DISTRICT: ಚಿಕ್ಕಮಗಳೂರು: ಕಳಸ ತಾಲೂಕಿನ ಜನರ ಬೇಡಿಕೆಯಂತೆ ಕೋವಿಡ್ ಕೇರ್ ಸೆಂಟರ್ ಇಂದು ಆರಂಭಗೊಂಡಿತು.ಜಿಲ್ಲಾ ಉಸ್ತುವಾರಿ ಸಚಿವ ಎಸ್ ಅಂಗಾರ ಉದ್ಘಾಟಿಸಿದರು. ಈ ವೇಳೆ ಅವರು ಮಾತನಾಡಿ, ಎಲ್ಲೆಡೆ ಕೊರೋನ ವೈರಸ್ ವ್ಯಾಪಕವಾಗಿ ಹಬ್ಬುತ್ತಿದ್ದು, ಗ್ರಾಮೀಣ ಭಾಗದಲ್ಲೂ ಪರಿಸ್ಥಿತಿ ಕೈಮೀರಿದೆ. ಹೀಗಾಗಿ ಅಗತ್ಯವಿರುವಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲೇಬೇಕಾಗಿದೆ ಎಂದರು. ಕಳಸದ ಸಮುದಾಯ ಆರೋಗ್ಯ ಕೇಂದ್ರವನ್ನು ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ ಎಂದು ತಾಲೂಕು ಕೋವಿಡ್ ಅಧಿಕಾರಿ ಡಾ.ಮಧುಸೂದನ್ ತಿಳಿಸಿದರು. 10 ಆಕ್ಸಿಜನ್ ಬೆಡ್ ಮತ್ತು 20 ಸಾಮಾನ್ಯ ಬೆಡ್ ಗಳನ್ನು ಈ ಆಸ್ಪತ್ರೆ ಹೊಂದಿದೆ. ಲಸಿಕೆ ನೀಡುವ ಸ್ಥಳವನ್ನು ಪಕ್ಕದ ಗ್ರಾಪಂ ಮತ್ತು ಗ್ರಂಥಾಲಯದ ಆವರಣಕ್ಕೆ ಸ್ಥಳಾಂತರಿಸಲಾಗಿದೆ ಎಂದು ಮಾಹಿತಿ ನೀಡಿದರು. ವಿಧಾನಪರಿಷತ್ ಉಪ ಸಭಾಪತಿ ಎಂ ಕೆ ಪ್ರಾಣೇಶ್, ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿ, ಜಿಲ್ಲಾಧಿಕಾರಿ ರಮೇಶ್ ಮತ್ತಿತರರು ಇದ್ದರು.