DISTRICT: ಚಿಕ್ಕಮಗಳೂರು: ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ಡೌನ್ ವಿಧಿಸಿದ್ದರೂ ಸಹ ಕೋವಿಡ್ ನಿಯಂತ್ರಣ ಮಾಡುವಲ್ಲಿ ಜಿಲ್ಲಾಡಳಿತ ವಿಫಲವಾಗಿರುವುದಕ್ಕೆ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರು ವಿಡಿಯೋ ಕಾನ್ಫರೆನ್ಸ್ನಲ್ಲಿ ಜಿಲ್ಲಾಡಳಿತಕ್ಕೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಕರೋನಾ ಪಾಸಿಟಿವಿಟಿ ತಗ್ಗಿಸುವಲ್ಲಿ ವಿಫಲವಾಗಿದ್ದಕ್ಕೆ ಸಿ.ಎಂ.ಯಡಿಯೂರಪ್ಪ ಬೇಸರ ವ್ಯಕ್ತಪಡಿಸಿದರು. ಜಿಲ್ಲಾಡಳಿತ ಎಡವಿದ್ದೆಲ್ಲಿ ಎಂಬುದರ ಕುರಿತು ಪೂರ್ಣ ಮಾಹಿತಿ ನೀಡುವಂತೆ ಸಚಿವ ಸುಧಾಕರ್ ಸೂಚಿಸಿದರು. ಪ್ರವಾಸಿ ತಾಣಗಳಿಗೆ ಹೇರುವ ನಿರ್ಬಂಧಕ್ಕೆ ಅಧಿಕಾರ ನೀಡುವಂತೆ ಮನವಿ ಮಾಡಿರುವ ಜಿಲ್ಲಾಧಿಕಾರಿ ಮುಂದಿನ ಎರಡು ವಾರದೊಳಗೆ ಸಂಪೂರ್ಣ ನಿಯಂತ್ರಣವಾಗುವುದು ಎಂದು ತಿಳಿಸಿದರು. ಪರಿಸ್ಥಿತಿ ಬಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಅಂಗಾರ ಮಾಹಿತಿ ನೀಡಿದ್ದಾರೆ. ಆರೋಗ್ಯ ಸಚಿವರು ನಾಳೆ ಭೇಟಿ: ಜಿಲ್ಲೆ ಪರಿಸ್ಥಿತಿ ತಿಳಿದು ಆರೋಗ್ಯ ಸಚಿವರು, ವೈದ್ಯಕೀಯ ಇಲಾಖೆ ಶಿಕ್ಷಣ ಸಚಿವ ಸುಧಾಕರ್ ಶುಕ್ರವಾರ ಮಧ್ಯಾಹ್ನ ಜಿಲ್ಲಾ ಕೇಂದ್ರದ ಆಸ್ಪತ್ರೆ, ಕೋವಿಡ್ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.