DISTRICT:
ಮಂಗಳೂರು: ಕೈಗಾರಿಕಾ ಸಂಸ್ಥೆಯೊಂದು ಫಲ್ಗುಣಿ ನದಿಗೆ ಅಡ್ಡಲಾಗಿ ಅಪಾಯಕಾರಿ ರಾಸಾಯನಿಕ ತ್ಯಾಜ್ಯ ಹರಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಲೋಕಾಯುಕ್ತ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ.
ಮಂಗಳೂರಿನ ಕೈಗಾರಿಕಾ ಸಂಸ್ಥೆ ಎಂಆರ್ ಪಿಎಲ್ ನಿಂದ ಹೊಳೆ ಮತ್ತು ಫಲ್ಗುಣಿ ನದಿಗೆ ಅಡ್ಡಲಾಗಿ ಅಪಾಯಕಾರಿ ರಾಸಾಯನಿಕ ತ್ಯಾಜ್ಯ ಹರಿಸುತ್ತಿದೆ ಎನ್ನಲಾಗಿದ್ದು, ಪ್ರಕರಣದ ಕುರಿತು ನ.2ರೊಳಗೆ ಸೂಕ್ತ ಹೇಳಿಕೆ, ವಸ್ತುಸ್ಥಿತಿ ವರದಿ ಹಾಗೂ ಜಲಮೂಲ ಕಲುಷಿತವಾಗಿರುವುದನ್ನು ತಡೆಗಟ್ಟಲು ಕೈಗೊಂಡ ಕ್ರಮಗಳ ಕುರಿತ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳ ಸಹಿತ ವಿವಿಧ ಅಧಿಕಾರಿಗಳಿಗೆ, ಎಂಆರ್ ಪಿಎಲ್ ಎಂಡಿ ಗೆ ನೊಟೀಸ್ ಜಾರಿಗೊಳಿಸಿದೆ