ಈ ಕ್ಷಣ :

ಸುಗ್ಗಿ ಉತ್ಸವಗಳಿಗೆ ಕೊರೋನಾ ಬ್ರೇಕ್; ಮನೆಯಲ್ಲೇ ಹಬ್ಬ ಆಚರಿಸಿದ ಗ್ರಾಮಸ್ಥರು

Published 15 ಮಾರ್ಚ್ 2023, 21:47 IST
Last Updated 6 ಮೇ 2023, 12:45 IST
ಸ್ನೇಹಿತನ ಕತ್ತು ಕೊಯ್ದು ರಕ್ತ ಕುಡಿದ ಕಿರಾತಕ! ಬೆಚ್ಚಿಬಿದ್ದ ಚಿಂತಾಮಣಿ

DISTRICT: ಬರಹ: ಕಿರುಗುಂದ ರಫೀಕ್ ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಸುಗ್ಗಿಹಬ್ಬಬಂತೆಂದರೆ ಮನೆಮನೆಗಳಲ್ಲಿ ಸಂಭ್ರಮ, ಸಡಗರ ಏರ್ಪಡುತ್ತಿತ್ತು. ಆದರೆ ಚೀನಿ ವೈರಸ್ಸಿನ ಕಾಟದಿಂದಾಗಿ ಸುಗ್ಗಿ ಉತ್ಸವಗಳಿಗೆ ಕಳೆದ ವರ್ಷದಿಂದಎರಡು ಬಾರಿ ಬ್ರೇಕ್ ಬಿದ್ದಂತಾಗಿದೆ. ಪ್ರತಿಯೊಬ್ಬರೂ ಮನೆಯಲ್ಲೇ ಇದ್ದು ಸಾಂಕೇತಿಕವಾಗಿ ಹಬ್ಬಆಚರಿಸಿದ್ದಾರೆ. ಬಡವ-ಬಲ್ಲಿದನೆನ್ನದೆ ಪ್ರತಿಯೊಬ್ಬರಮನೆಯಲ್ಲೂಒಂದೇ ತೆರನಾಗಿ ಆಚರಿಸುವ ಹಬ್ಬವಿದು.ಮನೆಯೊಳಗಿನ ಮಡಿಕೆ, ಪಾತ್ರೆ, ಹಾಸಿಗೆ ಎಲ್ಲವನ್ನೂಹೊರಹಾಕಿ ಇಡೀ ಮನೆಯನ್ನೇಶುಭ್ರಗೊಳಿಸಲಾಗುತ್ತದೆ. ಹಾಸಿಗೆಯ ಬದಲುಚಾಪೆಯಲ್ಲಿ ಮಲಗಬೇಕು. ಪಾದರಕ್ಷೆಗಳನ್ನುಧರಿಸುವಂತಿಲ್ಲ. ಎಲ್ಲರೂ ಬಿಳಿ ವಸ್ತç ಧರಿಸಬೇಕು.ಮಾಂಸಾಹಾರವನ್ನು ತ್ಯಜಿಸಿ ಹುಳಿಸಾರು ಅನ್ನಸೇವಿಸುವುದು ಪದ್ಧತಿಯಾಗಿದೆ. [video width="640" height="352" mp4="http://24x7livekannada.com/wp-content/uploads/2021/05/su.mp4"][/video] ಮೂಡಿಗೆರೆ ತಾಲೂಕಿನ ಕೋಳೂರು ಸಾವಿರವ್ಯಾಪ್ತಿಯಲ್ಲಿರುವ ಫಲ್ಗುಣಿ, ಬೆಟ್ಟಗೆರೆ, ಸಬ್ಬೇನಹಳ್ಳಿ,ಕೋಳೂರು, ಬಡವನದಿಣ್ಣೆ, ಹೊರಟ್ಟಿ, ಬಕ್ಕಿ ಕೆಂಜಿಗೆ, ಭಾರತೀಬೈಲು, ಬಿ.ಹೊಸಹಳ್ಳಿ, ಬಾನಹಳ್ಳಿ,ಬೆಳಗೋಡು, ಕನ್ನಗೆರೆ ಗ್ರಾಮಸ್ಥರು ಸೇರಿ ಸುಗ್ಗಿಹಬ್ಬಆಚರಿಸುತ್ತಾರೆ. ಇಲ್ಲಿ ದೇವಿಯ ಭಕ್ತಾದಿಗಳು 14ದಿನಗಳ ಕಾಲ ಹೊರಗೆ ಹೋಗಿ ಗುಡಿಸಲು ಕಟ್ಟಿ ಕಠಿಣವ್ರತದಿಂದಿದ್ದು, ಹಬ್ಬದ ಮುಂದಾಳತ್ವವ ವಹಿಸುತ್ತಾರೆ.ಇಬ್ಬರು ಮಡಿವಂತ ಭಕ್ತರು ದೇವಿಯ ಆಜ್ಞೆಯಂತೆನೇಗಿಲು ಕಟ್ಟಿ ಬನವನ್ನು ಉಳುತ್ತಾರೆ. ಈ ಮಣ್ಣಿನಪ್ರಸಾದವನ್ನು ಭಕ್ತರು ತಮ್ಮ ಮನೆಗೆ ಕೊಂಡೊಯ್ಯುವಪೂಜೆಯೇ ‘ಹೊನ್ನಾರʼ. ಈ ಹಬ್ಬಕ್ಕೆ ಮೊದಲು ಸುತ್ತಮುತ್ತಲ ಗ್ರಾಮದಭಕ್ತಾದಿಗಳು ವಿಶಿಷ್ಟ ಸ್ನಾನಕ್ಕಾಗಿ ಹೇಮಾವತಿನದಿಯಲ್ಲಿ ಮಿಂದುಕೊಳ್ಳುತ್ತಾರೆ. ಪದ್ಮಾವತಿ ದೇವಿಹೊನ್ನಾರದೊಂದಿಗೆ ಆರಂಭವಾಗಿರುವ ಈ ಹಬ್ಬಪದ್ಮಾವತಿ ಚೌತ, ಬಾಸಿನ ಸುಗ್ಗಿ, ಜಕ್ಕಳಿ ಈರಣ್ಣಗುಡಿಕೆಂಡೋತ್ಸವ, ಬೆಟ್ಟಗೆರೆ ಭೈರವೇಶ್ವರ ಚೌತ, ರಾಟವಾಣಜಾತ್ರೆ, ಮುಗ್ರಳ್ಳಿ ಕೆಂಡೋತ್ಸವ, ಹನುಮನಹಳ್ಳಿಹೊನ್ನಮ್ಮನ ಉಯ್ಯಾಲೆ ಹಬ್ಬದೊಂದಿಗೆ ಕೊನೆಯದಾಗಿ ಸೊಪ್ಪು ಒಪ್ಪಿಸುವ ಸಮರ್ಪಣೆ ಕಾರ್ಯಕ್ರಮ ನಡೆಯುತ್ತದೆ. ಫಲ್ಗುಣಿಯಲ್ಲಿ ಮುಗಿಹಬ್ಬ ಜಾತ್ರೆ ಹಾಗೂ ದೇವರ ಮನೆಯಲ್ಲಿ ಸೊಪ್ಪು ಒಪ್ಪಿಸುವ ಅಂದರೆ ಸುಗ್ಗಿ ಉತ್ಸವ ಸಮರ್ಪಣೆ ಮಾಡುವ ಕಾರ್ಯಕ್ರಮ ನಡೆಯುತ್ತದೆ. ಹೀಗೆ ತಾಲ್ಲೂಕಿನಾದ್ಯಂತ ವಿವಿಧ ಗ್ರಾಮಗಳಲ್ಲಿ ಸುಗ್ಗಿ ಸಂಭ್ರಮವನ್ನು ಗಮನಿಸಬಹುದಾಗಿರುತ್ತದೆ. ------------------------ [caption id="attachment_928" align="alignright" width="150"] ಸಂಪತ್ ಬೆಟ್ಟಗೆರೆ[/caption] “ಮಲೆನಾಡಿನ ಸಂಸ್ಕೃತಿ, ಜಾನಪದ ಹಾಗೂ ಜನಜೀವನದ ಭಾವನಾತ್ಮಕ ಸಂಬಂಧಗಳನ್ನು ಬೆಸೆಯುವ ಸೇತುವೆಯಾಗಿ ಸುಗ್ಗಿಹಬ್ಬಗಳು ಉತ್ಸವ, ಜಾತ್ರೆ ಸ್ವರೂಪದಲ್ಲಿ ಆಚರಿಸಲ್ಪಡುತ್ತವೆ. ಆದರೆ ಕಳೆದ ವರ್ಷದಿಂದ ಕೋವಿಡ್‌-19 ಸಂಕಷ್ಟದ ಕಾರಣದಿಂದ ಇಂತಹ ಐತಿಹಾಸಿಕ ಹಬ್ಬಗಳನ್ನು ಸಾರ್ವಜನಿಕವಾಗಿ ಆಚರಿಸಲು ಸಾಧ್ಯವಾಗಿಲ್ಲ. ಕೃಷಿ ಸಂಸ್ಕೃತಿಯನ್ನೂ ಪ್ರತಿಬಿಂಬಿಸುವ ಇವು ಮುಂದಿನ ವರ್ಷಗಳಲ್ಲಿ ಕೋವಿಡ್‌ ಸಂಕಷ್ಟ ಪರಿಹಾರವಾದ ನಂತರ ಮತ್ತೆ ಆಚರಿಸಲ್ಪಡುತ್ತವೆ ಎಂಬುದು ಸಧ್ಯದ ಆಶಯ” -ಡಾ.ಸಂಪತ್‌ ಬೆಟ್ಟಗೆರೆ, ಲೇಖಕರು

ಹೆಚ್ಚು ಓದಿದ ಸುದ್ದಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ
Published 22 ಡಿಸೆಂಬರ್ 2023, 23:16

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ
Published 22 ಡಿಸೆಂಬರ್ 2023, 23:14

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್
Published 31 ಮಾರ್ಚ್ 2023, 17:40

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ
Published 16 ಮಾರ್ಚ್ 2023, 14:45

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ
Published 16 ಮಾರ್ಚ್ 2023, 14:45

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ
Published 16 ಮಾರ್ಚ್ 2023, 14:45

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!
Published 16 ಮಾರ್ಚ್ 2023, 14:45

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್
Published 16 ಮಾರ್ಚ್ 2023, 14:45

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ
Published 16 ಮಾರ್ಚ್ 2023, 14:45

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!
Published 16 ಮಾರ್ಚ್ 2023, 14:45

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ
Published 16 ಮಾರ್ಚ್ 2023, 14:45

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ
Published 16 ಮಾರ್ಚ್ 2023, 14:45