೆಟ್ ಕುರಿತಂತೆ ಈಗಾಗಲೇ ಸಚಿವರು ಹಲವು ಸುತ್ತಿನ ಪೂರ್ವಭಾವಿ ಸಭೆ ನ್ನು ನಡೆಸಿದ್ದಾರೆ. ಈ ನಡುವೆ ದೆಹಲಿ ಸೇರಿದಂತೆ ದೇಶಾದ್ಯಂತ ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಂಸತ್ ಆಧಿವೇಶನವನ್ನು ಎರಡು ಪಾಳಿಯಲ್ಲಿ ನಡೆಸುವುದು ಸೂಕ್ತ ಎಂದು ಸಂಸದೀಯ ವ್ಯವಹಾರಗಳ ಸಮಿತಿ ಸಲಹೆ ಮಾಡಿದೆ.
ಬೆಳಗಿನ ಪಾಳಿಯಲ್ಲಿ ರಾಜ್ಯಸಭೆ ಕಲಾಪ, ಮಧ್ಯಾಹ್ನ ಲೋಕಸಭೆ ಕಲಾಪ ನಡೆಸುವುದು ಸೂಕ್ತ ಎಂದೂ ಸಮಿತಿ ಅಭಿಪ್ರಾಯಪಟ್ಟಿದೆ.