DISTRICT: ಬೆಳಗಾವಿ: ಸಿ.ಡಿ ಪ್ರಕರಣದಲ್ಲಿ ಈಗಾಗಲೇ ರಮೆಶ್ ಜಾರಕಿಹೊಳಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ. ಈ ಮಧ್ಯೆ, ಸಂತ್ರಸ್ತ ಯುವತಿ ಕುಟುಂಬಸ್ಥರಿಗೆ ಸಿಸಿಬಿ ಪೊಲೀಸರು ನೊಟೀಸ್ ಜಾರಿಮಾಡಿದ್ದಾರೆ. ಲಾಕ್ಡೌನ್ ಬಳಿಕ ವಿಚಾರಣೆಗೆ ಹಾಜರಾಗುವಂತೆ ಸಂತ್ರಸ್ತ ಯುವತಿ ಪೋಷಕರಿಗೆ ನೊಟೀಸಿನಲ್ಲಿ ಸೂಚಿಸಲಾಗಿದೆ. ತಮ್ಮ ಮಗಳು ಕಿಡ್ನ್ಯಾಪ್ ಆಗಿರುವುದಾಗಿ ಪೋಷಕರು ದೂರು ಕೊಟ್ಟಿದ್ದರು. ಬೆಳಗಾವಿ ಎಪಿಎಂಸಿ ಠಾಣೆಗೆ ಅವರು ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿತ್ತು. ಈವರೆಗಿನ ಹೇಳಿಕೆಗಳಿಗೆ ವಿರುದ್ಧವಾಗಿ ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಸಂತ್ರಸ್ತೆ ಕುಟುಂಬಸ್ಥರ ಪ್ರತಿಕ್ರಿಯೆ ಹೇಗಿರಬಹುದೆಂಬುದು ಕುತೂಹಲ ಕೆರಳಿಸಿದೆ.