DISTRICT: ಕೊರೊನಾ ಲಸಿಕೆ ಹಾಕುವುದರಲ್ಲಿ ರಾಜ್ಯಕ್ಕೆ ಮೈಸೂರು ಮೊದಲ ಸ್ಥಾನದಲ್ಲಿದೆ. 45 ವರ್ಷ ಮೇಲ್ಪಟ್ಟ 10 ಲಕ್ಷಕ್ಕೂ ಅಧಿಕ ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ. ಜಿಲ್ಲೆಯ 34,06,521 ಜನಸಂಖ್ಯೆಯಲ್ಲಿ – 24,75,988 ಜನರಿಗೆ ಲಸಿಕೆ ನೀಡಬೇಕಾಗಿದ್ದು, ಇಲ್ಲಿವರೆಗೂ 10,30,825 ಮಂದಿಗೆ ನೀಡಲಾಗಿದೆ. 45 ವರ್ಷ ಮೇಲ್ಪಟವರಿಗೆ ಮೊದಲ ಡೋಸ್ನಲ್ಲಿ ಶೇ. 73.54ರಷ್ಟು ಪ್ರಗತಿ ಸಾಧಿಸಿ ರಾಜ್ಯದಲ್ಲಿ ಮೈಸೂರು ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಎರಡನೇ ಡೋಸ್ 1,24,674 ಮಂದಿಗೆ ಹಾಕಲಾಗಿದೆ.ಅದೇ ರೀತಿ 18ರಿಂದ 44 ವರ್ಷದೊಳಗಿನವರಲ್ಲಿ ಇದುವರೆಗೂ 1,34,277 ಲಸಿಕೆ ಹಾಕಲಾಗಿದೆ. ಪ್ರತಿದಿನ ಸುಮಾರು 6,000 ಮಂದಿಗೆ ವ್ಯಾಕ್ಸಿನೇಷನ್ ಮಾಡಲಾಗುತ್ತಿದೆ.170 ಪ್ರಾಥಮಿಕ ಆರೋಗ್ಯ ಕೇಂದ್ರ, 6 ಸಾರ್ವಜನಿಕರ ಆಸ್ಪತ್ರೆಗಳು, ಜಿಲ್ಲಾ ಆಸ್ಪತ್ರೆ, ಮೆಡಿಕಲ್ ಆಸ್ಪತ್ರೆ, ಇಎಸ್ಐ, ರೈಲ್ವೆ ಹಾಗೂ ಬೀಡಿ ಕಾರ್ಮಿಕರ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಇನ್ನು, ಕೋವಿಡ್ ಎರಡನೇ ಅಲೆಯ ಅಬ್ಬರದಲ್ಲಿ ಮೈಸೂರು ನಗರದಲ್ಲೇ ಮೇ ತಿಂಗಳಲ್ಲಿ ಮೃತಪಟ್ಟವರ ಸಂಖ್ಯೆ ಒಂದು ಸಾವಿರ ದಾಟಿದೆ.